Home
ಸುದ್ದಿಜಾಲ

Redmi: ರೆಡ್ಮಿಯ ಈ ಜನಪ್ರಿಯ ಫೋನ್‌ ಖರೀದಿಸಿ ಹಣ ಉಳಿಸಿ: 50MP ಕ್ಯಾಮೆರಾ, ಆಫರ್ ಬೆಲೆ ಎಷ್ಟು?

ರೆಡ್ಮಿ ಸ್ಮಾರ್ಟ್‌ಫೋನ್‌ಗಳೆಂದರೆ (Redmi smartphone) ಭಾರತೀಯರಿಗೆ ವಿಶೇಷವಾದ ಪ್ರೀತಿ. ಯಾವುದೇ ಹೊಸ ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಜನರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಈ ನಡುವೆ ರೆಡ್ಮಿಯ ಜನಪ್ರಿಯ ಫೋನ್‌ ಒಂದಕ್ಕೆ ಬೊಂಬಾಟ್‌ ಅಫರ್ ನೀಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ಗೆ (Redmi 11 Prime 5G smartphone) ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್‌, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 700 MT6833 ಪ್ರೊಸೆಸರ್ ಬಲ ಪಡೆದಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಇತರೆ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿಯ ಈ ಜನಪ್ರಿಯ ಫೋನ್‌ ಖರೀದಿಸಿ ಹಣ ಉಳಿಸಿ: 50MP ಕ್ಯಾಮೆರಾ...

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸಿ. ಇದು 6.58 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2408 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ, 90Hz ರಿಫ್ರೆಶ್ ರೇಟ್‌ ಹೊಂದಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 700 MT6833 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಅಂದರೆ ಈ ಸಿಪಿಯು ಆಕ್ಟಾ-ಕೋರ್ ಕಾರ್ಟೆಕ್ಸ್ A76 ಮತ್ತು ಕಾರ್ಟೆಕ್ಸ್ A55 ಹೊಂದಿದೆ. ಜೊತೆಗೆ ಮಾಲಿ-G57 MC2 ಜಿಪಿಯು ಬಲದೊಂದಿಗೆ 4GB RAM ಆಯ್ಕೆ ಈ ಫೋನ್‌ ಅನ್ನು ಅತ್ಯುತ್ತಮವಾಗಿ ಕೆಲಸ ಮಾಡುವಂತೆ ಸಹಾಯ ಮಾಡಲಿದೆ.

ರೆಡ್ಮಿಯ ಈ ಜನಪ್ರಿಯ ಫೋನ್‌ ಖರೀದಿಸಿ ಹಣ ಉಳಿಸಿ: 50MP ಕ್ಯಾಮೆರಾ...

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ 50 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿದೆ. ಇದರೊಂದಿಗೆ f/2.4 ಅಪರ್ಚರ್ ನೊಂದಿಗೆ 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಸೆನ್ಸರ್‌ ನೀಡಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಆಫರ್ ವಿವರ: ಈಗ ಈ ಸ್ಮಾರ್ಟ್‌ಫೋನ್‌ನ ಬೆಲೆ ಹಾಗೂ ಆಫರ್ ವಿವರಗಳು ಏನೇನು ಎಂಬುದನ್ನು ಪರಿಶೀಲನೆ ಮಾಡೋಣ. ಈ ಫೋನ್‌ನ ಸಾಮಾನ್ಯ ದರ 16,999ರೂ.ಗಳಾಗಿದೆ. ಆದರೆ, ನೀವು ಈಗ ಆಫರ್ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ 13,890ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಇದಕ್ಕೆ 18% ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಸಹ ಇದ್ದು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದು.

ರೆಡ್ಮಿಯ ಈ ಜನಪ್ರಿಯ ಫೋನ್‌ ಖರೀದಿಸಿ ಹಣ ಉಳಿಸಿ: 50MP ಕ್ಯಾಮೆರಾ...

ಬ್ಯಾಂಕ್‌ ಆಫರ್: ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಈ ಫೋನ್‌ ಮೇಲೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಹಾಗೂ ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್‌ ಪೇ ಆಯ್ಕೆ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು.

Best Mobiles in India

English summary
Redmi 11 Prime 5G smartphone is offered on a leading e-commerce site. This smartphone is powered by MediaTek Dimensity 700 MT6833 processor with 90Hz refresh rate, 50 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+