ಆಗಸ್ಟ್‌ನಲ್ಲಿ ಲಾಂಚ್ ಆದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ಹೊಸ ಫೋನ್ ಖರೀದಿಸುವವರಿಗೆ ಉತ್ತಮ ಆಯ್ಕೆ!
ಸ್ಮಾರ್ಟ್‌ಫೋನ್ (smartphone) ಖರೀದಿ ಮಾಡುವವರಿಗೆ ಹಲವಾರು ಆಯ್ಕೆಗಳಿವೆ. ಅದಾಗ್ಯೂ ಯಾವ ಫೋನ್ ಖರೀದಿ ಮಾಡಬೇಕು ಎಂಬ ಗೊಂದಲ ಖಂಡಿತಾ ಇರುತ್ತದೆ. ಅದರಲ್ಲೂ ಪ್ರಮುಖ ಕಂಪೆನಿಗಳು ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಲೇ ಇದ್ದು, ಈ ನಡುವೆ ಕಳೆದ ತಿಂಗಳು ಅಂದರೆ ಆಗಸ್ಟ್‌ನಲ್ಲಿ ಹಲವಾರು ಅತ್ಯುತ್ತಮ ಫೋನ್‌ಗಳು ಸಹ ಲಾಂಚ್ ಆಗಿವೆ.
ಹೌದು, ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಶನ್ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಯಾವ ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ?, ಅದರ ಫೀಚರ್ಸ್ ಏನು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಲು ಸದಾ ಕಾತುರರಾಗಿರುತ್ತಾರೆ. ಪರಿಣಾಮ ಆಗಸ್ಟ್ ತಿಂಗಳಲ್ಲಿ ಯಾವೆಲ್ಲಾ ಫೋಲ್‌ಗಳು ಲಾಂಚ್ ಆಗಿವೆ?, ಅವುಗಳ ವಿಶೇಷತೆ ಏನು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

ರೆಡ್ಮಿ 12 5G: ಈ ಸ್ಮಾರ್ಟ್‌ಫೋನ್ (Redmi 12 5G) ಆಗಸ್ಟ್ ಆರಂಭದಲ್ಲಿ ಲಾಂಚ್ ಆಗಿದೆ. ಶಿಯೋಮಿ (Xiaomi) ಮಾಲೀಕತ್ವದ ಬ್ರ್ಯಾಂಡ್‌ನ ಅಗ್ಗದ 5G ಫೋನ್‌ಗಳಲ್ಲಿ ಈ ಫೋನ್ ಸಹ ಒಂದು. ಅದಾಗ್ಯೂ ಈ ಫೋನ್ ಪ್ರೀಮಿಯಂ ನೋಟ ಪಡೆದುಕೊಂಡಿದೆ. ಅಂದರೆ ಭಾರತದಲ್ಲಿ ಸ್ನಾಪ್‌ಡ್ರಾಗನ್ 4 ಜನ್ 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದುಕೊಂಡಿದೆ. ಇನ್ನು ಉತ್ತಮ ಬ್ಯಾಟರಿ, ಕ್ಯಾಮರಾ ಆಯ್ಕೆ ಹಾಗೂ ಅಗ್ಗದ ಬೆಲೆಯಲ್ಲಿ ಫೋನ್ ಬೇಕು ಎನ್ನುವವರಿಗೆ ಇದು ಉತ್ತಮ. ಈ ಫೋನ್ ಬೆಲೆ 11,999ರೂ.ಗಳಿಂದ ಪ್ರಾರಂಭವಾಗುತ್ತದೆ.
