ಭಾರತಕ್ಕೆ ಲಗ್ಗೆ ಇಟ್ಟ 'ರಿಯಲ್ ಮಿ X50 ಪ್ರೊ 5G' ಫೋನ್!.ಬೆಲೆ ಎಷ್ಟು?
ಜನಪ್ರಿಯ 'ರಿಯಲ್ ಮಿ' ಸಂಸ್ಥೆಯು ಇತ್ತೀಚಿಗಷ್ಟೆ ಚೀನಾದಲ್ಲಿ 'ರಿಯಲ್ ಮಿ X50-5G' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಭರ್ಜರಿ ಸೌಂಡ್ ಮಾಡಿತ್ತು. ಇದೀಗ ರಿಯಲ್ ಮಿ X50 ಪ್ರೊ 5G ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರಿಗೆ ಖುಷಿ ನೀಡಿದೆ. ಈ ಸ್ಮಾರ್ಟ್‌ಫೋನ್ 5G ವೇರಿಯಂಟ್ ಆಗಿದ್ದು, 64ಎಂಪಿ ಕ್ಯಾಮೆರಾ ಸೆನ್ಸಾರ್, ಡ್ಯುಯಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ.

ಹೌದು, ರಿಯಲ್ ಮಿ ಸಂಸ್ಥೆಯು (ಫೆ. 24) ದೇಶಿಯ ಮಾರುಕಟ್ಟೆಗೆ ಬಹುನಿರೀಕ್ಷಿತ 'ರಿಯಲ್ ಮಿ X50 ಪ್ರೊ 5G' ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 90Hz ಡಿಸ್‌ಪ್ಲೇ ರಿಫ್ರೇಶ್ ರೇಟ್ ಅನ್ನು ಹೊಂದಿದೆ. ಹಾಗೂ 4,200mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಅಂದಹಾಗೆ ಈ ಫೋನ್ (ಇಂದಿನಿಂದ) ಫೆ.24 ರ ಸಂಜೆ 6ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದೆ. ಹಾಗಾದರೆ ರಿಯಲ್ ಮಿ X50 ಪ್ರೊ 5G' ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಮತ್ತು ಇತರೆ ಫೀಚರ್ಸ್‌ಗಳು ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
'ರಿಯಲ್ ಮಿ X50' ಪ್ರೊ 5G ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.44 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. 90Hz ಡಿಸ್‌ಪ್ಲೇ ರಿಫ್ರೇಶ್ ರೇಟ್ ಆಗಿದ್ದು, 180Hz ಸ್ಕ್ರೀನ್ ಸಾಂಪ್ಲಿಂಗ್ ರೇಟ್ 120Hz ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದೆ. ಗೇಮಿಂಗ್‌ಗೆ ಅತ್ಯುತ್ತಮ ಡಿಸ್‌ಪ್ಲೇ ಮಾದರಿ ಇದಾಗಿದೆ.

ಪ್ರೊಸೆಸರ್ ಸಾಮರ್ಥ್ಯ
'ರಿಯಲ್ ಮಿ X50' ಪ್ರೊ 5G ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 865 SoC ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಸಹ ಇದೆ. ಹಾಗೆಯೇ 6GB RAM + 128GB, 8GB RAM ಮತ್ತು 128GB ಆಂತರಿಕ ಶೇಕರಣೆ ಹಾಗೂ 12GB RAM ಸಾಮರ್ಥ್ಯ ಮತ್ತು 256GB ಆಂತರಿಕ ಸಂಗ್ರಹದ ಆಯ್ಕೆಗಳನ್ನು ಹೊಂದಿದೆ. ಹೆಚ್ಚುವರಿ ಮೆಮೊರಿಗೆ ಎಸ್‌ಡಿ ಕಾರ್ಡ್ ಸಪೋರ್ಟ್ ಇಲ್ಲ.

ಕ್ಯಾಮೆರಾ ವಿಶೇಷತೆ
'ರಿಯಲ್ ಮಿ X50' ಪ್ರೊ 5Gಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ತೃತೀಯ ಕ್ಯಾಮೆರಾವು 8ಎಂಪಿ ಕಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ನೀಡಿದ್ದು, ಮುಖ್ಯ ಕ್ಯಾಮೆರಾ 32ಎಂಪಿ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 8ಎಂಪಿ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ ಬಾಳಿಕೆ
'ರಿಯಲ್ ಮಿ X50' ಪ್ರೊ 5G ಸ್ಮಾರ್ಟ್‌ಫೋನ್ 4,200mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 65W VOOC 4.0 ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯ ಪಡೆದಿದೆ. ಉಳಿದಂತೆ 5G, Wi-Fi 6, ಬ್ಲೂಟೂತ್, ಜಿಪಿಎಸ್, ಫಿಂಗರ್‌ಪ್ರಿಂಟ್ ಸೆನ್ಸಾರ್, 20x ಹೈಬ್ರಿಡ್ ಜೂಮ್, ಫೀಚರ್, ನಂತಹ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಬಿಡುಗಡೆ ಆಗಿರುವ ''ರಿಯಲ್ ಮಿ X50'' ಪ್ರೊ 5G ಸ್ಮಾರ್ಟ್‌ಫೋನ್ ಬೇಸ್ ವೇರಿಯಂಟ್ 6GB RAM + 128GB ಬೆಲೆಯು 37,999ರೂ ಆಗಿದೆ. 8GB RAM ಮತ್ತು 128GB ವೇರಿಯಂಟ್ ಬೆಲೆಯು 39,999ರೂ. ಆಗಿದ್ದು, ಇನ್ನು 12GB RAM+256GB ಸಾಮರ್ಥ್ಯದ ಟಾಪ್ ವೇರಿಯಂಟ್ 44,999ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಇನ್ನು ಈ ಫೋನ್ ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ತಾಣಗಳಲ್ಲಿ ಲಭ್ಯವಾಗಲಿದೆ. ರೆಡ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








