Just In
- 1 hr ago
ಒನ್ಪ್ಲಸ್, ಒಪ್ಪೋ ಗ್ರಾಹಕರೇ ನೀವಿನ್ನೂ ಟೆನ್ಷನ್ ಫ್ರೀ!..ನಿಮಗಾಗಿಯೇ ಈ ಹೊಸ ಆಪ್!
- 16 hrs ago
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
- 17 hrs ago
2023ರಲ್ಲಿ ಈ ಸ್ಮಾರ್ಟ್‌ಫೋನ್ ಸೌಂಡ್ ಮಾಡೋದು ಪಕ್ಕಾ! ಏನೆಲ್ಲಾ ನಿರೀಕ್ಷೆ?
- 18 hrs ago
ಈ ಡಿವೈಸ್ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
Don't Miss
- News
Breaking: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದ ಜೆಡಿಎಸ್ ಅಭ್ಯರ್ಥಿ ಸಾವು
- Finance
16 ವಾರದ ವೇತನ ಪರಿಹಾರ, ಟೆಕ್ ದೈತ್ಯ ಗೂಗಲ್ನಲ್ಲಿ 12 ಸಾವಿರ ಮಂದಿ ವಜಾ
- Sports
SA20: 25 ಎಸೆತಗಳಲ್ಲಿ 56 ರನ್: ಆರ್ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್
- Movies
Sanjana Burli: 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಚೈಲ್ಡ್ ಕನಸು ಈಡೇರಿದಾಗ..!
- Automobiles
ಮುಂಬರಲಿರುವ ಮಾರುತಿ ಸುಜುಕಿ ಎಸ್ಯುವಿಗಳು: ನೋಡಲು ಭರ್ಜರಿಯಾಗಿವೆ..
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೆಡ್ಮಿ 11 ಪ್ರೈಮ್ 5G ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಈ ಚಾನ್ಸ್ ಕಳ್ಕೋಬೇಡಿ!
ಶಿಯೋಮಿ ಕಂಪನಿಯ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೂತನ ರೆಡ್ಮಿ 11 ಪ್ರೈಮ್ 5G ಈಗಾಗಲೇ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಭರ್ಜರಿ ಇಳಿಕೆ ಆಗಿದ್ದು, ಈ ಸ್ಮಾರ್ಟ್‌ಫೋನ್ ಮತ್ತೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಹೌದು, ಶಿಯೋಮಿ ಕಂಪನಿಯ ರೆಡ್ಮಿ 11 ಪ್ರೈಮ್ 5G (Redmi 11 Prime 5G) ಫೋನ್ ಬೆಲೆಯಲ್ಲಿ 1,000ರೂ. ಇಳಿಕೆ ಆಗಿದೆ. ಇನ್ನು ಈ ಫೋನ್ ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 4GB RAM + 64GB ಮತ್ತು 6GB RAM + 128GB ಆಗಿವೆ. ಈ ಎರಡು ವೇರಿಯಂಟ್‌ಗಳ ಬೆಲೆಯಲ್ಲಿಯೂ ಇಳಿಕೆ ಕಂಡಿದೆ.

ಇನ್ನು ಬೆಲೆ ಇಳಿಕೆಯ ಬಳಿಕ ರೆಡ್ಮಿ 11 ಪ್ರೈಮ್ 5G (Redmi 11 Prime 5G) ಫೋನಿನ 4GB RAM + 64GB ವೇರಿಯಂಟ್ 12,999ರೂ. ಪ್ರೈಸ್‌ಟ್ಯಾಗ್ ನಲ್ಲಿ ಖರೀದಿಸಬಹುದಾಗಿದ್ದು, ಹಾಗೆಯೇ 6GB RAM + 128GB ವೇರಿಯಂಟ್ ಅನ್ನು 14,999ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ ಮೆಡೋ ಗ್ರೀನ್, ಕ್ರೋಮ್ ಸಿಲ್ವರ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೇ ರೆಡ್ಮಿ 11 ಪ್ರೈಮ್ 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 11 ಪ್ರೈಮ್ 5G ಫೀಚರ್ಸ್ ಹೀಗಿವೆ
ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 20.7:9 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೊರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬಳಸಿ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋಟ್ರೇಟ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಬಂಡಲ್ ಚಾರ್ಜರ್ 22.5W ವರೆಗೆ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ 802.11 a/b/g/n/ac, ಯುಎಸ್‌ಬಿ OTG, IR ಬ್ಲಾಸ್ಟರ್, ಬ್ಲೂಟೂತ್ v5.1, GPS/ A-GPS, USB ಟೈಪ್-C, ಮತ್ತು 3.5 ಹಾಗೂ ಎಂಎಂ ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಇ-ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರೊಂದಿಗೆ 1.7W ಔಟ್‌ಪುಟ್‌ನೊಂದಿಗೆ ಕೆಳಭಾಗದಲ್ಲಿ ಜೋಡಿಸಲಾದ ಸ್ಪೀಕರ್ ಕೂಡ ಹೊಂದಿದೆ. ಇದು ಫೇಸ್ ಅನ್‌ಲಾಕ್ ಫೀಚರ್ಸ್ ಅನ್ನು ಸಹ ಬೆಂಬಲಿಸಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470