'ರಿಯಲ್‌ ಮಿ X2' ಸ್ಮಾರ್ಟ್‌ಫೋನಿನ ಓಪೆನ್‌ ಸೇಲ್ ಆರಂಭ!

|

ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಗನೆ ನೆಲೆಯೂರಿರುವ ಚೀನಾ ಮೂಲದ ''ರಿಯಲ್‌ ಮಿ'' ಕಂಪನಿಯು ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಹಾಗಾಯೇ ಕಂಪನಿಯು ಇತ್ತೀಚಿಗೆ ರಿಯಲ್‌ ಮಿ X2 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್ ಖರೀದಿಸಲು ಗ್ರಾಹಕರು ಫ್ಲ್ಯಾಶ್‌ ಸೇಲ್‌ಗಾಗಿ ಕಾಯುವ ಅಗತ್ಯ ಇಲ್ಲ. ಏಕೆಂದರೇ ರಿಯಲ್‌ ಮಿ X2 ಫೋನ್ ಓಪೆನ್ ಸೇಲ್‌ನಲ್ಲಿ ಲಭ್ಯ.

ರಿಯಲ್‌ ಮಿ

ಹೌದು, ರಿಯಲ್‌ ಮಿ ಸ್ಮಾರ್ಟ್‌ಫೋನ್ ಕಂಪನಿಯು ರಿಯಲ್‌ ಮಿ X2 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಇದೀಗ ಈ ಸೇಲ್ ಓಪೆನ್ ಸೇಲ್ ಆರಂಭಿಸಿದೆ. 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 16,999ರೂ.ಗಳು ಆಗಿದ್ದು, ಹಾಗೂ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಫೋನ್ 18,999ರೂ.ಗಳಿಗೆ ಸಿಗಲಿದೆ. ಗ್ರಾಹಕರು ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ ಮಿ ತಾಣದಲ್ಲಿ ಖರೀದಿಸಬಹುದಾಗಿದೆ.

ಸ್ಮಾರ್ಟ್‌ಫೋನ್

ಇನ್ನು ರಿಯಲ್‌ ಮಿ X2 ಸ್ಮಾರ್ಟ್‌ಫೋನ್ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಜೊತೆಗೆ ಸೂಪರ್ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 2,340 x 1,080 ಆಗಿದೆ. 2.2GHz ವೇಗದ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಡ್ರೆನೊ 618 GPU ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ. ಆಂಡ್ರಾಯ್ಡ್‌ 9 ಪೈ ಓಎಸ್‌ನ ಸಪೋರ್ಟ್‌ ಪಡೆದಿದ್ದು, ಹೊಸ ಅಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಆಗುವ ಸೌಲಭ್ಯವನ್ನು ಒಳಗೊಂಡಿದೆ.

X2 ಸ್ಮಾರ್ಟ್‌ಫೋನ್

ಹಾಗೆಯೇ ರಿಯಲ್‌ ಮಿ X2 ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 8ಎಂಪಿಯ ಅಲ್ಟ್ರಾ ವೈಡ್‌ ಲೆನ್ಸ್‌ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾವು 2ಎಂಪಿಯ ಸೂಪರ್ ಮೈಕ್ರೋ ಹಾಗೂ ಡೆಪ್ತ್ ಸೆನ್ಸಾರ್ ಲೆನ್ಸ್‌ ಸಾಮರ್ಥ್ಯದಲ್ಲಿವೆ. ಜೊತೆಗೆ 32ಎಂಪಿಯ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ವೇಗದ ಚಾರ್ಜಿಂಗ್

ಇದರೊಂದಿಗೆ ರಿಯಲ್‌ ಮಿ X2 ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಜೊತೆಗೆ VOOC ಫ್ಲ್ಯಾಶ್‌ ಚಾರ್ಜ್ 4.0 ಹಾಗೂ 30W ಸಾಮರ್ಥ್ಯದ ವೇಗದ ಚಾರ್ಜಿಂಗ್ ಸಪೋರ್ಟ್‌ ಹೊಂದಿದೆ. ಇನ್ನು ವೈಫೈ, ಬ್ಲೂಟೂತ್, ಎಫ್‌ಎಮ್‌ ರೇಡಿಯೊ, ಜಿಪಿಎಸ್‌, ಹಾಟ್‌ಸ್ಪಾಟ್‌, ನಂತಹ ಇತ್ತೀಚಿಗಿನ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಪರ್ಲ್‌ ಬ್ಲೂ, ಪರ್ಲ್ ಗ್ರೀನ್ ಹಾಗೂ ಪರ್ಲ್ ವೈಟ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
There is no confirmation, if the Realme X2 will be on open sale permanently. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X