RCB v/s CSK ಪಂದ್ಯವನ್ನು ನೀವು ವೀಕ್ಷಿಸಿದ್ದೀರಾ?..ಹೊಸ ದಾಖಲೆ ಬರೆದ ಜಿಯೋಸಿನಿಮಾ!
ಜಿಯೋಸಿನಿಮಾ ತನ್ನದೇ ವೀಕ್ಷಕರ ದಾಖಲೆಯನ್ನು ಮುರಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದ ವೇಳೆ ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.4 ಕೋಟಿ ದಾಟಿದೆ. ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ ಜಿಯೋಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ಸಂಖ್ಯೆಯಾಗಿದೆ.
ಈ ಹಿಂದೆ ಏಪ್ರಿಲ್ 12ರಂದು ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿತ್ತು. ಈ ಬಾರಿ ಆರ್ಸಿಬಿ-ಸಿಎಸ್ಕೆ ಪಂದ್ಯದ ಎರಡನೇ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಜಿಯೋಸಿನಿಮಾದ ವೀಕ್ಷಕರ ಸಂಖ್ಯೆ 24 ದಶಲಕ್ಷ ತಲುಪಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ (ಏ 17) ನಡೆದ ಈ ರೋಚಕ ಪಂದ್ಯದಲ್ಲಿ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ತಂಡ 8 ರನ್ಗಳಿಂದ ಗೆದ್ದುಕೊಂಡಿತು. ಒಟ್ಟಾರೆ 444 ರನ್ಗಳ ಪ್ರವಾಹ ಹರಿದ ಈ ಪಂದ್ಯದಲ್ಲಿ ದಾಖಲೆಯ 33 ಸಿಕ್ಸರ್ಗಳೂ ಸಿಡಿದವು.

ಟಾಟಾ ಐಪಿಎಲ್-2023 ರ ಆವೃತ್ತಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬಿಸಿಸಿಐ ಪ್ರತ್ಯೇಕ ಕಂಪನಿಗಳಿಗೆ ನೀಡಿದೆ. ಈಗ ಡಿಜಿಟಲ್ ಪ್ರಸಾರ ವೇದಿಕೆ ಅದರ ನೇರಲಾಭವನ್ನು ಕಾಣುತ್ತಿದೆ. ಜಿಯೋಸಿನಿಮಾ ಈ ಬಾರಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರವನ್ನು ಮಾಡುತ್ತಿದೆ. ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಹೆಚ್ಚಿನ ಸಹಾಯವನ್ನು ಮಾಡಿದೆ.
2019ರ ಆವೃತ್ತಿಯ ಫೈನಲ್ ಪಂದ್ಯವನ್ನು ಡಿಸ್ನಿ-ಹಾಟ್ಸ್ಟಾರ್ನಲ್ಲಿ ಗರಿಷ್ಠ 1.86 ಕೋಟಿ ವೀಕ್ಷಕರು ನೋಡಿದ್ದರು ಎಂಬ ಅಂಶದಿಂದ, ಜಿಯೋಸಿನಿಮಾದಲ್ಲಿ 2.4 ಕೋಟಿ ವೀಕ್ಷಕರ ಸಂಪೂರ್ಣ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರಸಕ್ತ ಐಪಿಎಲ್ ಟೂರ್ನಿ ಇನ್ನೂ ತನ್ನ ಲೀಗ್ ಹಂತದಲ್ಲಿದ್ದು, ಜಿಯೋಸಿನಿಮಾ ಈಗಾಗಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಐಪಿಎಲ್ 2023 ಫೈನಲ್ ಹಂತದತ್ತ ಸಾಗುತ್ತಿರುವಂತೆ, ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆಯು ಹೊಸ ಎತ್ತರವನ್ನು ತಲುಪಲಿದೆ. ತನ್ನ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಪ್ರತಿದಿನ ಲಕ್ಷಾಂತರ ಹೊಸ ವೀಕ್ಷಕರು ಐಪಿಎಲ್ ಪಂದ್ಯವನ್ನು ನೋಡುತ್ತಿದ್ದಾರೆ.
ಪ್ರಾಯೋಜಕರು ಮತ್ತು ಜಾಹೀರಾತುದಾರರ ವಿಷಯದಲ್ಲಿಯೂ ಜಿಯೋಸಿನಿಮಾ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅಗ್ರ ಜಾಗತಿಕ ಮತ್ತು ಭಾರತೀಯ ಬ್ರ್ಯಾಂಡ್ಗಳು ಈಗಾಗಲೆ ಜಿಯೋಸಿನಿಮಾದತ್ತ ಆಕರ್ಷಿತವಾಗಿವೆ. ಟಿವಿಯನ್ನು ಬಿಟ್ಟು, ಜಿಯೋಸಿನಿಮಾ ಕೂಡ 23 ಪ್ರಮುಖ ಪ್ರಾಯೋಜಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಜಿಯೋ 219ರೂ. ಕ್ರಿಕೆಟ್ ಪ್ಲ್ಯಾನ್ : ಈ ಯೋಜನೆಯು 14 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ನೀಡುತ್ತದೆ. ಪೂರ್ಣ ಅವಧಿಗೆ ಒಟ್ಟು 44GB ಡೇಟಾ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನ್ ಅನಿಯಮಿತ ವಾಯಿಸ್ ಕರೆಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿದೆ.
ಜಿಯೋ 399ರೂ. ಕ್ರಿಕೆಟ್ ಪ್ಲ್ಯಾನ್ : ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ನೀಡುತ್ತದೆ. ಪೂರ್ಣ ಅವಧಿಗೆ ಒಟ್ಟು 90GB ಡೇಟಾ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನ್ ಅನಿಯಮಿತ ವಾಯಿಸ್ ಕರೆಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿದೆ.
ಜಿಯೋ 999ರೂ. ಕ್ರಿಕೆಟ್ ಪ್ಲ್ಯಾನ್ : ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ನೀಡುತ್ತದೆ. ಪೂರ್ಣ ಅವಧಿಗೆ ಒಟ್ಟು 292 GB ಡೇಟಾ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನ್ ಅನಿಯಮಿತ ವಾಯಿಸ್ ಕರೆಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿದೆ.


Click it and Unblock the Notifications








