Home
ಸುದ್ದಿಜಾಲ

ಸಖತ್ ಬೆಲೆ ಇಳಿಕೆ ಕಂಡ ರೆಡ್ಮಿ 10 ಪ್ರೈಮ್‌ ಫೋನ್‌!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ಶಿಯೋಮಿ ಸಂಸ್ಥೆಯು ಬಜೆಟ್‌ ಬೆಲೆಯಲ್ಲಿ ಹಲವು ಫೋನ್‌ಗಳ ಆಯ್ಕೆ ಹೊಂದಿದ್ದು, ಆ ಪೈಕಿ ರೆಡ್ಮಿ 10 ಪ್ರೈಮ್‌ ಫೋನ್‌ ಸಹ ಒಂದಾಗಿದೆ. ಇದೀಗ ಈ ಫೋನ್ ಅನ್ನು ಗ್ರಾಹಕರು ಭರ್ಜರಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಅಂದಹಾಗೆ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಹೌದು, ಪ್ರಮುಖ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ರೆಡ್ಮಿ 10 ಪ್ರೈಮ್‌ ಫೋನ್ 23% ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆ 14,999ರೂ. ಆಗಿದ್ದು, ಆಫರ್‌ನಲ್ಲಿ 11,499ರೂ. ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ ಹೆಚ್ಚುವರಿಯಾಗಿ ಬ್ಯಾಂಕ್‌ ಕೊಡುಗೆ ಸಹ ಸಿಗಲಿದೆ. ಹಾಗಾದರೇ ಈ ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸಖತ್ ಬೆಲೆ ಇಳಿಕೆ ಕಂಡ ರೆಡ್ಮಿ 10 ಪ್ರೈಮ್‌ ಫೋನ್‌!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9ರಚನೆಯ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಹೊಂದಿದ್ದು, ಅದು 45Hz, 60Hz ಮತ್ತು 90Hz ರಿಫ್ರೆಶ್ ರೇಟ್‌ಗಳ ನಡುವೆ ಬದಲಾಯಿಸಲು ಕಂಟೆಂಟ್ ಫ್ರೇಮ್‌ಗೆ ಹೊಂದಿಕೆಯಾಗುತ್ತದೆ.

ಪ್ರೊಸೆಸರ್‌ ಪವರ್ ಯಾವುದು : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12.5 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಹಾಗೆಯೇ 2GB ವರೆಗಿನ RAM ವಿಸ್ತರಣೆಗೆ ಬೆಂಬಲಿಸಲಿದೆ.

ಸಖತ್ ಬೆಲೆ ಇಳಿಕೆ ಕಂಡ ರೆಡ್ಮಿ 10 ಪ್ರೈಮ್‌ ಫೋನ್‌!..ಬ್ಯಾಂಕ್‌ ಆಫರ್‌ ಸಹ ಲಭ್ಯ!

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಕ್ಯಾಮರಾ ಸೆಟಪ್ ಫುಲ್‌ ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಇತರೆ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು 22.5W ಚಾರ್ಜರ್ ಮತ್ತು 9W ವರೆಗೆ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್‌ v5.1, GPS, FM ರೇಡಿಯೋ, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ.

ಮೆಮೊರಿ ಹಾಗೂ ಕಲರ್ : ರೆಡ್ಮಿ 10 ಪ್ರೈಮ್‌ ಸ್ಮಾರ್ಟ್‌ಫೋನ್‌ ಬೆಲೆ 4GB RAM + 64GB ಸ್ಟೋರೇಜ್ ಹಾಗೂ 6GB RAM + 128GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಫೋನ್ ಆಸ್ಟ್ರಲ್ ವೈಟ್, ಬಿಫ್ರಾಸ್ಟ್ ವೈಟ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Redmi 10 Prime Price Cut on Amazon: Offer Price and Specifications details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+