Home
ಸುದ್ದಿಜಾಲ

ಸದ್ಯದಲ್ಲೇ 24GB RAM ಸ್ಮಾರ್ಟ್‌ಫೋನ್‌ ಲಾಂಚ್!..ದಂಗಾದ ಮೊಬೈಲ್‌ ಮಾರುಕಟ್ಟೆ!

ಮೊಬೈಲ್‌ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಅಧಿಕ RAM ಇರುವ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಧಿಕ RAM ಇದ್ರೆ, ಫೋನ್‌ ಮಲ್ಟಿ ಟಾಸ್ಕ್‌ ಕೆಲಸಗಳನ್ನು ಸುಲಲಿತವಾಗಿ, ತಡೆ ರಹಿತವಾಗಿ ಮಾಡಬಲ್ಲದು. ಇದಕ್ಕೆ ಪೂರಕವೆಂಬಂತೆ ಇದೀಗ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ ಬರೋಬ್ಬರಿ 24GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌!

ಹೌದು, ನುಬಿಯಾ ಮೊಬೈಲ್‌ ಸಂಸ್ಥೆಯು ಇದೀಗ 24GB RAM ಸಾಮರ್ಥ್ಯ ಇರುವ 'ರೆಡ್‌ ಮ್ಯಾಜಿಕ್‌ 8S ಪ್ರೊ' (RedMagic 8S Pro) ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ರೆಡಿಯಾಗಿದೆ. ನುಬಿಯಾ ಸಂಸ್ಥೆಯ ಫೋನ್‌ಗಳು ಗೇಮಿಂಗ್‌ಗೆ ಹೆಸರುವಾಸಿ ಆಗಿದ್ದು, ಸಾಮಾನ್ಯವಾಗಿ ಗೇಮಿಂಗ್‌ ಫೋನ್‌ಗಳು 8GB RAM, 12GB RAM ಅಥವಾ 16GB RAM ಸಾಮರ್ಥ್ಯದಲ್ಲಿ ಲಭ್ಯ. ಆದ್ರೆ, ಬರಲಿರುವ ಈ ನೂತನ ಫೋನ್‌ 24GB RAM ಹೊಂದಿರುವುದು ಖಚಿತವಾಗಿದೆ.

ಸದ್ಯದಲ್ಲೇ 24GB RAM ಸ್ಮಾರ್ಟ್‌ಫೋನ್‌ ಲಾಂಚ್!..ದಂಗಾದ ಮೊಬೈಲ್‌ ಮಾರುಕಟ್ಟೆ!

ನುಬಿಯಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ರೆಡ್‌ ಮ್ಯಾಜಿಕ್‌ 8S ಪ್ರೊ ಫೋನ್‌ ಅನ್ನು ಇದೇ ಜುಲೈ 5 ರಂದು ಮಾರುಕಟ್ಟೆಗೆ ಅನಾವರಣ ಮಾಡಲಿದೆ. ಈ ದೈತ್ಯ ಫೋನ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದೆ. ಹಾಗಾದರೆ ರೆಡ್‌ ಮ್ಯಾಜಿಕ್‌ 8S ಪ್ರೊ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್‌ ಮ್ಯಾಜಿಕ್‌ 8S ಪ್ರೊ ಸ್ಮಾರ್ಟ್‌ಫೋನ್‌ 6.8 ಇಂಚಿನ ಪೂರ್ಣ ಹೆಚ್‌ಡಿ+ ಓಎಲ್‌ಇಡಿ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರುವುದು ಬಹುತೇಕ ಖಚಿತವಾಗಿದೆ.

ಹಾಗೆಯೇ ರೆಡ್‌ ಮ್ಯಾಜಿಕ್‌ 8S ಪ್ರೊ ಫೋನ್‌ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿರಲಿದೆ. ಫ್ರಂಟ್ ಕ್ಯಾಮೆರಾ ಅಂಡರ್‌ ಡಿಸ್‌ಪ್ಲೇ ಮಾದರಿಯ ರಚನೆ ಪಡೆದಿರಲಿದೆ. ಇನ್ನು ಈ ಫೋನ್‌ 6000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿರಲಿದೆ. ಇನ್ನು ರೆಡ್‌ ಮ್ಯಾಜಿಕ್‌ 8S ಪ್ರೊ ಫೋನ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಅಡ್ರಿನೊ 740 GPU ಸಪೋರ್ಟ್‌ ಸಹ ಪಡೆದಿರಲಿದೆ.

ಜನಪ್ರಿಯ ನುಬಿಯಾ ಸಂಸ್ಥೆಯು ಇತ್ತೀಚಿಗೆ ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಈ ಟ್ಯಾಬ್‌ 12.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 2,560 x 1,600 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇನ್ನು ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್ ನಲ್ಲಿ ಇದ್ದು, DLB ಲೇಯರ್ ಮತ್ತು ಲೀಯಾದಿಂದ 3D ಲೈಟ್‌ಫೀಲ್ಡ್ ಮೋಡ್ ಟೆಕ್ನಾಲಜಿಯನ್ನು ಹೊಂದಿದೆ.

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಡಿವೈಸ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 256GB ಇಂಟರ್‌ ಸ್ಟೊರೇಜ್‌ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ ಗ್ರಾಹಕರು ಎಸ್‌ಡಿ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಮೆಮೊರಿ ವಿಸ್ತರಿಸುವ ಅವಕಾಶ ಇದೆ. ಇನ್ನು ಈ ಟ್ಯಾಬ್ಲೆಟ್‌ ಸ್ಪೋರ್ಟ್ಸ್ ಡ್ಯುಯಲ್ 16ಎಂಪಿ ರಿಯರ್‌ ಕ್ಯಾಮೆರಾಗಳನ್ನು ಹೊಂದಿದ್ದು, ಎಲ್ಇಡಿ ಫ್ಲ್ಯಾಷ್ ಕೂಡ ಪಡೆದಿದೆ. ಇದರೊಂದಿಗೆ ಡ್ಯುಯಲ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

Best Mobiles in India

English summary
RedMagic 8S Pro Coming with Massive 24GB RAM, Launching on July 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+