Home
ಸುದ್ದಿಜಾಲ

ರೆಡ್ಮಿ 12 5G ಮೊಬೈಲ್‌ಗೆ ಈಗ ಭರ್ಜರಿ ರಿಯಾಯಿತಿ; ಆಫರ್‌ ಬೆಲೆ ಎಷ್ಟು?

ಜನಪ್ರಿಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಆಯೋಜಿಸಿರುವ ಬಿಗ್‌ ಸೇವಿಂಗ್‌ ಡೇಸ್‌ (Big Saving Days) ನಡೆಯುತ್ತಿದೆ. ಈ ಮಾರಾಟ ಮೇಳವುದಲ್ಲಿ ಆನ್‌ಲೈನ್‌ ಮೂಲಕ ನೂತನ ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಹಬ್ಬದ ವಾತಾವರಣ ಎನಿಸಿದೆ. ಈ ಮೇಳದಲ್ಲಿ ರೆಡ್ಮಿ 12 5G ಮೊಬೈಲ್‌ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ರೆಡ್ಮಿ 12 5G ಮೊಬೈಲ್‌ ಶೇ. 21% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 4 GB RAM + 128 GB ವೇರಿಯಂಟ್‌ 11,999ರೂ. ಗಳ ಆಫರ್‌ ಬೆಲೆ ಲಭ್ಯ. ಅಲ್ಲದೇ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಆಯ್ದ ಬ್ಯಾಂಕ್‌ ಕೊಡುಗೆ ಪಡೆದುಕೊಂಡರೆ, ಇನ್ನಷ್ಟು ಅಗ್ಗದ ದರದಲ್ಲಿ ಫೋನ್‌ ಖರೀದಿಸಬಹುದು.

ರೆಡ್ಮಿ 12 5G ಮೊಬೈಲ್‌ಗೆ ಈಗ ಭರ್ಜರಿ ರಿಯಾಯಿತಿ; ಆಫರ್‌ ಬೆಲೆ ಎಷ್ಟು?

ರೆಡ್ಮಿ ಈ ಮೊಬೈಲ್‌ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ಪಡೆದಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಇದೆ. ಅಲ್ಲದೇ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇನ್ನುಳಿದಂತೆ ರೆಡ್ಮಿ 12 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 12 5G - ಫೀಚರ್ಸ್‌ ಹೀಗಿವೆ

ರೆಡ್ಮಿ 12 5G ಫೋನ್‌ 6.79 ರೆಡ್ಮಿ 12 5G ಫೋನ್‌ ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಪಡೆದಿದ್ದು, 90 Hz ನ ರಿಫ್ರೆಶ್ ರೇಟ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಅಲ್ಲದೇ 1080 X 2400 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್‌ ಇದ್ದು, 240Hz ಟಚ್‌ ಮಾದರಿ ರೇಟ್‌ ಇದೆ. ಯಾವುದೇ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ ಸಂದರ್ಭದಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ರೆಡ್ಮಿ 12 5G ಫೋನ್‌ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ಫೋನ್‌ ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ 4GB + 128GB, 6GB + 128GB ಮತ್ತು 8GB + 256GB ಆಗಿವೆ. ಇದರೊಂದಿಗೆ 8GB RAM ನೊಂದಿಗೆ 8 GB ವರ್ಚುವಲ್ RAM ಆಯ್ಕೆ ಸಹ ಲಭ್ಯ.

ರೆಡ್ಮಿ 12 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಪ್ರೈಮರಿ ಶೂಟರ್ ಪಡೆದಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರೆಡ್ಮಿ 12 5G ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ. ಇದರ ಜೊತೆಗೆ ಈ ಮೊಬೈಲ್‌ ಆಂಡ್ರಾಯ್ಡ್ 13 ಅನ್ನು ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, IP53 ರೇಟಿಂಗ್‌ ಪಡೆದುಕೊಂಡಿದ್ದು, ಧೂಳು ನಿರೋಧಕ ಸೌಲಭ್ಯ ಪಡೆದಿದೆ. ಈ ಫೋನ್‌ ಅನ್ನು ಸಿಲ್ವರ್, ಬ್ಲ್ಯಾಕ್‌ ಹಾಗೂ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
REDMI 12 5G available at best offer price on flipkart. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+