'ರಿಯಲ್‌ ಮಿ X50' 5G ಸ್ಮಾರ್ಟ್‌ಫೋನ್ ಲಾಂಚ್!..64ಎಂಪಿ ಕ್ಯಾಮೆರಾ!

|

ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಬಹುಬೇಗನೆ ಸ್ಥಾನ ಗಿಟ್ಟಿಸಿಕೊಂಡ ''ರಿಯಲ್ ಮಿ'' ಸಂಸ್ಥೆಯು ಅಧಿಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಬಹುನಿರೀಕ್ಷಿತ ಹೈ ಎಂಡ್ ಮಾದರಿಯ ''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ ಇದೀಗ ಲಾಂಚ್ ಆಗಿದ್ದು, ಮೊಬೈಲ್ ಮಾರುಕಟ್ಟೆ ರಿಯಲ್ ಮಿ ಕಂಪನಿಯತ್ತ ತಿರುಗಿ ನೋಡುವಂತೆ ಆಗಿದೆ.

ರಿಯಲ್ ಮಿ X50

ಹೌದು, ರಿಯಲ್ ಮಿ ಸಂಸ್ಥೆಯು ತನ್ನ ''ರಿಯಲ್ ಮಿ X50'' 5G ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಇಂದು(ಜ.7) ಬಿಡುಗಡೆ ಮಾಡಿದೆ. 5G ನೆಟವರ್ಕ, ಸ್ನ್ಯಾಪ್‌ಡ್ರಾಗನ್ 765, ಕ್ವಾಡ್‌ ಕ್ಯಾಮೆರಾ ಹಾಗೂ ಮುಖ್ಯ ಕ್ಯಾಮರಾ 64ಎಂಪಿ, ಡಿಸ್‌ಪ್ಲೇ ರೀಫ್ರೇಶ್‌ ರೇಟ್ 120Hz , ಕಲರ್ ಓಎಸ್‌ 7 ಸ್ಕಿನ್ ಈ ಸ್ಮಾರ್ಟ್‌ಫೋನಿನ ಅತೀ ಪ್ರಮೂಖ ಹೈಲೈಟ್ಸ್‌ಗಳಾಗಿ ಗುರುತಿಸಿಕೊಂಡಿವೆ. ಹಾಗಾದರೇ ''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಹಾಗೂ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್ ರೀಫ್ರೇಶ್ ರೇಟ್ 120Hz ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದೆ. ಗೇಮಿಂಗ್‌ಗೆ ಅತ್ಯುತ್ತಮ ಡಿಸ್‌ಪ್ಲೇ ಮಾದರಿ ಇದಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ 7nm ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765G ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಸಹ ಇದೆ. ಹಾಗೆಯೇ 8GB RAM ಮತ್ತು 128GB ಆಂತರಿಕ ಶೇಕರಣೆ ಹಾಗೂ 12GB RAM ಸಾಮರ್ಥ್ಯ ಮತ್ತು 256GB ಆಂತರಿಕ ಸಂಗ್ರಹದ ಆಯ್ಕೆಗಳನ್ನು ಹೊಂದಿದೆ. ಹೆಚ್ಚುವರಿ ಮೆಮೊರಿಗೆ ಎಸ್‌ಡಿ ಕಾರ್ಡ್‌ ಸಪೋರ್ಟ್ ಇಲ್ಲ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ತೃತೀಯ ಕ್ಯಾಮೆರಾವು 8ಎಂಪಿ ಕಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಅನ್ನು ಹೊಂದಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ 4,200mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 30W VOOC 4.0 ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯ ಪಡೆದಿದೆ. ಉಳಿದಂತೆ 5G, ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್, ಗೇಮ್ ಬೂಸ್ಟ್‌ ಫೀಚರ್, ನಂತಹ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಚೀನಾದಲ್ಲಿ ಬಿಡುಗಡೆ ಆಗಿರುವ ''ರಿಯಲ್‌ ಮಿ X50'' 5G ಸ್ಮಾರ್ಟ್‌ಫೋನ್ 12GB RAM + 256GB ವೇರಿಯಂಟ್ ಬೆಲೆಯು 2,999 Yuan (ಅಂದಾಜು 30,960ರೂ) ಹಾಗೂ 6GB RAM + 256GB ವೇರಿಯಂಟ್ ಬೆಲೆಯು 2,699 Yuan (ಅಂದಾಜು 27,860ರೂ) ಆಗಿದೆ. ಸದ್ಯದಲ್ಲಿಯೇ ಭಾರತದಲ್ಲಿಯು ರಿಯಲ್ ಮಿ X50 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.

Best Mobiles in India

English summary
The Realme X50 has been launched in China. The new Realme phone offers support for 5G. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X