Realme Xtra Days: ಬೆಲೆ ಇಳಿಕೆ ಕಂಡ 'ರಿಯಲ್ ಮಿ XT' ಮತ್ತು 'ರಿಯಲ್ ಮಿ X'!
ಚೀನಾ ಮೂಲದ ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ರಿಯಲ್ ಮಿ ಸಹ ಒಂದಾಗಿದೆ. ರಿಯಲ್ ಮಿ ಸಂಸ್ಥೆಯ ಇತ್ತೀಚಿಗೆ ಬಿಡುಗಡೆ ಮಾಡಿರುವ 'ರಿಯಲ್ ಮಿ XT' ಮತ್ತು 'ರಿಯಲ್ ಮಿ X' ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್ ಹವಾ ಎಬ್ಬಿಸಿದ್ದವು. ರಿಯಲ್ ಮಿ XT ಭಾರತದ ಮೊದಲ 64ಎಂಪಿ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದ್ದು, ಹಾಗೆಯೇ ರಿಯಲ್ ಮಿ X ಪಾಪ್‌ಅಪ್ ಕ್ಯಾಮೆರಾದಿಂದ ಗಮನ ಸೆಳೆದಿತ್ತು. ಆದರೆ ಇದೀಗ ಈ ಎರಡು ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ.

ಹೌದು, ರಿಯಲ್ ಮಿ ಸಂಸ್ಥೆಯು ಈಗ ರಿಯಲ್ ಮಿ ಎಕ್ಸ್‌ಟ್ರಾ ಡೇಸ್ ಸೇಲ್ ಮೇಳವನ್ನು ಆಯೋಜಿಸಿದೆ. ಸದ್ಯ ಈ ಸೇಲ್ ಚಾಲ್ತಿಯಲ್ಲಿದ್ದು, ಇದೇ ಫೆಬ್ರವರಿ 29ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಸಂಸ್ಥೆಯು ಜನಪ್ರಿಯ 'ರಿಯಲ್ ಮಿ XT' ಫೋನ್ ಬೆಲೆಯಲ್ಲಿ 1,000ರೂ. ಮತ್ತು 'ರಿಯಲ್ ಮಿ X' ಸ್ಮಾರ್ಟ್‌ಫೋನ್‌ಗಳ ಮೇಲೆ 2,000ರೂ. ಡಿಸ್ಕೌಂಟ್ ಘೋಷಿಸಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಕೊಡುಗೆ ಮತ್ತು ಮೊಬಿಕ್ವಿಕ್‌ನಿಂದ 500ರೂ. ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.

ರಿಯಲ್ ಮಿ ಎಕ್ಸ್‌ಟ್ರಾ ಡೇಸ್ ಸೇಲ್ ಮೇಳದಲ್ಲಿ 'ರಿಯಲ್ ಮಿ XT' ಮತ್ತು 'ರಿಯಲ್ ಮಿ X' ಫೋನ್‌ಗಳ ಜೊತೆಗೆ ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್ ಮೇಲೆಯು 1,000ರೂ.ಗಳ ಕಡಿತ ಮಾಡಿದೆ. ಹೀಗಾಗಿ ರಿಯಲ್ ಮಿ ಟ್ರೆಂಡಿಂಗ್ ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಸಕಾಲವಾಗಿದೆ. ಹಾಗಾದರೇ ಅವುಗಳಲ್ಲಿ 64ಎಂಪಿ ಕ್ಯಾಮೆರಾ ಹೊಂದಿರುವ ರಿಯಲ್ ಮಿ XT ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ
ರಿಯಲ್ ಮಿ XT ಸ್ಮಾರ್ಟ್‌ಫೋನ್ 2340x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಡ್ಯುವ್‌ಡ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದೆ. ಹಾಗೆಯೇ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ಒಳಗೊಂಡಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಕವಚ್ ಪಡೆದಿದೆ. ಫೋನ್ ಸುತ್ತಲೂ ಕರ್ವ್ ನೀಡಲಾಗಿದೆ ಮತ್ತು ಹಿಂಬದಿ ಗ್ಲಾಸಿ ಲುಕ್‌ನ ರಚನೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
ರಿಯಲ್ ಮಿ XT ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 AIE SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ನೀಡಲಾಗಿದೆ. ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 4GB RAM ಮತ್ತು 64GB ಸ್ಟೋರೇಜ್, 6GB RAM ಮತ್ತು 64GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ.

ಕ್ವಾಡ್ ಕ್ಯಾಮೆರಾ ವಿಶೇಷ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಲ್ಡ್ ಸೆನ್ಸಾರ್‌ನಲ್ಲಿದ್ದು, ಮೂರನೇಯ ಮತ್ತು ನಾಲ್ಕನೇ ಕ್ಯಾಮೆರಾಗಳೆರಡು 2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಇದ್ದು, ಸೋನಿಯ IMX 471 ಸೆನ್ಸಾರ್ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ರಿಯಲ್ ಮಿ XT ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ColorOS 6 ಬೆಂಬಲಿತ ಆಂಡ್ರಾಯ್ಡ್ 9 ಪೈ ಓಎಸ್, ಡಾರ್ಕ್ ಮೋಡ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಆಕ್ಸಿಡೆಂಟಲ್ ಡ್ರಾಪ್ಸ್‌ನಿಂದ ರಕ್ಷಣೆ ಸೌಲಭ್ಯಗಳೊಂದಿಗೆ ವೈಫೈ, ಬ್ಲೂಟೂತ್, ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








