Home
ಸುದ್ದಿಜಾಲ

ರೆಡ್‌ ಮ್ಯಾಜಿಕ್‌ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಈಗ ಭಾರತಕ್ಕೆ! ಬೆಲೆ ಎಷ್ಟಿರಬಹುದು?

ರೆಡ್ ಮ್ಯಾಜಿಕ್ (Red Magic) ಅಂತಿಮವಾಗಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ ಆಗಿರುವ ರೆಡ್ ಮ್ಯಾಜಿಕ್ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ (Red Magic 9 Pro gaming smartphone) ಅನ್ನು ಭಾರತದಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ರೆಡ್ ಮ್ಯಾಜಿಕ್ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಇದೀಗ ಭಾರತದಲ್ಲಿ ಖರೀದಿ ಮಾಡಬಹುದಾಗಿದೆ. ಡಿ.2023 ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಈ ಫೋನ್‌ ಅನ್ನು ಲಾಂಚ್‌ ಮಾಡಲಾಗಿತ್ತು. ಆದರೆ ಈಗ ಈ ಫೋನ್‌ಗಳನ್ನು ತನ್ನ ಜಾಗತಿಕ ವೆಬ್‌ಸೈಟ್‌ನಿಂದ ಭಾರತೀಯ ಗ್ರಾಹಕರಿಗೆ ರವಾನಿಸುತ್ತಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿದೆ, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರೆಡ್‌ ಮ್ಯಾಜಿಕ್‌ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಈಗ ಭಾರತಕ್ಕೆ!

ರೆಡ್ ಮ್ಯಾಜಿಕ್ 9 ಪ್ರೊ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.8 ಇಂಚಿನ ಪೂರ್ಣ ಹೆಚ್‌ಡಿ+ OLED ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 960Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಪಡೆದಿದೆ. ಹಾಗೆಯೇ ಡಿಸಿಐ-P3 ಬಣ್ಣದ ಹರವು 100% ಅನ್ನು ಆವರಿಸುತ್ತದೆ ಮತ್ತು 1600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಫೋನ್‌ನಲ್ಲಿ ಹೊಸ ಅನುಭವ ಪಡೆಯುವಂತೆ ಮಾಡಲಿದೆ. ಇದರ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಗೇಮಿಂಗ್‌ಗಾಗಿ ಟ್ರಿಗ್ಗರ್‌ ಆಯ್ಕೆ ಪಡೆದುಕೊಂಡಿದೆ.

ರೆಡ್ ಮ್ಯಾಜಿಕ್ 9 ಪ್ರೊ ಪ್ರೊಸೆಸರ್‌ ವಿವರ: ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೊ 750 ಜಿಪಿಯು ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ ಫೋನ್ ಯುಎಫ್‌ಎಸ್ 4.0 ತಂತ್ರಜ್ಞಾನದೊಂದಿಗೆ ಬಹು RAM ಮತ್ತು ಸ್ಟೋರೇಜ್‌ ಆಯ್ಕೆಗಳನ್ನು ನೀಡುತ್ತದೆ. ಇದು ರೆಡ್‌ ಮ್ಯಾಜಿಕ್‌ ಓಎಸ್‌ 9.0 ನೊಂದಿಗೆ ಆಂಡ್ರಾಯ್ಡ್‌ 14 ಅನ್ನು ರನ್‌ ಮಾಡಲಿದೆ.

ರೆಡ್‌ ಮ್ಯಾಜಿಕ್‌ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಈಗ ಭಾರತಕ್ಕೆ!

ರೆಡ್ ಮ್ಯಾಜಿಕ್ 9 ಪ್ರೊ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 16 ಮೆಗಾಪಿಕ್ಸೆಲ್ ಅಂಡರ್-ಡಿಸ್ಪ್ಲೇ ಫ್ರಂಟ್ ಕ್ಯಾಮೆರಾವನ್ನು ಈ ಫೋನ್‌ ಪಡೆದುಕೊಂಡಿದ್ದು, ಈ ಸೆನ್ಸರ್‌ಗಳು ಬಳಕೆದಾರರಿಗೆ ಭಿನ್ನ ಫೀಚರ್ಸ್‌ ಆಯ್ಕೆ ಮೂಲಕ ಉತ್ತಮ ವಿಡಿಯೋ ಹಾಗೂ ಫೋಟೋಗಳನ್ನು ನೀಡಲಿವೆ.

