ನಿಮ್ಮನ್ನು ಫೇಸ್‌ಬುಕ್ ತ್ಯಜಿಸುವಂತೆ ಮಾಡುವ ಅಂಶಗಳು
ಫೇಸ್‌ಬುಕ್ ಎಂಬ ಸಾಮಾಜಿಕ ತಾಣವನ್ನು ಬಳಸದ ಬಳಕೆದಾರರು ಯಾರೂ ಇಲ್ಲ ಎಂದೇ ಹೇಳಬಹುದು. ದೂರದಲ್ಲಿರುವ ಸ್ನೇಹಿತರೊಂದಿಗೆ ಸಂಪರ್ಕವನ್ನೇರ್ಪಡಿಸಿಕೊಳ್ಳಲು, ಮಧುರ ಭಾವನೆಗಳನ್ನು ಹಂಚಿಕೊಳ್ಳಲು, ಫೋಟೋಗಳನ್ನು ರವಾನಿಸಲು, ಒಂದು ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿಲ್ಲ ಎಂದಾದಲ್ಲಿ ಅದು ವ್ಯರ್ಥ ಎಂಬ ಭಾವನೆ ಹಲವರಲ್ಲಿ ಇದೆ. ಎಲ್ಲಿ ನೋಡಿದರೂ ಮಾರ್ಕ್ ಜುಕರ್‌ಬರ್ಗ್ ಕಂದಮ್ಮನ ಖ್ಯಾತಿಯೇ ಕೇಳಿಬರುತ್ತಿದೆ.
ಓದಿರಿ: ಟೆಕ್ ವ್ಯಾಧಿಗಳ ಬಗ್ಗೆ ನಿಮಗೆಷ್ಟು ಗೊತ್ತು
ಆದರೆ ನೀವು ಫೇಸ್‌ಬುಕ್‌ನ ಸತತ ಬಳಕೆದಾರರು ಆಗಿದ್ದೀರಿ ಎಂದಾದಲ್ಲಿ ನಿಮ್ಮನ್ನು ಬೆಚ್ಚಿಬೀಳಿಸುವ ವರದಿ ಇಲ್ಲಿದೆ. ಈ ಸುದ್ದಿಯನ್ನು ಓದಿದೊಡನೆ ಫೇಸ್‌ಬುಕ್ ಇಷ್ಟೊಂದು ಆತಂಕಕಾರಿಯೇ ಎಂಬ ಅಂಶ ನಿಮ್ಮ ಮನದಲ್ಲಿ ಮೂಡುವುದು ಸಹಜ. ಅದಕ್ಕೆ ಕಾರಣಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ನಿಮ್ಮ ಸಮಯವನ್ನು ಕೊಲ್ಲುತ್ತದೆ
ಫೇಸ್‌ಬುಕ್‌ನಲ್ಲಿ ದಿನದ 17 ನಿಮಿಷಗಳನ್ನು ನೀವು ಕಳೆಯುತ್ತಿದ್ದೀರಿ ಎಂದಾದಲ್ಲಿ ಅದು ಸಮಯ ವ್ಯರ್ಥವೇ. ಒಬ್ಬ ವ್ಯಕ್ತಿ ಫೇಸ್‌ಬುಕ್ ಸೈಟ್‌ನಲ್ಲಿ 10 ವರ್ಷಗಳ ಕಾಲ ವ್ಯಸ್ಥನಾಗಿದ್ದಾನೆ ಮತ್ತು ಆತ ತನ್ನ ಬದುಕಿನ 40 ಕ್ಕಿಂತಲೂ ಹೆಚ್ಚಿನ ಸಂಪೂರ್ಣ ದಿನಗಳನ್ನು ಕಳೆದಿದ್ದಾನೆ ಅದೂ ಸ್ಕ್ರಾಲ್ ಮಾಡಲು, ಫೋಟೋಗಳನ್ನು ಹಂಚಿಕೊಳ್ಳಲು ಮತ್ತು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಲು ಎಂದಲ್ಲಿ ಅದು ಸಮಯ ಕೊಲ್ಲುವಿಕೆಯೇ ಆಗಿದೆ.

ವಸ್ತುಗಳನ್ನು ಮಾರುವಂತೆ ಮಾಡುತ್ತದೆ
2012 ರಲ್ಲಿ ಫೇಸ್‌ಬುಕ್ ಬಳಕೆದಾರರಿಗೆ ಅರಿವಿಲ್ಲದಂತೆ ನಿಮ್ಮ ಪುಟದಲ್ಲಿ ಕೆಲವು ಸಂಪಾದನೆಗಳನ್ನು ಮಾಡಿದೆ. ನಿಮ್ಮ ಪುಟಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವುದರ ಮೂಲಕ ಇದು ಭಾವನೆಗಳ ಮೇಲೆ ಪರಿಣಾಮವನ್ನು ಬೀರಬಹುದು.

