ರೆಡ್ಮಿ 10X ಸ್ಮಾರ್ಟ್‌ಫೋನ್ ಲಾಂಚ್!..48ಎಂಪಿ ಕ್ಯಾಮೆರಾ ಹೈಲೈಟ್!
ಚೀನಾ ಮೂಲದ ಶಿಯೋಮಿ ಕಂಪನಿಯು ಈಗಾಗಲೇ ರೆಡ್ಮಿ ಸರಣಿಯಲ್ಲಿ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಆ ಸರಣಿಗೆ ಇದೀಗ ಶಿಯೋಮಿ ರೆಡ್ಮಿ 10X ಹೆಸರಿನ ದೈತ್ಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G85 ಚಿಪ್‌ಸೆಟ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಪಡೆದಿದೆ.

ಹೌದು, ಶಿಯೋಮಿ ಹೊಸದಾಗಿ ರೆಡ್ಮಿ 10X ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 4G ಮತ್ತು 5G ವೇರಿಯಂಟ್ ಮಾದರಿಗಳ ಆಯ್ಕೆಗಳನ್ನು ಹೊಂದಿದೆ. 4GB ಮತ್ತು 6GB RAM ಸಾಮರ್ಥ್ಯ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಪೋನ್ ಬ್ಲೂ, ಗೋಲ್ಡ್ ಹಾಗೂ ವೈಟ್ ಬಣ್ಣಗಳ ಆಯ್ಕೆಗಳ ಲಭ್ಯತೆಯನ್ನು ಹೊಂದಿದೆ. ಹಾಗಾದರೆ ರೆಡ್ಮಿ 10X ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
ಶಿಯೋಮಿ ರೆಡ್ಮಿ 10X ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿದೆ 6.57 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ IPS LCD ಮಾದರಿಯ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ HDR10 ಜೊತೆಗೆ 600nits ಬ್ರೈಟ್ನೆಸ್ ಸಾಮರ್ಥ್ಯವನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು
ಶಿಯೋಮಿ ರೆಡ್ಮಿ 10X ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಹೊಂದಿದ್ದು, MIUI 12 ಸಹ ಇದೆ. ಇನ್ನೂ ಈ ಫೊನ್ 4GB + 128GB ಮತ್ತು 6GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.

ಕ್ಯಾಮೆರಾ ರಚನೆ
ಶಿಯೋಮಿ ರೆಡ್ಮಿ 10X ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ರಚನೆ ಹೊಂದಿದೆ. ಮುಖ್ಯ ಕ್ಯಾಮೆರಾವು 48MP ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ. ಉಳಿದಂತೆ ತೃತೀಯ 5MP ಸೆನ್ಸಾರ್ ಪಡೆದಿದ್ದು, ಜೊತೆಗೆ ಸೆಲ್ಫಿಗಾಗಿ 16MP ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಲೈಫ್
ಶಿಯೋಮಿ ರೆಡ್ಮಿ 10X ಸ್ಮಾರ್ಟ್‌ಫೋನ್ 4,520mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಇದರೊಂದಿಗೆ 22.5W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ 164.16x75.75x8.99mm ಸುತ್ತಳತೆಯನ್ನು ಪಡೆದಿದೆ. ಉಳಿದಂತೆ ವೈಫೈ, ಜಿಪಿಎಸ್, ಸೆನ್ಸಾರ್‌ನಂತಹ ಆಯ್ಕೆಗಳು ಇವೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ ರೆಡ್ಮಿ 10X ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆ ಹೊಂದಿದೆ. ಚೀನಾದಲ್ಲಿ ವೇರಿಯಂಟ್ ಬೆಲೆಯು CNY 999 (ಭಾರತದಲ್ಲಿ ಅಂದಾಜು 10,500ರೂ) ಹಾಗೆಯೇ 6GB + 128GB ವೇರಿಯಂಟ್ ಬೆಲೆಯು CNY 1,199 (ಅಂದಾಜು 12,700ರೂ) ಆಗಿದೆ. ಇದೇ ಜೂನ್ 1 ರಿಂದ ಸೇಲ್ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications








