Home
ಸುದ್ದಿಜಾಲ

ಇಂದು ಲಾಂಚ್‌ ಆಗಲಿವೆ ರೆಡ್ಮಿ A1 ಮತ್ತು ರೆಡ್ಮಿ 11 ಪ್ರೈಮ್‌ 5G ಸ್ಮಾರ್ಟ್‌ಫೋನ್‌!

ಶಿಯೋಮಿ ಸಂಸ್ಥೆಯ ಎರಡು ನೂತನ ಫೋನ್‌ಗಳು ಇಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅವುಗಳು ಕ್ರಮವಾಗಿ ರೆಡ್ಮಿ A1 ಮತ್ತು ರೆಡ್ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಆಗಿವೆ. ಇವುಗಳ ಪೈಕಿ ರೆಡ್ಮಿ A1 ಫೋನ್‌ ಎಂಟ್ರಿ ಲೆವೆಲ್‌ ಫೋನ್‌ ಆಗಿದ್ದು, ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಎಂಟ್ರಿ ಕೊಡಲಿದೆ. ಇನ್ನು ರೆಡ್ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಗಲಿದೆ. ಹಾಗೆಯೇ ಈ ಫೋನ್‌ 4G ಮತ್ತು 5G ವೇರಿಯಂಟ್‌ ಮಾದರಿಗಳಲ್ಲಿ ಲಾಂಚ್ ಆಗಲಿದೆ.

ಮಾಡಲಿದೆ

ಹೌದು, ಶಿಯೋಮಿ ಸಂಸ್ಥೆಯು ಇಂದು (ಸೆಪ್ಟೆಂಬರ್ 6, 2022) ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ರೆಡ್ಮಿ 11 ಪ್ರೈಮ್‌ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್ ಒಳಗೊಂಡಿರಲಿದೆ.

ಬ್ಯಾಕ್‌ಅಪ್‌

ಇನ್ನು ರೆಡ್ಮಿ 11 ಪ್ರೈಮ್‌ ಫೋನ್ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಬಲದೊಂದಿಗೆ ಲಗ್ಗೆ ಇಡಲಿದೆ. ಹಾಗೆಯೇ ರೆಡ್ಮಿ A1 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯದಲ್ಲಿ ಅನಾವರಣ ಆಗಲಿದೆ. ಬಿಡುಗಡೆಯ ಕಾರ್ಯಕ್ರಮವನ್ನು ಸಂಸ್ಥೆಯ ಅಧಿಕೃತ ಯೂಟ್ಯೂಬ್‌ ಚಾನೆಲ್‌ ಮೂಲಕ ವೀಕ್ಷಿಸಬಹುದು. ಹಾಗಾದರೇ ನೂತನವಾಗಿ ಎಂಟ್ರಿ ಪಡೆಯುತ್ತಿರುವ ಈ ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ A1 ನಿರೀಕ್ಷಿತ ಫೀಚರ್ಸ್‌

ರೆಡ್ಮಿ A1 ನಿರೀಕ್ಷಿತ ಫೀಚರ್ಸ್‌

ರೆಡ್ಮಿ A1 ಸ್ಮಾರ್ಟ್‌ಫೋನ್‌ (Redmi A1) ಮೀಡಿಯಾ ಟೆಕ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಲಾಂಚ್‌ ಮೈಕ್ರೋ ಸೈಟ್ ತಿಳಿಸುತ್ತದೆ. ಶಿಯೋಮಿ ನಿಖರವಾದ ಪ್ರೊಸೆಸರ್ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಮೀಡಿಯಾ ಟೆಕ್ ಹಿಲಿಯೋ A22 ಪ್ರೊಸೆಸರ್‌ ಪಡೆದಿರುವ ಸಾಧ್ಯತೆಗಳಿವೆ. ಹಾಗೆಯೇ ರೆಡ್ಮಿ A1 ಫೋನ್‌ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ ಎಂದು ಲಾಂಚ್ ಮೈಕ್ರೋ-ಸೈಟ್ ಬಹಿರಂಗಪಡಿಸುತ್ತದೆ. ಅವು ಕ್ರಮವಾಗಿ ಹಸಿರು, ನೀಲಿ ಮತ್ತು ಕಪ್ಪು ಎನ್ನಲಾಗಿದೆ.

ಬ್ಯಾಟರಿ

ರೆಡ್ಮಿ A1 ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ನೊಂದಿಗೆ ಬರಲಿದೆ ಎಂದು ಶಿಯೋಮಿ ದೃಢಪಡಿಸಿದೆ. ಸ್ಮಾರ್ಟ್‌ಫೋನ್‌ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸಹ ನೀಡುತ್ತದೆ ಎಂದು ದೃಢಪಡಿಸಲಾಗಿದೆ. ಈ ಫೋನ್ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು ಇದು ಹೆಚ್‌ಡಿ+ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್‌ 3GB RAM ಸಾಮರ್ಥ್ಯದ ಆಯ್ಕೆಯನ್ನು ಪಡೆದಿರಲಿದೆ ಎನ್ನಲಾಗಿದೆ.

ಕ್ಯಾಮರಾ

ಮೈಕ್ರೋಸೈಟ್ ಪ್ರಕಾರ, ರೆಡ್ಮಿ A1 ಭಿನ್ನ ರಚನೆಯ ಹಿಂಭಾಗದ ಫಲಕವನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾದ ಒಂದೇ ಸಂವೇದಕವನ್ನು ಹೊಂದಿರುವ ಚದರ ಕ್ಯಾಮರಾ ಮಾಡ್ಯೂಲ್ ಅನ್ನು ಹೊಂದಿದೆ. ಈ ಫೋನ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ ಎಂದು ತೋರುತ್ತದೆ. SIM ಕಾರ್ಡ್ ಟ್ರೇ ಎಡಭಾಗದಲ್ಲಿದೆ ಹಾಗೆಯೇ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲಿವೆ. ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ ಮತ್ತು ಇದು ಪವರ್ ಬಟನ್‌ನೊಂದಿಗೆ ಎಂಬೆಡ್ ಆಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ರೆಡ್ಮಿ 11 ಪ್ರೈಮ್ 5G ನಿರೀಕ್ಷಿತ ಫೀಚರ್ಸ್‌

ರೆಡ್ಮಿ 11 ಪ್ರೈಮ್ 5G ನಿರೀಕ್ಷಿತ ಫೀಚರ್ಸ್‌

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಸೆ. 6 ರಂದು ಲಾಂಚ್ ಆಗಲಿದೆ. ಈ ಫೋನ್ ಅಮೆಜಾನ್‌ ಮೈಕ್ರೋಸೈಟ್‌ನಲ್ಲಿ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಅನ್ನು ಪ್ಯಾಕ್ ಮಾಡುತ್ತದೆ ಎಂದು ಖಚಿತಪಡಿಸುತ್ತದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವಾಟರ್‌ಡ್ರಾಪ್-ಶೈಲಿಯ ನಾಚ್ಡ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ರೆಡ್‌ಮಿ ಟೀಸರ್‌ನಲ್ಲಿ ಹೇಳಲಾಗಿದೆ.

Best Mobiles in India

English summary
Redmi 11 Prime 5G, Redmi A1 to launch in India Today: How to watch it live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+