ಈ ರೆಡ್ಮಿ ಮೊಬೈಲ್‌ಗೆ ಸಖತ್ ರಿಯಾಯಿತಿ!..10,000ರೂ. ಒಳಗೆ ಲಭ್ಯ!
ಶಿಯೋಮಿ ಮೊಬೈಲ್ ಸಂಸ್ಥೆಯು ರೆಡ್ಮಿ ಸರಣಿಯ ಮೂಲಕ ಹಲವು ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಗಮನ ಸೆಳೆದಿದೆ. ಮುಖ್ಯವಾಗಿ ಶಿಯೋಮಿ ಬಹುತೇಕ ರೆಡ್ಮಿ ಫೋನ್‌ಗಳು ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇವೆ. ಆ ಪೈಕಿ ರೆಡ್ಮಿ 10 ಸ್ಮಾರ್ಟ್‌ಫೋನ್ ಸಹ ಒಂದಾಗಿದ್ದು, ಇದೀಗ ಈ ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ರಿಯಾಯಿತಿ ಕಾಣಿಸಿದೆ.
ಹೌದು, ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ನಲ್ಲಿ ರೆಡ್ಮಿ 10 ಮೊಬೈಲ್ 33% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ಫೋನ್ (4GB RAM + 64GB) 14,999ರೂ. ಪ್ರೈಸ್‌ಟ್ಯಾಗ್ ಅನ್ನು ಪಡೆದಿದ್ದು, ಈಗ ಡಿಸ್ಕೌಂಟ್‌ನಲ್ಲಿ 9,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಖರೀದಿದಾರರಿಗೆ ಎಕ್ಸ್‌ಚೇಂಜ್ ಆಫರ್ ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಕೊಡುಗೆ ಸಹ ದೊರೆಯುತ್ತದೆ.

ರೆಡ್ಮಿ 10 ಮೊಬೈಲ್ ಮೀಡಿಯಾಟೆಕ್ ಹಿಲಿಯೋ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೊಬೈಲ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ದಲ್ಲಿ ಇದ್ದು, ಸೆಲ್ಫಿ ಕ್ಯಾಮೆರಾವು 8 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ರೆಡ್ಮಿ 10 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 10 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ರೆಡ್ಮಿ 10 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 83.4% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಪಡೆದಿದ್ದು, ಇದು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ.
ರೆಡ್ಮಿ 10 ಪ್ರೊಸೆಸರ್ ಯಾವುದು : ರೆಡ್ಮಿ 10 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಬೆಂಬಲ ಪಡೆದಿದೆ. ಜೊತೆಗೆ 4GB RAM ಮತ್ತು 64GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ರೆಡ್ಮಿ 10 ಕ್ಯಾಮೆರಾ ಸೆನ್ಸಾರ್ : ರೆಡ್ಮಿ 10 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಎಂಪಿ f/1.8 ಲೆನ್ಸ್, ಎರಡನೇ ಕ್ಯಾಮೆರಾ 8 ಎಂಪಿ f/2.2 ಲೆನ್ಸ್, ಮೂರನೇ ಕ್ಯಾಮೆರಾ 2 MP f/2.4 ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಎಂಪಿ f/2.4 ಲೆನ್ಸ್ ಅನ್ನು ಪಡೆದಿದೆ. ಇನ್ನು ಈ ಕ್ಯಾಮೆರಾ LED ಫ್ಲ್ಯಾಶ್, HDR, ಪನೋರಮಾ ಫೀಚರ್ಸ್‌ಗಳನ್ನು ಪಡೆದಿದ್ದು, ಹಾಗೆಯೇ 8 ಎಂಪಿ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ರೆಡ್ಮಿ 10 ಬ್ಯಾಟರಿ ಮತ್ತು ಇತರೆ : ರೆಡ್ಮಿ 10 ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಇದು 18W ಫಾಸ್ಟ್ ಚಾರ್ಜಿಂಗ್ ಹಾಗೂ 9W ರಿವರ್ಸ್ ಚಾರ್ಜಿಂಗ್ ಸೌಲಭ್ಯ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಜೊತೆಗೆ ಆಕ್ಸಿಲೆರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಪಡೆದಿದೆ.
ರೆಡ್ಮಿ 10 ಕಲರ್ ಮತ್ತು ಮೆಮೊರಿ : ರೆಡ್ಮಿ 10 ಸ್ಮಾರ್ಟ್‌ಫೋನ್ ಭಾರತದಲ್ಲಿ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ ಬ್ಲೂ, ಬ್ಲ್ಯಾಕ್ ಹಾಗೂ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.


Click it and Unblock the Notifications