ಜಾಹೀರಾತುಗಳಿಂದ ನಿಮ್ಮನ್ನು ಟಾರ್ಗೆಟ್ ಮಾಡುತ್ತದೆ
ನೀವು ಒಂದು ವಸ್ತುವನ್ನು ಖರೀದಿಸಲಿದ್ದೀರಿ ಮತ್ತು ಆ ವಸ್ತುವಿಗಾಗಿ ನೀವು ಹುಡುಕುತ್ತೀರಿ, ಮತ್ತು ಆರು ತಿಂಗಳ ನಂತರ ಫೇಸ್‌ಬುಕ್ ಆ ವಸ್ತುವನ್ನು ನೀವು ಏಕೆ ಖರೀದಿಸಿಲ್ಲ ಮುಂತಾಗಿ ನಿಮ್ಮನ್ನು ನೆನಪಿಸಿಕೊಂಡು ಇರುತ್ತದೆ.

ನಿಮ್ಮ ಆರೋಗ್ಯಕ್ಕೆ ಹಾನಿಕರ
ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಇದು ಬೀರಬಹುದಾಗಿದ್ದು ಜೀರ್ಣಕ್ರಿಯೆ ಮತ್ತು ದೃಷ್ಟಿದೋಷದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು.

ಈ ಜನರೆಲ್ಲಾ ಯಾರು
ಹೆಚ್ಚಿನ ವಯಸ್ಕರು ಫೇಸ್‌ಬುಕ್‌ನಲ್ಲಿ 338 ಸ್ನೇಹಿತರನ್ನು ಹೊಂದಿದ್ದಾರೆ. ಆದರೆ 10 ಶೇಕಡಾದಷ್ಟು ಅವರೆಲ್ಲಾ ಯಾರು ಎಂಬುದು ಇವರಿಗೆ ತಿಳಿದಿಲ್ಲ. ಹೆಚ್ಚಿನವರು ಹೊಸ ಹೆಸರು, ಹೊಸ ಪ್ಯಾಶನ್‌ಗಳನ್ನು ಒಳಗೊಂಡು ನಿಮ್ಮೆದುರು ಕಾಣಿಸಿಕೊಳ್ಳುತ್ತಾರೆ.

ಗೌಪ್ಯತೆಯ ಬಗ್ಗೆ ನನಗೆ ಅಷ್ಟು ಕಾಳಜಿಯಿಲ್ಲ
ನಿಮ್ಮ ನಿಮ್ಮ ಗೌಪ್ಯತೆಯನ್ನು ಕುರಿತು ಕಾಳಜಿಯನ್ನು ವಹಿಸುವುದು ಬಿಡುವುದು ನಿಮಗೆ ಬಿಟ್ಟ ವಿಚಾರವಾಗಿದೆ. ಇಂಟರ್ನೆಟ್ ಬಳಸುತ್ತಿದ್ದು ನಿಮಗೆ ನಿಮ್ಮ ಕಾಳಜಿ ಬಗ್ಗೆ ಅಷ್ಟೇನೂ ಹೆದರಿಕೆಯಿಲ್ಲ ಎಂದಾದಲ್ಲಿ ಫೇಸ್‌ಬುಕ್‌ನಲ್ಲಿ ಸ್ವತಂತ್ರವಾಗಿ ನೀವು ಏನನ್ನು ಬೇಕಾದರೂ ಫೋಸ್ಟ್ ಮಾಡಬಹುದು, ಕಾಮೆಂಟ್ ಮಾಡಬಹುದು.

ಏನನ್ನು ಬೇಕಾದರೂ ಪೋಸ್ಟ್ ಮಾಡಿ
ಫೇಸ್‌ಬುಕ್‌ನಲ್ಲಿ ತಮ್ಮೆಲ್ಲಾ ಚಟುವಟಿಕೆಗಳನ್ನು ಕೆಲವರು ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕಾಫಿ ಕುಡಿಯುವುದು, ಬೆಳಗ್ಗಿನ ಜಾವದ ಸೆಲ್ಫಿ ಹೀಗೆ ಫೇಸ್‌ಬುಕ್‌ನಲ್ಲಿ ತಮ್ಮೆಲ್ಲಾ ಚಟುವಟಿಕೆಗಳನ್ನು ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ. ಇದು ಅವರಿಗೆ ಮನರಂಜನೆಯನ್ನು ನೀಡುತ್ತಿದ್ದರೂ ಓದುವವರಿಗೆ ಕಿರಿಕಿರಿಯನ್ನುಂಟು ಮಾಡುವುದು ಸಹಜವೇ ಆಗಿದೆ.


Click it and Unblock the Notifications








