ಲಾಂಚ್ ಆಯ್ತು 'ರೆಡ್ ಮ್ಯಾಜಿಕ್ 9 ಪ್ರೊ' ಸರಣಿ!..ಭಾರೀ ಅಚ್ಚರಿಯ ಫೀಚರ್ಸ್!
ಗೇಮಿಂಗ್ ಮೊಬೈಲ್‌ಗಳಿಗೆ ಪ್ರಮುಖ ಬ್ರ್ಯಾಂಡ್ ಎನಿಸಿರುವ ನುಬಿಯಾ ಬ್ರ್ಯಾಂಡ್ ತನ್ನ ಬಹುನಿರೀಕ್ಷಿತ ರೆಡ್ ಮ್ಯಾಜಿಕ್ 9 ಪ್ರೊ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಎರಡು ಮಾಡೆಲ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ರೆಡ್ ಮ್ಯಾಜಿಕ್ 9 ಪ್ರೊ+ ಹಾಗೂ ರೆಡ್ ಮ್ಯಾಜಿಕ್ 9 ಪ್ರೊ ಆಗಿವೆ.
ಹೌದು, ನುಬಿಯಾ ಸಂಸ್ಥೆಯು ನೂತನವಾಗಿ ರೆಡ್ ಮ್ಯಾಜಿಕ್ 9 ಪ್ರೊ+ ಹಾಗೂ ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಗೇಮಿಂಗ್ ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಸಾಮರ್ಥ್ಯವನ್ನು ಹಾಗೂ 6500mAh ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದಿವೆ.

ರೆಡ್ ಮ್ಯಾಜಿಕ್ 9 ಪ್ರೊ+ ಫೋನ್ 24GB RAM + 1TB ಸ್ಟೋರೇಜ್ ವೇರಿಯಂಟ್‌ನ ಆಯ್ಕೆ ಕೂಡಾ ಪಡೆದಿದೆ. ಇನ್ನು ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ 12GB RAM + 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನುಳಿದಂತೆ ಈ ಎರಡು ಫೋನ್‌ಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ ಮ್ಯಾಜಿಕ್ 9 ಪ್ರೊ+ ಫೋನ್ ಫೀಚರ್ಸ್
ರೆಡ್ ಮ್ಯಾಜಿಕ್ 9 ಪ್ರೊ+ ಸ್ಮಾರ್ಟ್‌ಫೋನ್ 6.8 ಇಂಚಿನ ಓಎಲ್‌ಇಡಿ BOE Q9+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಸಾಮರ್ಥ್ಯ ಕೂಡಾ ಪಡೆದಿದೆ.

ಹಾಗೆಯೇ ಈ ಫೋನ್ 16GB + 256GB, 16GB + 512GB 24GB + 1TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಜೊತೆಗೆ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸಹ ನೀಡಲಾಗಿದೆ. ಇದು 5500mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದಕ್ಕೆ ಪೂರಕವಾಗಿ 165W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿದೆ.
ರೆಡ್ ಮ್ಯಾಜಿಕ್ 9 ಪ್ರೊ ಫೋನ್ ಫೀಚರ್ಸ್
ರೆಡ್ ಮ್ಯಾಜಿಕ್ 9 ಪ್ರೊ ಫೋನ್ ಕೂಡಾ 6.8 ಇಂಚಿನ ಓಎಲ್‌ಇಡಿ BOE Q9+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್ ಸಾಮರ್ಥ್ಯ ಕೂಡಾ ಪಡೆದಿದೆ.

ಹಾಗೆಯೇ ಈ ಫೋನ್ 8GB + 256GB, 12GB + 256GB ಹಾಗೂ 12GB + 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಕೂಡಾ ಹೊಂದಿದೆ. ಈ ವೇರಿಯಂಟ್ ಕೂಡಾ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 6,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆಇದ್ದು, ಇದಕ್ಕೆ ಪೂರಕವಾಗಿ 80 ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಹೊಂದಿದೆ.
ಬೆಲೆ ಮಾಹಿತಿ
ಆರಂಭಿಕ ವೇರಿಯಂಟ್ ಮಾಡೆಲ್‌ಗಳ ಬೆಲೆ ಹೀಗಿವೆ
* ರೆಡ್ ಮ್ಯಾಜಿಕ್ 9 ಪ್ರೊ+ - 16GB + 256GB ಬೆಲೆಯು 5499 ಯುವಾನ್ (ಭಾರತದಲ್ಲಿ ಅಂದಾಜು 64,600ರೂ.)
* ರೆಡ್ ಮ್ಯಾಜಿಕ್ 9 ಪ್ರೊ - 8GB + 256GB ಬೆಲೆಯು 4399 ಯುವಾನ್ (ಭಾರತದಲ್ಲಿ ಅಂದಾಜು 51,600ರೂ.)


Click it and Unblock the Notifications








