ಡಿಸ್ಕೌಂಟ್‌ನಲ್ಲಿ 'ರಿಯಲ್ ಮಿ X2 ಪ್ರೊ' ಖರೀದಿಸಲು ಇದುವೇ ರೈಟ್‌ಟೈಮ್!
ರಿಯಲ್ ಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ರಿಯಲ್ ಮಿ X2 ಪ್ರೊ ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್‌ಗಳಿಂದ ಹೆಚ್ಚು ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ 27,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಆದರೆ ಗ್ರಾಹಕರು ಇದೀಗ ಈ ಫೋನ್ ಅನ್ನು 23,999ರೂ.ಗಳಿಗೆ ಖರೀದಿಸಬಹುದಾಗಿದೆ. ಏಕೆಂದರೇ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಅದಕ್ಕೊಂದು ವೇದಿಕೆ ಕಲ್ಪಿಸಿದೆ.

ಹೌದು, ಫ್ಲಿಪ್‌ಕಾರ್ಟ್ ಸಂಸ್ಥೆಯು ಆಯೋಜಿಸಿರುವ ಬಿಗ್ ಶಾಪಿಂಗ್ ಡೇಸ್ ಸೇಲ್ ಮೇಳವು ಇದೀಗ ಚಾಲ್ತಿಯಲ್ಲಿದೆ. ಈ ಸೇಲ್ ಮೇಳದಲ್ಲಿ ರಿಯಲ್ ಮಿ ಎಕ್ಸ್ 2 ಸ್ಮಾರ್ಟ್‌ಫೋನ್ 6GB RAM + 64GB ಬೇಸ್ ವೇರಿಯಂಟ್ ಅನ್ನು ಗ್ರಾಹಕರು 23,999ರೂ.ಗಳಿಗೆ ಖರೀದಿಸಬಹುದಾಗಿದೆ. 4000ರೂ.ವರೆಗೂ ಎಕ್ಸ್‌ಚೇಂಜ್ ರಿಯಾಯಿತಿ ಲಭ್ಯ ಇದ್ದು, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೇಲೆ ಶೇ. 10% ಡಿಸ್ಕೌಂಟ್ ಹಾಗೂ ಇಎಮ್‌ಐ ಸೌಲಭ್ಯ ಲಭ್ಯವಾಗಲಿದೆ. ಅಂದಹಾಗೆ ಈ ಸೇಲ್ ಮೇಳವು ಇದೇ ಮಾರ್ಚ್.22(ನಾಳೆ)ಕೊನೆಯಾಗಲಿದೆ. ಹಾಗಾದರೆ ರಿಯಲ್ ಮಿ X2 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ಡಿಸೈನ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಯನ್ನು ಹೊಂದಿದೆ. 20:9 ಅನುಪಾತದಲ್ಲಿರುವ ಡಿಸ್‌ಪ್ಲೇಯು ಸೂಪರ್ AMOLED (E3) ಮಾದರಿಯನ್ನು ಪಡೆದಿದೆ. HRD 10+ ಗುಣಮಟ್ಟ ಬೆಂಬಲ ಇದ್ದು, 90Hz ರಿಫ್ರೇಶ್ ರೇಟ್ ಪಡೆದಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು 91.7% ಆಗಿದೆ. ಡಿಸ್‌ಪ್ಲೇ ರಕ್ಷಣೆಗೆ ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ. ಡಿಸ್‌ಪ್ಲೇ ಸುತ್ತಲೂ ಅಲ್ಯುಮಿನಿಯಮ್ ಫ್ರೇಮ್ ಹೊಂದಿದ್ದು, ಹಿಂಬದಿಯಲ್ಲಿಯೂ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಸಪೋರ್ಟ್ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB + 128GB ಮತ್ತು 12GB + 256GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸ್ಪೆಷಲ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ಸಾಮರ್ಥ್ಯದಲ್ಲಿದೆ. ಇನ್ನು ನಾಲ್ಕನೇ ಕ್ಯಾಮೆರಾವು 2ಎಂಪಿಯ ಸೆನ್ಸಾರ್ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಆಗಿದ್ದು, ಸೋನಿಯ IMX471 ಕ್ಯಾಮೆರಾ ಸೆನ್ಸಾರ್ ಪಡೆದಿದೆ.

ಬ್ಯಾಟರಿ ಪವರ್
'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 50W ಸೂಪರ್ VOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಕೇವಲ 35 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಪೂರ್ಣ ಚಾರ್ಜ್ ಪಡೆದುಕೊಳ್ಳುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಪಬ್‌ಜಿ ಅಂತಹ ಗೇಮ್ಸ್‌ಗಳಿಗೆ ಅತ್ಯತ್ತಮ ಬ್ಯಾಟರಿ ಬ್ಯಾಕ್‌ಅಪ್ ನೀಡಲಿದೆ. ಹಾಗೆಯೇ ಬ್ಲೂಟೂತ್, ವೈಫೈ, ಜಿಎಸ್‌ಪಿ, ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications








