ಜನಪ್ರಿಯ ಈ ರೆಡ್ಮಿ ಮೊಬೈಲ್‌ಗೆ ಈಗ ಬಿಗ್ ಆಫರ್!..ಖರೀದಿ ಬೆಲೆ ಎಷ್ಟು?
ಶಿಯೋಮಿ ಮೊಬೈಲ್ ಸಂಸ್ಥೆಯು ರೆಡ್ಮಿ ಸರಣಿಯ ಮೂಲಕ ಹಲವು ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಮುಖ್ಯವಾಗಿ ಸಂಸ್ಥೆಯ ಬಹುತೇಕ ರೆಡ್ಮಿ ಫೋನ್‌ಗಳು ಫೋನ್‌ಗಳು ಬಜೆಟ್ ದರದಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ರೆಡ್ಮಿ 10 ಪವರ್ ಸ್ಮಾರ್ಟ್‌ಫೋನ್ ಸಹ ಒಂದಾಗಿದ್ದು, ಇದೀಗ ಈ ಫೋನ್ ಬೆಲೆಯಲ್ಲಿ ಸಖತ್ ರಿಯಾಯಿತಿ ಕಾಣಿಸಿದೆ.
ಹೌದು, ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ ಅಮೆಜಾನ್‌ನಲ್ಲಿ ರೆಡ್ಮಿ 10 ಪವರ್ ಫೋನ್ 34% ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಫೋನ್ (8GB RAM, 128GB) 18,999ರೂ. ಪ್ರೈಸ್‌ಟ್ಯಾಗ್ ಅನ್ನು ಪಡೆದಿದ್ದು, ಈಗ ಡಿಸ್ಕೌಂಟ್‌ನಲ್ಲಿ 12,499ರೂ. ಗಳ ದರದಲ್ಲಿ ಖರೀದಿಗೆ ದೊರೆಯುತ್ತದೆ. ಹಾಗೆಯೇ ಖರೀದಿದಾರರಿಗೆ ಎಕ್ಸ್‌ಚೇಂಜ್ ಆಫರ್ ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಕೊಡುಗೆ ಸಹ ಲಭ್ಯ.

ರೆಡ್ಮಿ 10 ಪವರ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಪಡೆದಿದ್ದು, ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇನ್ನು ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ದಲ್ಲಿ ಇದ್ದು, ಸೆಲ್ಫಿ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ರೆಡ್ಮಿ 10 ಪವರ್ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 10 ಪವರ್ ಡಿಸ್‌ಪ್ಲೇ ವಿನ್ಯಾಸ ಹೇಗಿದೆ : ರೆಡ್ಮಿ 10 ಪವರ್ ಸ್ಮಾರ್ಟ್‌ಫೋನ್ 6.7 ಇಂಚಿನ HD+ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಹೊಂದಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಪಡೆದುಕೊಂಡಿದೆ.
ರೆಡ್ಮಿ 10 ಪವರ್ ಪ್ರೊಸೆಸರ್ ಸಾಮರ್ಥ್ಯ ಏನು : ರೆಡ್ಮಿ 10 ಪವರ್ ಮೊಬೈಲ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ನಲ್ಲಿ MIUI 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.
ಹಾಗೆಯೇ ಈ ಫೋನಿನಲ್ಲಿ 3GB ವರೆಗಿನ ಇಂಟರ್‌ಬಿಲ್ಟ್ ಸ್ಟೋರೇಜ್ 3 GB ವರೆಗೆ ಬಳಸಿಕೊಂಡು ಬಳಕೆದಾರರು ಲಭ್ಯವಿರುವ RAM ಸಾಮರ್ಥ್ಯ ಅನ್ನು ವಿಸ್ತರಿಸಬಹುದು. ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ರೆಡ್ಮಿ 10 ಪವರ್ ಕ್ಯಾಮೆರಾ ಸೆನ್ಸಾರ್ ಎಷ್ಟಿದೆ : ರೆಡ್ಮಿ 10 ಪವರ್ ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ f/2.4 ಅಪರ್ಚರ್ ಲೆನ್ಸ್ ಅನ್ನು ಒಳಗೊಂಡಿದೆ. ಹಾಗೆಯೇ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಇದು ಪಡೆದಿದೆ.
ರೆಡ್ಮಿ 10 ಪವರ್ ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು ಏನು : ರೆಡ್ಮಿ 10 ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಒಳಗೊಂಡಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಈ ಫೋನ್ ರಿಯರ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.


Click it and Unblock the Notifications