ರೆಡ್ ಮ್ಯಾಜಿಕ್ 9 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್ 6500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರ ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್, ಡ್ಯುಯಲ್ ಸ್ಪೀಕರ್‌ಗಳು, ಡಿಟಿಎಸ್‌:ಎಕ್ಸ್‌ ಅಲ್ಟ್ರಾ ಬೆಂಬಲ ಮತ್ತು ಮೂರು ಮೈಕ್ರೊಫೋನ್‌ ಆಯ್ಕೆ ಪಡೆದುಕೊಂಡಿದೆ. 5G, ವೈ-ಫೈ 6E, ಬ್ಲೂಟೂತ್ ಆವೃತ್ತಿ 5.4, ಯುಎಸ್‌ಬಿ ಟೈಪ್-ಸಿ ಹಾಗೂ ಎನ್ಎಫ್‌ಸಿ ಕನೆಕ್ಟಿವಿಟಿ ಫೀಚರ್ಸ್‌ ಪಡೆದಿದ್ದು, 163.98×76.35×8.9mm ಅಳತೆ ಮತ್ತು 229g ತೂಕ ಹೊಂದಿದೆ.

ರೆಡ್‌ ಮ್ಯಾಜಿಕ್‌ 9 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಈಗ ಭಾರತಕ್ಕೆ!

ರೆಡ್ ಮ್ಯಾಜಿಕ್ 9 ಪ್ರೊನ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 12GB + 256GB ಸ್ಟೋರೇಜ್‌ ವೇರಿಯಂಟ್‌ $649 (ಸುಮಾರು 54,038 ರೂ.ಗಳು) ಬೆಲೆಯನ್ನು ಹೊಂದಿದೆ. ಜೊತೆಗೆ ಉನ್ನತ-ಮಟ್ಟದ ಡಿವೈಸ್‌ ಆದ 16GB + 512GB ವೇರಿಯಂಟ್ $799 (ಸುಮಾರು 66,528 ರೂ.ಗಳ) ಬೆಲೆ ಹೊಂದಿದೆ. ಆದರೆ ಗ್ರಾಹಕರು ಕೆಲವು ಹೆಚ್ಚುವರಿ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ಈ ಮೇಲೆ ಉಲ್ಲೇಖಿಸಿದ ಬೆಲೆಗಿಂತ ಇನ್ನೂ ಹದಿನೈದು ಸಾವಿರಕ್ಕೂ ಅಧಿಕ ಹಣ ಪಾವತಿ ಮಾಡಬೇಕಿದೆ.

ಈ ಬೆಲೆಗಳು ಹೆಚ್ಚಾಗಿ ಕಾಣಿಸಬಹುದಾದರೂ, ರೆಡ್ ಮ್ಯಾಜಿಕ್ 9 ಪ್ರೊ ROG ಫೋನ್ 8 ಪ್ರೊಗಿಂತ ತುಲನಾತ್ಮಕವಾಗಿ ಕಡಿಮೆ ವೆಚ್ಚವನ್ನು ಹೊಂದಿದೆ. ಇದು ಭಾರತದಲ್ಲಿ ಲಭ್ಯವಿರುವ ಏಕೈಕ ಪ್ರಸ್ತುತ-ಜನ್ ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿದ್ದು, ROG ಫೋನ್ 8 ಪ್ರೊ ಆರಂಭಿಕ ಬೆಲೆ ₹94,999 (16GB + 512GB), ಹಾಗೂ 24GB + 1TB ಸ್ಟೋರೇಜ್‌ ವೇರಿಯಂಟ್‌ ಬೆಲೆ ₹1,19,999 ರೂ.ಗಳಾಗಿದೆ.

Best Mobiles in India

English summary
Red Magic 9 Pro gaming smartphone is now available for purchase in India. This phone was launched in the global market in December 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+