Home
ಸುದ್ದಿಜಾಲ

12GB RAM ಆಯ್ಕೆಯ ಈ ಫೋನ್‌ಗೆ 33% ರಿಯಾಯಿತಿ: ಉಳಿತಾಯ ಪಕ್ಕಾ!

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ರಿಯಲ್‌ಮಿ ಫೋನ್‌ಗಳಿಗೆ (Realme smartphones) ಭಾರೀ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಗ್ರಾಹಕ ವಲಯವಿದ್ದು, ಈ ಮೂಲಕ ಕೈಗೆಟಕುವ ದರದಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಿ ಅತ್ಯುತ್ತಮ ಅನುಭವ ಪಡೆಯುತ್ತಿದ್ದಾರೆ. ಈ ನಡುವೆ ರಿಯಲ್‌ಮಿಯ ಈ ಫೋನ್‌ಗೆ ದೊಡ್ಡ ಮಟ್ಟದ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಹೌದು, ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರಿಗೆ ಇದು ಉತ್ತಮ ಅವಕಾಶ ವಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ರಿಯಲ್‌ಮಿ X50 ಪ್ರೊ (Realme X50 Pro) ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್ ನೀಡಿದ್ದು, ಈ ಫೋನ್ 12GB RAM ಆಯ್ಕೆ ಹಾಗೂ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಕ್ವಾಡ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರಗಳನ್ನು ನೋಡೋಣ ಬನ್ನಿ.

12GB RAM ಆಯ್ಕೆಯ ಈ ಫೋನ್‌ಗೆ 33% ರಿಯಾಯಿತಿ: ಉಳಿತಾಯ ಪಕ್ಕಾ!

ರಿಯಲ್‌ಮಿ X50 ಪ್ರೊ ನ ಆಫರ್ ವಿವರ: ಈ ಫೋನ್‌ ಸಾಮಾನ್ಯ ದರ 48,999 ರೂ.ಗಳಾಗಿದ್ದು, ನೀವು ಇದನ್ನು ಆಫರ್‌ ಬೆಲೆ 32,489 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ಗೆ 33% ರಷ್ಟು ರಿಯಾಯಿತಿ ನೀಡಿದೆ. ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಆಫರ್ ಸಹ ಇದ್ದು, ಈ ಮೂಲಕ ಇನ್ನಷ್ಟು ಹಣವನ್ನು ಈ ಫೋನ್‌ ಖರೀದಿ ವೇಳೆ ಉಳಿತಾಯ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (Flipkart Axis Bank Credit Card) ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, ಈ ಮೂಲಕ ನೀವು ತಿಂಗಳಿಗೆ 2,012ರೂ.ಗಳನ್ನು ಪಾವತಿ ಮಾಡಿ ಈ ಫೋನ್‌ ಖರೀದಿ ಮಾಡಬಹುದು. ಜೊತೆಗೆ ಸ್ಟ್ಯಾಂಡರ್ಡ್ ಇಎಮ್‌ಐ ಆಯ್ಕೆ ಸಹ ಇದೆ.

12GB RAM ಆಯ್ಕೆಯ ಈ ಫೋನ್‌ಗೆ 33% ರಿಯಾಯಿತಿ: ಉಳಿತಾಯ ಪಕ್ಕಾ!

ರಿಯಲ್‌ಮಿ X50 ಪ್ರೊ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.44 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 409 ppi ಪಿಕ್ಸೆಲ್ ಸಾಂದ್ರತೆ ಮತ್ತು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ನೀಡಲಿದೆ. ಈ ಮೂಲಕ ಉತ್ತಮ ದೃಶ್ಯಗಳನ್ನು ಒದಗಿಸುತ್ತದೆ. ಹಾಗೆಯೇ 20:9 ಆಕಾರ ಅನುಪಾತ ಮತ್ತು 90Hz ನ ಸ್ಕ್ರೀನ್ ರಿಫ್ರೆಶ್ ರೇಟ್‌ ಪಡೆದಿದ್ದು, ಸುಗಮ ಸ್ಟ್ರೀಮಿಂಗ್ ಅನ್ನು ನೀಡುತ್ತದೆ.

ರಿಯಲ್‌ಮಿ X50 ಪ್ರೊ ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಹಾರ್ಡ್‌ವೇರ್ ಕಾನ್ಫಿಗರೇಶನ್ ಫೋನ್ ಬಳಕೆದಾರರಿಗೆ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡಲು ಅಡ್ರಿನೋ 650 GPU ಮತ್ತು 12 GB RAM ಆಯ್ಕೆ ನೀಡಲಾಗಿದೆ.

ರಿಯಲ್‌ಮಿ X50 ಪ್ರೊ ಕ್ಯಾಮೆರಾ ರಚನೆ: ಇನ್ನು ಈ ಫೋನ್ ಕ್ವಾಡ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರಲ್ಲಿ ಪ್ರಮುಖವಾಗಿ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್‌ ಟೆಲಿಫೋಟೋ, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಲೆನ್ಸ್‌ ಆಯ್ಕೆ ಪಡೆದಿದೆ. ಈ ಸೆನ್ಸರ್‌ಗಳು ಹೆಚ್‌ಡಿಆರ್ , ಪನೋರಮಾ, 20x ಡಿಜಿಟಲ್ ಮತ್ತು 2x ಆಪ್ಟಿಕಲ್ ಜೂಮ್ ಮತ್ತು ಬೊಕೆ ಫೀಚರ್ಸ್‌ ಪಡೆದಿವೆ.

12GB RAM ಆಯ್ಕೆಯ ಈ ಫೋನ್‌ಗೆ 33% ರಿಯಾಯಿತಿ: ಉಳಿತಾಯ ಪಕ್ಕಾ!

ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಫೋನ್ ISOCELL ಪ್ಲಸ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಲೆನ್ಸ್‌ ಆಯ್ಕೆ ನೀಡಲಾಗಿದ್ದು, ಇವು ಎಕ್ಸ್ಮೋರ್ ಆರ್‌ಎಸ್‌ ಸೆನ್ಸರ್‌ ಮತ್ತು F2.5 ಭೌತಿಕ ದ್ಯುತಿರಂಧ್ರದೊಂದಿಗೆ ಕಾಣಿಸಿಕೊಂಡಿವೆ. ಪರಿಣಾಮ ಯಾರೆಲ್ಲಾ ಕ್ಯಾಮೆರಾ ಪ್ರಿಯರಿದ್ದಾರೋ ಅವರು ಕಣ್ಣು ಮುಚ್ಚಿಕೊಂಡು ಈ ಫೋನ್ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಫೋನ್‌ 4,200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

Best Mobiles in India

English summary
Realme X50 Pro smartphone available in a great offer, this phone has got 12GB RAM option and quad rear camera option with 64 megapixel primary camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+