Home
ಸುದ್ದಿಜಾಲ

ರೆಡ್‌ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್ ಲಾಂಚ್!..ದೈತ್ಯ ಫೀಚರ್ಸ್‌!

ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್‌ ಇದ್ದು, ಈ ನಿಟ್ಟಿನಲ್ಲಿ ನೂತನ ಫೋನ್‌ಗಳು ಲಗ್ಗೆ ಇಡುತ್ತಲೆ ಇವೆ. ಆ ಲಿಸ್ಟ್‌ಗೆ ಈಗ ನೂಬಿಯಾ ಕಂಪನಿಯ ರೆಡ್‌ ಮ್ಯಾಜಿಕ್ 6 ಸ್ಮಾರ್ಟ್‌ಫೋನ್ ಸಹ ಸೇರ್ಪಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ರೆಡ್

ಹೌದು, ಚೀನಾದ ನುಬಿಯಾ ಸಂಸ್ಥೆಯು 'ರೆಡ್ ಮ್ಯಾಜಿಕ್ 6' ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ರೆಡ್ ಮ್ಯಾಜಿಕ್ 6 ಮತ್ತು ರೆಡ್ ಮ್ಯಾಜಿಕ್ 6 ಪ್ರೊ ಮಾಡೆಲ್‌ಗಳನ್ನು ಹೊಂದಿದೆ. ಇವುಗಳಲ್ಲಿ ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್ 5,050mAh ಬ್ಯಾಟರಿ, 8GB RAM ಹಾಗೂ 12GB RAM ಫೀಚರ್ಸ್‌ಗಳನ್ನು ತುಂಬಿಕೊಂಡಿದೆ. ಈ ಫೋನಿನ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗಾದರೇ ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ಹೈ ರೆಸಲ್ಯೂಶನ್ ಡಿಸ್‌ಪ್ಲೇ

ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.8 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಹಾಗೆಯೇ ಈ ಗೇಮಿಂಗ್ ಫೋನಿನ ಡಿಸ್‌ಪ್ಲೇ ರೀಫ್ರೆಶ್‌ ರೇಟ್‌ 165Hz ಸಾಮರ್ಥ್ಯದಲ್ಲಿದ್ದು, ಸ್ಕ್ರೀನ್‌ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ 91.28 ಆಗಿದೆ. ಪ್ರಖರತೆಯ ಸಾಮರ್ಥ್ಯವು ಅಧಿಕವಾಗಿದೆ.

ವೇಗದ ಪ್ರೊಸೆಸರ್

ವೇಗದ ಪ್ರೊಸೆಸರ್

ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 888 ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ 11 ಓಎಸ್‌ ಸಪೋರ್ಟ್ ಸಹ ಪಡೆದಿದೆ. ಈ ಪ್ರೊಸೆಸರ್ ಗೇಮಿಂಗ್‌ಗೆ ಅತ್ಯುತ್ತಮ ವೇಗ ನೀಡಲಿದೆ. ಅವುಗಳು ಕ್ರಮವಾಗಿ 8GB RAM + 128GB ಮತ್ತು 12GB RAM + 256GB ಆಗಿವೆ.

64ಎಂಪಿ ಕ್ಯಾಮೆರಾ

64ಎಂಪಿ ಕ್ಯಾಮೆರಾ

ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನಿನಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಇದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಎರಡನೇ ಕ್ಯಾಮೆರಾವು 8ಎಂಪಿ ಹಾಗೂ ತೃತೀಯ 2ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಲ್ಫಿಗಾಗಿ ಅತ್ಯುತ್ತಮ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್‌ 5,050mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ 66W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ DTS:X ಆಡಿಯೊ ಬೆಂಬಲ, ಲಿಕ್ವಿಡ್‌ ಕೂಲಿಂಗ್, ಗೇಮ್‌ ಬೂಸ್ಟ್ ಬಟನ್ ಸೌಲಭ್ಯಗಳನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ ಮ್ಯಾಜಿಕ್ 6 ಗೇಮಿಂಗ್ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. 8GB RAM + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 3,799 (ಭಾರತದಲ್ಲಿ ಅಂದಾಜು 42,700ರೂ. ಆಗಿದೆ) ಇನ್ನು 12GB RAM + 256GB ವೇರಿಯಂಟ್ ಬೆಲೆಯು CNY 4,099 (ಭಾರತದಲ್ಲಿ ಅಂದಾಜು 46,000ರೂ. ಎನ್ನಲಾಗಿದೆ)

Best Mobiles in India

English summary
Red Magic 6 With 165Hz Refresh Rate Launched: Price, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+