ಬಿಡುಗಡೆಗೆ ಸಜ್ಜಾಗುತ್ತಿರುವ ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳ ಬೆಲೆ ಲೀಕ್!

|

ಜನಪ್ರಿಯ ಶಿಯೋಮಿ ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಶಿಯೋಮಿ ರೆಡ್ಮಿ ನೋಟ್ 11 ಸರಣಿಯನ್ನು ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಈಗ ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳನ್ನು ಲಾಂಚ್ ಮಾಡಲು ಸಜ್ಜಾಗಿದೆ. ಈ ಎರಡು ಫೋನ್‌ಗಳು ಈ ಹಿಂದಿನ ರೆಡ್ಮಿ 9A ಮತ್ತು ರೆಡ್ಮಿ 9C ಫೋನ್‌ಗಳ ಯಶಸ್ಸಿನ ಮುಂದುವರಿದ ಭಾಗವಾಗಿವೆ ಎನ್ನಲಾಗಿದೆ. ಇನ್ನು ಈ ಎರಡು ಫೋನ್‌ಗಳು ಬಜೆಟ್ ಲೆವೆಲ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿವೆ. ಬರಲಿರುವ ಈ ಫೋನ್‌ಗಳ ಬೆಲೆ ಇದೀಗ ಈ ಲೀಕ್ ಆಗಿದೆ.

ಬಿಡುಗಡೆಗೆ ಸಜ್ಜಾಗುತ್ತಿರುವ ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳ ಬೆಲೆ ಲೀಕ್

ಹೌದು, ಶಿಯೋಮಿಯು ರೆಡ್ಮಿ 10A ಮತ್ತು ರೆಡ್ಮಿ 10C ಬಿಡುಗಡೆ ಮಾಡಲಿದ್ದು, ಈ ಎರಡು ಫೋನ್‌ಗಳ ನಡುವೆ ಹೆಚ್ಚಿನ ವ್ಯತ್ಯಸ ಇರುವುದಿಲ್ಲ ಎನ್ನಲಾಗಿದೆ. ಈ ಎರಡು ಫೋನ್‌ಗಳು ಮೀಡಿಯಾ ಟೆಕ್ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆಯುವ ಸಾಧ್ಯತೆಯಿದೆ. ಹಾಗೆಯೇ ಈ ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಸಹ ಒಳಗೊಂಡಿರುತ್ತವೆ.

ಬಿಡುಗಡೆಗೆ ಸಜ್ಜಾಗುತ್ತಿರುವ ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳ ಬೆಲೆ ಲೀಕ್

ಇನ್ನು ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳು ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್, ನಂತರದ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿರುವ ನಿರೀಕ್ಷೆಗಳಿವೆ.

ಹಾಗೆಯೇ ರೆಡ್ಮಿ 10A ಫೋನ್ 'ಗುಡುಗು ಮತ್ತು ಬೆಳಕು' (thunder ಮತ್ತು light) ಎಂಬ ಸಂಕೇತನಾಮಗಳೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ರೆಡ್ಮಿ 10C ಫೋನ್ 'ಮಂಜು, ಮಳೆ' ಮತ್ತು ಗಾಳಿ ('fog, rain' ಮತ್ತು wind) ಸಂಕೇತನಾಮಗಳು ಎಂದು ಬರುತ್ತದೆ ಎನ್ನಲಾಗಿದೆ. ಇನ್ನು ಈ ಎರಡೂ ಫೋನ್‌ಗಳು ಮೀಡಿಯಾ ಟೆಕ್ ಪ್ರೊಸೆಸರ್ ಬಲ ಪಡೆದಿರಲಿವೆ ಎನ್ನಲಾಗಿದೆ. ಲೀಕ್ ಮಾಹಿತಿ ಪ್ರಕಾರ ಈ ಫೋನ್‌ಗಳು 12,000ರೂ. ಗಳ ಆಸುಪಾಸಿನಲ್ಲಿ ಲಗ್ಗೆ ಇಡಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿರುವ ರೆಡ್ಮಿ 10A ಮತ್ತು ರೆಡ್ಮಿ 10C ಫೋನ್‌ಗಳ ಬೆಲೆ ಲೀಕ್

ರೆಡ್ಮಿ 9A ಸ್ಮಾರ್ಟ್‌ಫೋನ್ ಫೀಚರ್ಸ್‌
ರೆಡ್ಮಿ 9A ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9 ಅನುಪಾತವನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 2GB RAM + 32GB ಮತ್ತು 3GB RAM + 32GB ವೇರಿಯಂಟ್‌ನ ಎರಡು ಆಂತರಿಕ ಸ್ಟೋರೇಜ್‌ ಆಯ್ಕೆಯಗಳನ್ನು ಹೊಂದಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಸಿಂಗಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಹಿಂಬದಿಯಲ್ಲಿ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಸೈಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLET, ವೈ ಫೈ 802.11 ಎ / ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

Most Read Articles
Best Mobiles in India

English summary
Redmi 10A and Redmi 10C Price Leaked Ahead of Launch: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X