ಇನ್ಫಿನಿಕ್ಸ್ GT 10 ಪ್ರೊ: ಈ ಸ್ಮಾರ್ಟ್‌ಫೋನ್ (Infinix GT 10 Pro) ಸಹ ಆಗಸ್ಟ್‌ನಲ್ಲಿ ಲಾಂಚ್ ಆಗಿದ್ದು, 20,000ರೂ. ಒಳಗಿನ ಅತ್ಯುತ್ತಮ 5G ಫೋನ್‌ಗಳಲ್ಲಿ ಈ ಫೋನ್ ಸಹ ಒಂದಾಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ನಥಿಂಗ್ ಫೋನ್ (2) ನಿಂದ ಸ್ಫೂರ್ತಿ ಪಡೆದಂತೆ ಕಾಣುತ್ತದೆ. ಯಾಕೆಂದರೆ ಇದರಲ್ಲಿ ಟ್ರಾನ್ಫರೆಂಟ್ ಆಯ್ಕೆ ನೀಡಲಾಗಿದೆ. ಅದೇ ರೀತಿಯ ಗ್ಲಿಫ್ ಲೈಟಿಂಗ್ ಅನ್ನು ಹೊಂದಿಲ್ಲದಿದ್ದರೂ, ಗೇಮಿಂಗ್ ಮತ್ತು ದೈನಂದಿನ ಬಳಕೆ ವಿಚಾರಕ್ಕೆ ಬಂದರೆ ಈ ಫೋನ್ ಖಂಡಿತವಾಗಿಯೂ ಉತ್ತಮವಾಗಿದೆ. ಈ ಫೋನ್ ಮಿಡ್ ರೇಂಜ್ ಫೋನ್ ಆಗಿದ್ದು, ಇದರ ಬೆಲೆ 19,999ರೂ.ಗಳಿಂದ ಆರಂಭ ಆಗುತ್ತದೆ.
ಐಕ್ಯೂ Z7 ಪ್ರೊ: ಈ ಫೋನ್ (IQOO Z7 Pro) ವೇಗದ ಚಾರ್ಜಿಂಗ್ ಆಯ್ಕೆ ಮೂಲಕ ಹೆಸರು ಪಡೆದಿದೆ. ಇದರೊಂದಿಗೆ ಈ ಫೋನ್ ಡೈಮೆನ್ಸಿಟಿ 7200 ಪ್ರೊಸೆಸರ್ ಬಲ ಹೊಂದಿದ್ದು, ಫೋನ್ ಬಹುಕಾರ್ಯಕವನ್ನು ಸುಲಭವಾಗಿ ನಿರ್ವಹಿಸಬಹುದು. ಜೊತೆಗೆ 2MP ಡೆಪ್ತ್ ಸೆನ್ಸರ್ OIS ಜೊತೆಗೆ 64MP ಪ್ರಾಥಮಿಕ ರಿಯರ್ ಕ್ಯಾಮೆರಾ ಆಯ್ಕೆ ಇದರಲ್ಲಿದ್ದು, 8GB RAM ಹಾಗೂ 128GB ಮತ್ತು 256GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದೆ. ಇದನ್ನು 30 ಸಾವಿರದ ಒಳಗೆ ಖರೀದಿ ಮಾಡಬಹುದು.
ಫೇರ್‌ಫೋನ್ 5 : ಈ ಹೆಸರು (Fairphone 5) ಕೇಳಿ ನೀವು ಗೊಂದಲ ಒಳಗಾಗಬಹುದು. ಯಾಕೆಂದರೆ ಈ ಕಂಪೆನಿ ಬಹುಪಾಲು ಮಂದಿಗೆ ತಿಳಿದಿಲ್ಲ. ಫೇರ್‌ಫೋನ್ 10 ವರ್ಷ-ಹಳೆಯ ಕಂಪನಿಯಾಗಿದ್ದು, ಪರಿಸರ ಸ್ನೇಹಿ ಫೋನ್‌ಗಳನ್ನು ಇದು ನಿರ್ಮಾಣ ಮಾಡುವ ಕೆಲಸ ಮಾಡುತ್ತದೆ. ಅದರಂತೆ ಇತ್ತೀಚೆಗೆ ಫೇರ್‌ಫೋನ್ 5 ಅನ್ನು ಲಾಂಚ್ ಮಾಡಿದ್ದು, ಈ ಫೋನ್ ಆಂಡ್ರಾಯ್ಡ್-ಚಾಲಿತ ಡಿವೈಸ್ ಆಗಿದ್ದು. ಕನಿಷ್ಠ ಎಂಟು ವರ್ಷಗಳ ನವೀಕರಣಗಳನ್ನು ಪಡೆಯುತ್ತದೆ.
