Home
ಸುದ್ದಿಜಾಲ

ರೆಡ್ಮಿ 10 ಪ್ರೈಮ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಭಾರೀ ಉಳಿತಾಯ!

ಬಜೆಟ್‌ ಬೆಲೆಯಲ್ಲಿ ಹೊಸ ರೆಡ್ಮಿ ಮೊಬೈಲ್‌ ಖರೀದಿಸುವ ಗ್ರಾಹಕರೇ ಇಲ್ಲಿ ಗಮನಿಸಿ. ಅಮೆಜಾನ್‌ ಆಯೋಜಿಸಿರುವ ಅಮೆಜಾನ್ ಗ್ರೇಟ್‌ ಸಮ್ಮರ್ ಸೇಲ್‌ನಲ್ಲಿ ರೆಡ್ಮಿ 10 ಪ್ರೈಮ್ (2022) ಸ್ಮಾರ್ಟ್‌ಫೋನ್‌ ಬೊಂಬಾಟ್ ಡಿಸ್ಕೌಂಟ್‌ ಪಡೆದಿದೆ. ಈ ಮೂಲಕ ಬಜೆಟ್‌ ಪ್ರೈಸ್‌ ಟ್ಯಾಗ್‌ ವಿಭಾಗದಲ್ಲಿ ರೆಡ್ಮಿ 10 ಪ್ರೈಮ್ (2022) ಸ್ಮಾರ್ಟ್‌ಫೋನ್‌ ಮತ್ತಷ್ಟು ಆಕರ್ಷಕ ಎನಿಸಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣ ಗ್ರೇಟ್ ಸಮ್ಮರ್ ಸೇಲ್‌ ಆಯೋಜಿಸಿದೆ. ಈ ಮಾರಾಟದಲ್ಲಿ ರೆಡ್ಮಿ 10A ಸ್ಮಾರ್ಟ್‌ಫೋನ್‌ 14,999 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಕೆಲವು ಆಯ್ದ ಬ್ಯಾಂಕ್ ಕೊಡುಗೆಯಿಂದಾಗಿ ಈ ಫೋನ್ 11,890 ರೂ. ಗಳಿಗೆ ಖರೀದಿಸಬಹುದಾಗಿದೆ.

ರೆಡ್ಮಿ 10 ಪ್ರೈಮ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಭಾರೀ ಉಳಿತಾಯ!

ರೆಡ್ಮಿ 10A ಸ್ಮಾರ್ಟ್‌ಫೋನ್‌ 4GB RAM + 64 GB ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ ಪವರ್ ಪಡೆದಿದೆ. ಹಾಗಾದರೆ ರೆಡ್ಮಿ 10 ಪ್ರೈಮ್ (2022) ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ರೆಡ್ಮಿ 10 ಪ್ರೈಮ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಭಾರೀ ಉಳಿತಾಯ!

ಪ್ರೊಸೆಸರ್‌ ಪವರ್ ಯಾವುದು : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12.5 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಕ್ಯಾಮರಾ ಸೆಟಪ್ ಫುಲ್‌ ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ರೆಡ್ಮಿ 10 ಪ್ರೈಮ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಭಾರೀ ಉಳಿತಾಯ!

ಬ್ಯಾಟರಿ ಮತ್ತು ಇತರೆ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು 22.5W ಚಾರ್ಜರ್ ಮತ್ತು 9W ವರೆಗೆ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್‌ v5.1, GPS, FM ರೇಡಿಯೋ, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ.

ಮೆಮೊರಿ ಹಾಗೂ ಕಲರ್ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಬೆಲೆ 4GB RAM + 64GB ಸ್ಟೋರೇಜ್ ಹಾಗೂ 6GB RAM + 128GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಫೋನ್ ಆಸ್ಟ್ರಲ್ ವೈಟ್, ಬಿಫ್ರಾಸ್ಟ್ ವೈಟ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Redmi 10 Prime 2022 available at discount price on Amazon. Check discount price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+