Home
ಸುದ್ದಿಜಾಲ

ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌: ಬೆಲೆ ಇಷ್ಟೇ!?

ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ಕಂಪೆನಿಯ ಹಲವು ಫೋನ್‌ಗಳು ಭಿನ್ನ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಂಡಿವೆ. ಈ ನಡುವೆ ರೆಡ್ಮಿಯ ಈ ಸ್ಮಾರ್ಟ್‌ಫೋನ್‌ಗೆ 25% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ಫೋನ್‌ ಖರೀದಿಯ ಮೇಲೆ ಇನ್ನೂ ಹೆಚ್ಚಿನ ಬ್ಯಾಂಕ್‌ ಹಾಗೂ ಇತರೆ ಆಫರ್‌ ಸಹ ಲಭ್ಯ.

ಹೌದು, ರೆಡ್ಮಿ 10A ಸ್ಪೋರ್ಟ್ (Redmi 10A Sport ) ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ ಕಂಡಿದ್ದು, ಈ ಮೂಲಕ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ ರೆಡ್ಮಿ 10A ಸರಣಿಯ ಫೋನ್‌ ಆಗಿದ್ದು, ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ವಾಟರ್‌ ಡ್ರಾಪ್‌ ಸ್ಟೈಲ್‌ ನಾಚ್‌ ಅನ್ನು ಹೊಂದಿದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌: ಬೆಲೆ ಇಷ್ಟೇ!?

ರೆಡ್ಮಿ 10A ಸ್ಪೋರ್ಟ್ ಫೋನ್‌ ಡಿಸ್‌ಪ್ಲೇ : ಈ ಫೋನ್ 6.53 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದ್ದು, 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 400 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿರುವ ಈ ಫೋನ್ ವಾಟರ್‌ಡ್ರಾಪ್-ಸ್ಟೈಲ್ ನಾಚ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, 70% NTSC ಬಣ್ಣದ ಹರವುಗಳನ್ನು ಒದಗಿಸಲಿದೆ.

ರೆಡ್ಮಿ 10A ಸ್ಪೋರ್ಟ್ ಫೋನ್‌ ಪ್ರೊಸೆಸರ್‌ ವಿವರ: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್ ಆಧಾರಿತ MIUI 12.5 ಬೆಂಬಲದೊಂದಿಗೆ ರನ್‌ ಆಗಲಿದೆ. ಇನ್ನು 6GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಹೆಚ್ಚಿನ ಸ್ಟೋರೇಜ್‌ ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಅನ್ನು ಸಹ ಹೊಂದಿದೆ.

ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದು f/2.2 ದ್ಯುತಿರಂಧ್ರ ಮತ್ತು LED ಫ್ಲ್ಯಾಶ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಇದು ವಿಡಿಯೋ ಕರೆ ಮತ್ತು ಸೆಲ್ಫಿ ಫೊಟೋ ತೆಗೆದುಕೊಳ್ಳುವುದಕ್ಕೆ ಅತ್ಯುತ್ತಮವಾಗಿದೆ.

ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌: ಬೆಲೆ ಇಷ್ಟೇ!?

ರೆಡ್ಮಿ 10A ಸ್ಪೋರ್ಟ್ ಬ್ಯಾಟರಿ ಸಾಮರ್ಥ್ಯ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 10W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಕನೆಕ್ಟಿವಿಟಿ ವಿಚಾರದಲ್ಲಿ ಇದು 4G LTE, Wi-Fi 802.11 b/g/n, ಬ್ಲೂಟೂತ್‌ ಆವೃತ್ತಿ v5, ಮತ್ತು GPS/ A-GPS ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಮೈಕ್ರೋ-ಯುಎಸ್‌ಬಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ರೆಡ್ಮಿ 10A ಸ್ಪೋರ್ಟ್ ಫೋನ್‌ನ ಆಫರ್‌ ಬೆಲೆ ಹಾಗೂ ಲಭ್ಯತೆ: 6GB RAM + 128GB ಸ್ಟೋರೇಜ್ ವೇರಿಯಂಟ್‌ ಅನ್ನು ಇದೀಗ ನೀವು ಕೇವಲ 10,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 13,999ರೂ.ಗಳು. ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಫೋನ್ 25% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರೊಂದಿಗೆ ಹಲವು ಬ್ಯಾಂಕ್ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ಆಯ್ಕೆ ಸಹ ಇದರಲ್ಲಿದೆ.

ರೆಡ್ಮಿ 10A ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌: ಬೆಲೆ ಇಷ್ಟೇ!?

ಈ ಫೋನ್‌ ಅನ್ನು ರಿಲಯನ್ಸ್ ಡಿಜಿಟಲ್ ಶಾಪಿಂಗ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿ ಮಾಡಬಹುದು. ಜೊತೆಗೆ ಈ ಫೋನ್ ಚಾರ್ಕೋಲ್ ಬ್ಲ್ಯಾಕ್, ಸೀ ಬ್ಲೂ ಮತ್ತು ಸ್ಲೇಟ್ ಗ್ರೇ ಬಣ್ಣ ಆಯ್ಕೆಗಳಲ್ಲಿ ಕಂಡುಬಂದಿದೆ. ಅದೇ ರೀತಿ ರೆಡ್ಮಿ ನೋಟ್‌ 125G, ಶಿಯೋಮಿ 11Tಪ್ರೊ5G ಹಾಗೂ ರೆಡ್ಮಿ ನೋಟ್ 10S ಸೇರಿದಂತೆ ಇತ್ತೀಚೆಗೆ ಲಾಂಚ್‌ ಆಗಿರುವ ಇತರೆ ಫೋನ್‌ಗಳ ಮೇಲೆಯೂ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ರಿಯಾಯಿತಿ ಲಭ್ಯ ಇದೆ.

Best Mobiles in India

English summary
Redmi 10A Sport smartphone has received a huge price cut. A flat 25% discount has been announced on Reliance Digital for this phone. It is powered by MediaTek Helio G25 SoC processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+