ಈ ಫೋನ್ ಕ್ವಾಲ್ಕಾಮ್ ಚಿಪ್‌ಸೆಟ್ (QCM6490) ನಿಂದ ಚಾಲಿತವಾಗಿದ್ದು, ಇದು ವಿಸ್ತೃತ ಸಾಫ್ಟ್‌ವೇರ್ ಬೆಂಬಲವನ್ನು ನೀಡುತ್ತದೆ ಹಾಗೆಯೇ ಸ್ನಾಪ್‌ಡ್ರಾಗನ್ 780G ನಂತೆಯೇ ಕೆಲಸ ಮಾಡುವ ಸಾಮರ್ಥ್ಯ ಪಡೆದಿದೆ. ಈ ಫೋನ್‌ನ ದೊಡ್ಡ ಅನುಕೂಲವೆಂದರೆ ಇದನ್ನು ಸುಲಭವಾಗಿ ಡಿಸ್ಅಸೆಂಬಲ್ ಮಾಡಬಹುದು ಮತ್ತು ಕ್ಯಾಮರಾ ಮತ್ತು ಡಿಸ್‌ಪ್ಲೇ ಸೇರಿದಂತೆ ಹಲವು ಮಾಡ್ಯುಲರ್ ಘಟಕಗಳೊಂದಿಗೆ ಬದಲಿಸಬಹುದಾದ ಬ್ಯಾಟರಿ ಆಯ್ಕೆ ಪಡೆದಿದೆ. ಇದರ ಬೆಲೆ 63,000 ರೂ.ಗಳಿಂದ ಆರಂಭ ಆಗುತ್ತದೆ.

ಗ್ಯಾಲಕ್ಸಿ Z ಫ್ಲಿಪ್: ಈ ಫೋನ್ (Galaxy Z Flip) ಬಗ್ಗೆ ಹೆಚ್ಚಿನ ವಿವರ ಅಗತ್ಯ ಇಲ್ಲ ಎನಿಸುತ್ತದೆ. ಆದರೂ ನೀವು ಉತ್ತಮವಾದ ಫ್ಲಿಪ್-ಶೈಲಿಯ ಫೋಲ್ಡಬಲ್ ಫೋನ್‌ಗಾಗಿ ಹುಡುಕುತ್ತಿದ್ದೀರಿ ಎಂದಾದರೆ ಈ ಫೋನ್ ಬೆಸ್ಟ್ ಆಯ್ಕೆಯಾಗಿರಲಿ. ಯಾಕೆಂದರೆ ಇದು ಟಾಪ್-ಆಫ್-ಲೈನ್ ಹಾರ್ಡ್‌ವೇರ್ ಅನ್ನು ಘನ ನಿರ್ಮಾಣ ಗುಣಮಟ್ಟದೊಂದಿಗೆ ನೀಡುತ್ತದೆ. ಜೊತೆಗೆ ಒಂದೆರಡು ವರ್ಷಗಳವರೆಗೆ ಬಾಳಿಕೆ ಸಹ ಬರುತ್ತದೆ. ಇದರಲ್ಲಿ 3.4 ಇಂಚಿನ ಕವರ್ ಡಿಸ್‌ಪ್ಲೇಯನ್ನು ನ್ಯಾವಿಗೇಟ್ ಮಾಡಲು ಅವಕಾಶ ಇದೆ.


Click it and Unblock the Notifications








