ರೆಡ್ಮಿ ಫೋನ್ ಖರೀದಿಸುವ ಗ್ರಾಹಕರೇ, ಈ ಆಫರ್ ಕಳ್ಕೋಬೇಡಿ!..ಸಖತ್ ಬೆಲೆ ಇಳಿಕೆ!
ದೈತ್ಯ ಇ ಕಾಮರ್ಸ್ ವೆಬ್‌ಸೈಟ್ ಆಗಿ ಗುರುತಿಸಿಕೊಂಡಿರುವ ಅಮೆಜಾನ್ ದಸರಾ ಪ್ರಯುಕ್ತ ಇದೀಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಿ ಶಾಪಿಂಗ್ ಪ್ರಿಯರು ಅಚ್ಚರಿಯ ಕೊಡುಗೆ ನೀಡಿದೆ. ಈ ಸೇಲ್‌ನಲ್ಲಿ ಶಿಯೋಮಿ ಸಂಸ್ಥೆಯ ಕೆಲವು ಆಯ್ದ ಮೊಬೈಲ್‌ಗಳು ಬೊಂಬಾಟ್ ರಿಯಾಯಿತಿ ಪಡೆದಿದ್ದು, ಆ ಪೈಕಿ ರೆಡ್ಮಿ 10 ಪವರ್ ಮೊಬೈಲ್ ಮೊಬೈಲ್ ಭರ್ಜರಿ ಆಫರ್ ಬೆಲೆಗೆ ಖರೀದಿಗೆ ಲಭ್ಯ ಇದೆ.
ಹೌದು, ಅಮೆಜಾನ್ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರೆಡ್ಮಿ 10 ಪವರ್ ಮೊಬೈಲ್ ಶೇ. 44% ನೇರ ಡಿಸ್ಕೌಂಟ್ ಹೊಂದಿದ್ದು, 8 GB RAM + 128 GB ವೇರಿಯಂಟ್ ಫೋನ್ 10,649 ರೂ. ಗಳ ದರದಲ್ಲಿ ಲಭ್ಯ ಇದೆ. ಇದಲ್ಲದೇ ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆ ಹಾಗೂ ಇತರೆ ಆಫರ್ ಸೇರಿ ಈ ಫೋನ್ ಅನ್ನು 9,900ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಇನ್ನು ಮೊಟೊ ಸಂಸ್ಥೆಯ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಬಲದ ಆಯ್ಕೆ ಪಡೆದಿದೆ. ಹಾಗೆಯೇ ಈ ಫೋನ್ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ಆಯ್ಕೆ ಸಹ ಪಡೆದುಕೊಂಡಿದೆ. ಹಾಗಾದರೇ ಇನ್ನುಳಿದಂತೆ ರೆಡ್ಮಿ 10 ಪವರ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ವಿನ್ಯಾಸ ರಚನೆ ಹೀಗಿದೆ
ರೆಡ್ಮಿ 10 ಪವರ್ ಮೊಬೈಲ್ 6.7 ಇಂಚಿನ HD+ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಇದರ ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ.
ಪ್ರೊಸೆಸರ್ ಪವರ್ ಹೀಗಿದೆ
ರೆಡ್ಮಿ 10 ಪವರ್ ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ನಲ್ಲಿ MIUI 13 ಸಪೋರ್ಟ್ ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಕೂಡಾ ಒಳಗೊಂಡಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ರೆಡ್ಮಿ 10 ಪವರ್ ಮೊಬೈಲ್ ಡ್ಯುಯೆಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ f/2.4 ಅಪರ್ಚರ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಇದು ಹೊಂದಿದೆ.
ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಆಯ್ಕೆಗಳು
ರೆಡ್ಮಿ 10 ಪವರ್ ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G LTE, Wi-Fi, ಬ್ಲೂಟೂತ್ v5, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಪಡೆದುಕೊಂಡಿದೆ. ಇನ್ನು ಈ ಫೋನ್ ರಿಯರ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ.


Click it and Unblock the Notifications








