Subscribe to Gizbot

ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

Written By:

ಇಂದಿನ ಟೆಕ್ ಯುಗದಲ್ಲಿ ಸ್ಮಾರ್ಟ್‌ಫೋನ್ ಬದಲಾಯಿಸುವುದು ಹೆಚ್ಚು ಸುಲಭದ ಕೆಲಸವಾಗಿದೆ. ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಫೋನ್‌ಗಳು ಬಜೆಟ್ ಬೆಲೆ ಮತ್ತು ಅತ್ಯುತ್ತಮ ಫೀಚರ್‌ಗಳೊಂದಿಗೆ ಬರುತ್ತಿದ್ದು ಬಳಕೆದಾರರಿಗೆ ಇದು ನಿಜಕ್ಕೂ ಹಬ್ಬದ ಸಮಯವೇ ಆಗಿದೆ. ಆದ್ದರಿಂದಲೇ ಫೋನ್ ಪ್ರಿಯರು ಅಂದಾಜು ವಾರಕ್ಕೊಮ್ಮೆಯಾದರೂ ಹೊಸ ಹ್ಯಾಂಡ್‌ಸೆಟ್‌ಗಳಿಗೆ ಮುಗಿ ಬೀಳುತ್ತಿದ್ದಾರೆ.

ಓದಿರಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ಹೊಸ ಫೋನ್ ಕೊಂಡಾಯಿತು ಇನ್ನು ಹಳೆಯ ಸಂಪರ್ಕಗಳನ್ನು ಇತರೆ ಚಟುವಟಿಕೆಗಳನ್ನು ಹಳೆಯ ಫೋನ್‌ಗೆ ಬದಲಾಯಿಸಬೇಕು ಅಲ್ಲವೇ? ಇನ್ನು ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಬಳಸುವವರು ನೀವಾಗಿದ್ದೀರಿ ಎಂದಾದಲ್ಲಿ ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ಸಿಮ್ ವರ್ಗಾವಣೆ ಮಾಡುವಾಗ ವಾಟ್ಸಾಪ್ ಸಂಪರ್ಕಗಳು ಮತ್ತು ಸಂವಾದಗಳನ್ನು ವರ್ಗಾಯಿಸುವುದು ಹೇಗೆ ಎಂಬುದಕ್ಕೆ ಈ ಲೇಖನ.

ಓದಿರಿ: ವಾಟ್ಸಾಪ್ ಗ್ರೂಪ್ ಚಾಟ್‌ನಲ್ಲಿ ಅನುಸರಿಸಬೇಕಾದ ನಿಯಮಗಳೇನು?

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಂಶಗಳನ್ನು ನಾವು ನೀಡಿದ್ದು ಅತಿ ಸುಲಭ ವಿಧಾನದಲ್ಲಿ ಇದನ್ನು ನಿಮಗೆ ಕಾರ್ಯಗತಗೊಳಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಸೆಟ್ಟಿಂಗ್ಸ್
  

ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ಹೋಗಿ.

ಖಾತೆ ಮಾಹಿತಿ
  

ಇಲ್ಲಿ ನಿಮಗೆ ಖಾತಿ ಮಾಹಿತಿ ದೊರೆಯುತ್ತದೆ. ಅದನ್ನು ಕ್ಲಿಕ್ ಮಾಡಿ

ಸಂಖ್ಯೆ ಬದಲಾವಣೆ
  

ನಿಮ್ಮ ಖಾತೆಯಲ್ಲಿ ಸಂಖ್ಯೆ ಬದಲಾವಣೆ ಆಪ್ಶನ್ ಇರುತ್ತದೆ. ಇದನ್ನು ಸ್ಪರ್ಶಿಸಿ.

ಹಳೆಯ ಸಂಖ್ಯೆ ಕೋರಿಕೆ
  

ಸಂಖ್ಯೆ ಬದಲಾಯಿಸಿ ಅನ್ನು ಸ್ಪರ್ಶಿಸುತ್ತಿದ್ದಂತೆಯೇ ನೀವು ವಾಟ್ಸಾಪ್ ಬಳಸುತ್ತಿರುವ ನಿಮ್ಮ ಹಳೆಯ ಸಂಖ್ಯೆಯನ್ನು ಇದು ಕೇಳುತ್ತದೆ.

ಹೊಸ ಸಂಖ್ಯೆ
  

ಇದರ ಕೆಳಗೆಯೇ ನೀವು ವಾಟ್ಸಾಪ್ ಬಳಸಬೇಕೆಂದಿರುವ ಹೊಸ ಸಂಖ್ಯೆಯನ್ನು ಕೇಳಲಾಗುತ್ತದೆ.

ನಂತರದ ಹಂತ
  

ಹೊಸ ಸಂಖ್ಯೆಯನ್ನು ನಮೂದಿಸಿ ನೀವು ನಂತರ ಎಂಬುದನ್ನು ಒತ್ತಿದಾಗ ಹೊಸ ಸಂಖ್ಯೆಗೆ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ.

ಪರಿಶೀಲನೆ ಕೋಡ್
  

ಈ ಸಂದರ್ಭದಲ್ಲಿ ನಿಮ್ಮಲ್ಲಿ ಪರಿಶೀಲನೆ ಕೋಡ್ ಕೇಳಲಾಗುತ್ತದೆ. ಮತ್ತು ಈ ಕೋಡ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.

ಸ್ವೀಕೃತಿ
  

ಪರಿಶೀಲನೆ ಕೋಡ್ ನಮೂದಿಸಿದ ಬೆನ್ನಲ್ಲೇ ನಿಮ್ಮಿಂದ ಸ್ವೀಕೃತಿಗಳನ್ನು ಕೇಳಲಾಗುತ್ತದೆ. ಮತ್ತು ನಿಮ್ಮ ವಾಟ್ಸಾಪ್ ಹೊಸ ಸಂಖ್ಯೆಗೆ ವರ್ಗಾವಣೆ ಆಗಿರುತ್ತದೆ.

ಹಳೆಯ ವಾಟ್ಸಾಪ್
  

ನಿಮ್ಮ ಹಳೆಯ ವಾಟ್ಸಾಪ್ ಅನ್ನು ಹೊಸ ಸಂಖ್ಯೆಯಲ್ಲಿ ನೀವು ಉಪಯೋಗಿಸಬಹುದು.

ವಾಟ್ಸಾಪ್ ಸಂಖ್ಯೆ ಬದಲಾವಣೆ
  

ಬೇರೆ ರಾಜ್ಯಕ್ಕೆ ವರ್ಗಾವಣೆಯಾದವರಿಗೆ ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವವರಿಗೆ ವಾಟ್ಸಾಪ್ ಸಂಖ್ಯೆ ಬದಲಾವಣೆ ಫೀಚರ್ ಹೆಚ್ಚು ಉಪಯೋಗಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can find how to use whatsapp with different mobile number..In slider we are mentioning all the procedures clearly and it will help you to transfer whatsapp usage to new mobile number.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot