ಸದ್ದಿಲ್ಲದೇ ಬಂದೇ ಬಿಟ್ಟಿವೆ ಎರಡು ದೈತ್ಯ ಸ್ಮಾರ್ಟ್‌ಫೋನ್‌ಗಳು; ಅಚ್ಚರಿ ಫೀಚರ್ಸ್!
ಗೇಮಿಂಗ್ ಫೋನ್‌ಗಳಿಗೆ ಪ್ರಮುಖ ಬ್ರ್ಯಾಂಡ್ ಎನಿಸಿರುವ ನುಬಿಯಾ ಬ್ರ್ಯಾಂಡ್ ತನ್ನ ಬಹುನಿರೀಕ್ಷಿತ ರೆಡ್ ಮ್ಯಾಜಿಕ್ 10 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಸರಣಿಯು ರೆಡ್ ಮ್ಯಾಜಿಕ್ 10 ಪ್ರೊ+ (Red Magic 10 Pro+) ಹಾಗೂ ರೆಡ್ ಮ್ಯಾಜಿಕ್ 10 ಪ್ರೊ (Red Magic 10 Pro) ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿವೆ.
ಹೌದು, ರೆಡ್ ಮ್ಯಾಜಿಕ್ 10 ಪ್ರೊ+ (Red Magic 10 Pro+) ಹಾಗೂ ರೆಡ್ ಮ್ಯಾಜಿಕ್ 10 ಪ್ರೊ (Red Magic 10 Pro) ಮೊಬೈಲ್‌ಗಳು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿವೆ. ರೆಡ್ ಮ್ಯಾಜಿಕ್ 10 ಪ್ರೊ+ ಫೋನ್ 7,050mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದರೇ, ರೆಡ್ ಮ್ಯಾಜಿಕ್ 10 ಪ್ರೊ ಮೊಬೈಲ್ 6,500mAh ಬ್ಯಾಟರಿ ಪವರ್ ಅನ್ನು ಪಡೆದುಕೊಂಡಿದೆ. ಅಲ್ಲದೇ 1TB ವರೆಗೂ ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿರುವುದು ವಿಶೇಷ.

ರೆಡ್ ಮ್ಯಾಜಿಕ್ 10 ಪ್ರೊ+ ಫೋನ್ ಡಾರ್ಕ್ ನೈಟ್ ಕಲರ್ ವೇ, ಟ್ರಾನ್ಸ್‌ಪರೆಂಟ್ ಡಾರ್ಕ್ ನೈಟ್ ಮತ್ತು ಸಿಲ್ವರ್ ವಿಂಗ್ ಕಲರ್ ಆಯ್ಕೆ ಪಡೆದಿದೆ. ಇನ್ನು ರೆಡ್ ಮ್ಯಾಜಿಕ್ 10 ಪ್ರೊ ಡಾರ್ಕ್ ನೈಟ್, ಡ್ಯೂಟೇರಿಯಮ್ ಫ್ರಂಟ್ ಟ್ರಾನ್ಸ್‌ಪರೆಂಟ್ ಡಾರ್ಕ್ ನೈಟ್ ಮತ್ತು ಟ್ರಾನ್ಸ್‌ಪರೆಂಟ್ ಸಿಲ್ವರ್ ವಿಂಗ್ ಕಲರ್ ಆಯ್ಕೆ ಹೊಂದಿದೆ. ಇನ್ನುಳಿದಂತೆ ಈ ಎರಡು ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ ಮ್ಯಾಜಿಕ್ 10 ಪ್ರೊ+ ಫೀಚರ್ಸ್
ಇದು 6.8 ಇಂಚಿನ 1.5K ಹೊಂದಿದ್ದು, ಅಲ್ಲದೇ 1,216 x 2,688 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಅಲ್ಲದೇ ಇದು 144Hz ರಿಫ್ರೆಶ್ ರೇಟ್, 960Hz ಟಚ್ ಸ್ಯಾಂಪ್ಲಿಂಗ್ ರೇಟ್, 2,000nits ಗರಿಷ್ಠ ಬ್ರೈಟ್ನೆಸ್ ಹಾಗೂ 2,592Hz PWM ಡಿಮ್ಮಿಂಗ್ ಸೌಲಭ್ಯಗಳನ್ನು ಪಡೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಹಾಗೆಯೇ 7,050mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 80W ಫಾಸ್ಟ್ ಚಾರ್ಜಿಂಗ್ ಪಡೆದುಕೊಂಡಿದೆ.
ರೆಡ್ ಮ್ಯಾಜಿಕ್ 10 ಪ್ರೊ ಫೀಚರ್ಸ್
ಸಂಸ್ಥೆಯ ಈ ಫೋನ್ ಸಹ 6.8 ಇಂಚಿನ 1.5K ಹೊಂದಿದ್ದು, ಅಲ್ಲದೇ 1,216 x 2,688 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಇದರ ಜೊತೆಗೆ 144Hz ರಿಫ್ರೆಶ್ ರೇಟ್, 960Hz ಟಚ್ ಸ್ಯಾಂಪ್ಲಿಂಗ್ ರೇಟ್, 2,000nits ಗರಿಷ್ಠ ಬ್ರೈಟ್ನೆಸ್ ಹಾಗೂ 2,592Hz PWM ಡಿಮ್ಮಿಂಗ್ ಸೌಲಭ್ಯಗಳನ್ನು ಪಡೆದಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಹಾಗೆಯೇ 6,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದು 120W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ.
ಬೆಲೆ ಮಾಹಿತಿ ಹೀಗಿದೆ
ರೆಡ್ ಮ್ಯಾಜಿಕ್ 10 ಪ್ರೊ+ - 16GB + 256GB ಬೆಲೆಯು CNY 5,999 (ಭಾರತದಲ್ಲಿ ಅಂದಾಜು 72,000ರೂ) ಆಗಿದೆ. ಇನ್ನು ಇದು ಡಾರ್ಕ್ ನೈಟ್ ಕಲರ್ ವೇ, ಟ್ರಾನ್ಸ್‌ಪರೆಂಟ್ ಡಾರ್ಕ್ ನೈಟ್ ಮತ್ತು ಸಿಲ್ವರ್ ವಿಂಗ್ ಕಲರ್ ಆಯ್ಕೆ ಪಡೆದಿದೆ.
ರೆಡ್ ಮ್ಯಾಜಿಕ್ 10 ಪ್ರೊ - 12GB + 256GB ಬೆಲೆಯು CNY 4,999 (ಭಾರತದಲ್ಲಿ ಅಂದಾಜು 51,600ರೂ.) ಒಳಗೊಂಡಿದೆ. ಇನ್ನು ರೆಡ್ ಮ್ಯಾಜಿಕ್ 10 ಪ್ರೊ ಫೋನ್ ಡಾರ್ಕ್ ನೈಟ್, ಡ್ಯೂಟೇರಿಯಮ್ ಫ್ರಂಟ್ ಟ್ರಾನ್ಸ್‌ಪರೆಂಟ್ ಡಾರ್ಕ್ ನೈಟ್ ಮತ್ತು ಟ್ರಾನ್ಸ್‌ಪರೆಂಟ್ ಸಿಲ್ವರ್ ವಿಂಗ್ ಕಲರ್ ಆಯ್ಕೆ ಪಡೆದಿದೆ.


Click it and Unblock the Notifications








