ರೆಡ್ಮಿಯ ಈ ಜನಪ್ರಿಯ ಫೋನ್ ಬೆಲೆಯಲ್ಲಿ ಈಗ ಭಾರೀ ಇಳಿಕೆ!
ಜನಪ್ರಿಯ ಶಿಯೋಮಿ ಮೊಬೈಲ್ ಸಂಸ್ಥೆಯು ಅಗ್ಗದ ಹಾಗೂ ಹೈ ಎಂಡ್ ಮಾದರಿಯ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳಲ್ಲಿ ರೆಡ್ಮಿ 10 ಪವರ್ ಫೋನ್ ಮೊಬೈಲ್ ಬಜೆಟ್ ಬೆಲೆಯಲ್ಲಿ ಈಗಾಗಲೇ ಸಕತ್ ಸದ್ದು ಮಾಡಿದ್ದು, ಈ ಫೋನ್ ಈಗ ಮತ್ತಷ್ಟು ರಿಯಾಯಿತಿ ಪಡೆದು ಗ್ರಾಹಕರ ಗಮನ ಸೆಳೆದಿದೆ. ಅಮೆಜಾನ್ ತಾಣದಲ್ಲಿ ಈ ಫೋನ್ ಆಕರ್ಷಕ ಡಿಸ್ಕೌಂಟ್ ಬೆಲೆಗೆ ಲಭ್ಯ.
ಹೌದು, ಅಮೆಜಾನ್ ತಾಣದಲ್ಲಿ ಶಿಯೋಮಿ ಮೊಬೈಲ್ ಕಂಪನಿಯ ರೆಡ್ಮಿ 10 ಪವರ್ ಮೊಬೈಲ್ ಬೆಲೆಯಲ್ಲಿ ಶೇ. 48% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ 9,899ರೂ. ಗಳ ಆಫರ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಮತ್ತಷ್ಟು ಡಿಸ್ಕೌಂಟ್ ಕೊಡುಗೆ ಸಹ ಪಡೆಯಬಹುದು.

ಅಂದಹಾಗೆ ಶಿಯೋಮಿ ಸಂಸ್ಥೆಯ ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೌಲಭ್ಯದಲ್ಲಿ ಇದ್ದು, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ರೆಡ್ಮಿ 10 ಪವರ್ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 10 ಪವರ್ ಫೋನ್ - ಫೀಚರ್ಸ್
ರೆಡ್ಮಿ 10 ಪವರ್ ಮೊಬೈಲ್ 6.7 ಇಂಚಿನ HD+ IPS LCD ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಇದರ ಡಿಸ್‌ಪ್ಲೇ 20.6:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಪಡೆದಿದೆ. ಇದು ತನ್ನ ವರ್ಗದಲ್ಲೇ ಉತ್ತಮ ಡಿಸ್‌ಪ್ಲೇ ಎನಿಸಿದೆ.

ರೆಡ್ಮಿ 10 ಪವರ್ ಮೊಬೈಲ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ನಲ್ಲಿ MIUI 13 ಸಪೋರ್ಟ್ ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಕೂಡಾ ಪಡೆದುಕೊಂಡಿದೆ.
ರೆಡ್ಮಿ 10 ಪವರ್ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ ಲೆನ್ಸ್ ಮತ್ತು ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ f/2.4 ಅಪರ್ಚರ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದು 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಇದು ಹೊಂದಿದೆ.
ರೆಡ್ಮಿ 10 ಪವರ್ ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ.
ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G LTE, Wi-Fi, ಬ್ಲೂಟೂತ್ v5, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೌಲಭ್ಯಗಳನ್ನು ಈ ಫೋನ್ ಪಡೆದುಕೊಂಡಿದೆ. ಇನ್ನು ಈ ಫೋನ್ ರಿಯರ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಬ್ಲ್ಯಾಕ್ ಕಲರ್ ಆಯ್ಕೆಯನ್ನು ಈ ಫೋನ್ ಪಡೆದಿದೆ.
.


Click it and Unblock the Notifications








