Realme: ರಿಯಲ್‌ಮಿಯ ಈ ಫೋನ್‌ಗೆ ಬರೋಬ್ಬರಿ 40% ರಿಯಾಯಿತಿ! 256GB ಸ್ಟೋರೇಜ್... 64MP ಕ್ಯಾಮೆರಾ
ರಿಯಲ್‌ಮಿ ಫೋನ್‌ಗಳ (Realme phone) ವಿಭಾಗದಲ್ಲಿ ಬೆಲೆಗೆ ತಕ್ಕ ಫೀಚರ್ಸ್ ಅನ್ನು ಅಥವಾ ಅದಕ್ಕೂ ಮಿಗಿಲಾದ ಫೀಚರ್ಸ್ ಆಯ್ಕೆ ಕಾಣಬಹುದು. ಈ ನಡುವೆ ಮಾರುಕಟ್ಟೆಯಲ್ಲಿ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡಿದ್ದ ಈ ವಿಶೇಷ ಫೋನ್‌ಗೆ ಬರೋಬ್ಬರಿ 40% ರಿಯಾಯಿತಿ ನೀಡಲಾಗಿದೆ.
ಹೌದು, ರಿಯಲ್‌ಮಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೆಚ್ಚು ಸದ್ದು ಮಾಡಿದ್ದ ರಿಯಲ್‌ಮಿ X3 ಸೂಪರ್ ಜೂಮ್ (Realme X3 Super Zoom) ಸ್ಮಾರ್ಟ್‌ಫೋನ್‌ಗೆ ಭಾರೀ ಆಫರ್ ಇದೆ. ನೀವೇನಾದರೂ ಕ್ಯಾಮೆರಾ ಪ್ರಿಯರಾಗಿದ್ದು, ಅದರಲ್ಲೂ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಫೋನ್ ಹುಡುಕುತ್ತಿದ್ದರೆ ಈ ಫೋನ್ ಸೂಕ್ತವಾಗಿದೆ. ಇದು 256GB ಸ್ಟೋರೇಜ್ ಆಯ್ಕೆ ಹಾಗೂ 64MP ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್ ಇನ್ನಿತರೆ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ರಿಯಲ್‌ಮಿ X3 ಸೂಪರ್ ಜೂಮ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ ಸಾಮಾನ್ಯ ದರ 34,999 ರೂ.ಗಳಾಗಿದ್ದು, ಆದರೆ ನೀವು ಇದನ್ನು ಕೇವಲ 20,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಅಮೆಜಾನ್‌ನಲ್ಲಿ 40% ರಿಯಾಯಿತಿಯನ್ನು ನೀಡಲಾಗಿದೆ. ಇದರಿಂದ ನೀವು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ವಿನಿಮಯ ಆಫರ್ ಹಾಗೂ ಬ್ಯಾಂಕ್ ಆಫರ್ ಸಹ ಇದೆ. ವಿನಿಮಯ ಆಫರ್‌ನಲ್ಲಿ ನೀವು 19,750 ರೂ.ವರೆಗೂ ಹಣ ಉಳಿತಾಯ ಮಾಡಬಹುದು.
ಬ್ಯಾಂಕ್ ಆಫರ್ ವಿಚಾರಕ್ಕೆ ಬರುವುದಾದರೆ ನೀವು ಈ ಫೋನ್ ಅನ್ನು ಐಸಿಐಸಿಐ ಕ್ರೆಡಿಟ್ ಕಾರ್ಡ್ (ICICI Credit Card) ಬಳಕೆ ಮಾಡಿದ್ದೇ ಆದರೆ ಅದೂ ಸಹ ಇಎಮ್‌ಐ ವ್ಯವಹಾರ ಮಾಡಿದ್ರೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 750ರೂ. ವರೆಗೆ ತ್ವರಿತ ರಿಯಾಯಿತಿ ಸಿಗಲಿದ್ದು, ಅಮೆಜಾನ್‌ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 5% ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಬ್ಯಾಂಕ್ ಆಫರ್ ಅನ್ನು ನೀವು ಈ ವೇಳೆ ಪಡೆಯಬಹುದು.

ರಿಯಲ್‌ಮಿ X3 ಸೂಪರ್ ಜೂಮ್ ಡಿಸ್‌ಪ್ಲೇ ವಿವರ: ಈ ಫೋನ್‌ನ ಫೀಚರ್ಸ್ ವಿಚಾರಕ್ಕೆ ಬರುವುದಾದರೆ ಇದು 6.6 ಇಂಚಿನ ಫುಲ್ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1,080X 2,400 ಪಿಕ್ಸೆಲ್ ಸ್ಕ್ರೀನ್‌ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.
ರಿಯಲ್‌ಮಿ X3 ಸೂಪರ್ ಜೂಮ್ ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ (Qualcomm Snapdragon 855+) ಬಲ ಪಡೆದಿದ್ದು, ಇದು ಅಡ್ರಿನೋ 640 ಜಿಪಿಯುನೊಂದಿಗೆ ಪ್ಯಾಕ್ ಆಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಮೂಲಕ ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್ ಆಯ್ಕೆ ನೀಡಲಾಗಿದೆ.

ರಿಯಲ್‌ಮಿ X3 ಸೂಪರ್ ಜೂಮ್ ಪ್ರೊಸೆಸರ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಕ್ವಾಡ್ ಡಿಯರ್ ಕ್ಯಾಮೆರಾ ಹಾಗೂ ಎರಡು ಸೆಲ್ಫಿ ಕ್ಯಾಮೆರಾ ಹೊಂದಿದೆ. ಅಂದರೆ f/1.8 ರ ದ್ಯುತಿರಂಧ್ರದೊಂದಿಗೆ 64MP ಮುಖ್ಯ ಸೆನ್ಸರ್, 8MP ಪೆರಿಸ್ಕೋಪ್ ಲೆನ್ಸ್, f/2.3 ರ ದ್ಯುತಿರಂಧ್ರದೊಂದಿಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು f/2.4 ರ ದ್ಯುತಿರಂಧ್ರದೊಂದಿಗೆ 2MP ಮ್ಯಾಕ್ರೋ ಸೆನ್ಸರ್ ಪಡೆದಿದೆ, ಇದರೊಂದಿಗೆ f/2.5 ರ ದ್ಯುತಿರಂಧ್ರದೊಂದಿಗೆ 32MP ಸೆಲ್ಫಿ ಲೆನ್ಸ್, f/2.2 ರ ದ್ಯುತಿರಂಧ್ರದೊಂದಿಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 4,200mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.


Click it and Unblock the Notifications








