Home
ಸುದ್ದಿಜಾಲ

ನೀವು ಬೇಡಾ ಅಂದ್ರೂ, ರೆಡ್ಮಿಯ ಈ 5G ಫೋನಿಗೆ ಈಗ ಬಿಗ್‌ ಡಿಸ್ಕೌಂಟ್‌ ಲಭ್ಯ!

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೊಬೈಲ್‌ಗಳಿಗೆ ಒಂದಿಲ್ಲೊಂದು ವಿಶೇಷ ರಿಯಾಯಿತಿ ನೀಡಲಾಗಿರುತ್ತದೆ. ಕೆಲವೊಮ್ಮೆ ಇತ್ತೀಚಿನ ಕೆಲವು ಆಯ್ದ ಮೊಬೈಲ್‌ಗಳು ಸಹ ಭಾರೀ ಆಕರ್ಷಕ ಡಿಸ್ಕೌಂಟ್‌ ಪಡೆದಿರುತ್ತವೆ. ಸದ್ಯ ಆ ಪೈಕಿ ರೆಡ್ಮಿ 12 5G ಮೊಬೈಲ್‌ ಗಮನಾರ್ಹ ಬೆಲೆ ಕುಸಿತ ಪಡೆದಿದ್ದು, 5G ಫೋನ್‌ ಖರೀದಿಸುವವರ ಗ್ರಾಹಕರ ಗಮನ ಸೆಳೆಯುತ್ತಿದೆ.

ಹೌದು, ಇ ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ ತಾಣದಲ್ಲಿ ರೆಡ್ಮಿ 12 5G ಮೊಬೈಲ್‌ ಶೇ. 27% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನ್‌ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಇದೀಗ 12,999ರೂ. ಗಳ ಭರ್ಜರಿ ಡಿಸ್ಕೌಂಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಬ್ಯಾಂಕ್‌ ಕೊಡುಗೆ ಸೇರಿದಂತೆ ಇತರೆ ಕೆಲವು ರಿಯಾಯಿತಿಗಳು ಸಹ ಲಭ್ಯವಾಗಲಿವೆ.

ನೀವು ಬೇಡಾ ಅಂದ್ರೂ, ರೆಡ್ಮಿಯ ಈ 5G ಫೋನಿಗೆ ಈಗ ಬಿಗ್‌ ಡಿಸ್ಕೌಂಟ್‌ ಲಭ್ಯ!

ಇನ್ನು ರೆಡ್ಮಿ 12 5G ಮೊಬೈಲ್‌ 4GB + 128GB, 6GB + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಬಲ ಪಡೆದಿದ್ದು, ಇದು 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದಿದೆ. ಹಾಗಾದರೆ ರೆಡ್ಮಿ 12 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 12 5G ಫೋನ್‌ - ಫೀಚರ್ಸ್‌

ರೆಡ್ಮಿ 12 5G ಮೊಬೈಲ್‌ 6.79 ಇಂಚಿನ FHD ಡಿಸ್‌ಪ್ಲೇ ಪಡೆದಿದ್ದು, 90 Hz ನ ರಿಫ್ರೆಶ್ ರೇಟ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 1080 X 2400 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್‌ ಹಾಗೂ 240Hz ಟಚ್‌ ಮಾದರಿ ರೇಟ್‌ ಆಯ್ಕೆ ಯಾವುದೇ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ ಸಂದರ್ಭದಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ನೀವು ಬೇಡಾ ಅಂದ್ರೂ, ರೆಡ್ಮಿಯ ಈ 5G ಫೋನಿಗೆ ಈಗ ಬಿಗ್‌ ಡಿಸ್ಕೌಂಟ್‌ ಲಭ್ಯ!

ರೆಡ್ಮಿ ಕಂಪನಿಯ ಈ ಮೊಬೈಲ್‌ ಉತ್ತಮ ಕಾರ್ಯಕ್ಷಮತೆಗಾಗಿ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ಫೋನ್‌ ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ 4GB + 128GB, 6GB + 128GB ಹಾಗೂ 8GB + 256GB ಆಗಿವೆ. ಅಲ್ಲದೇ 8GB RAM ನೊಂದಿಗೆ 8 GB ವರ್ಚುವಲ್ RAM ಆಯ್ಕೆ ಸಹ ಇದೆ.

ಹಾಗೆಯೇ ರೆಡ್ಮಿ 12 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಪ್ರೈಮರಿ ಶೂಟರ್ ಪಡೆದಿದೆ. ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಇನ್ನು ರೆಡ್ಮಿ 12 5G ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ. ಇದರ ಜೊತೆಗೆ ಈ ಫೋನ್‌ ಆಂಡ್ರಾಯ್ಡ್ 13 ಅನ್ನು ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, IP53 ರೇಟಿಂಗ್‌ ಪಡೆದುಕೊಂಡಿದ್ದು, ಧೂಳು ನಿರೋಧಕವಾಗಿದೆ. ಇನ್ನು ಗ್ರಾಹಕರು ಈ ಫೋನ್‌ ಅನ್ನು ಸಿಲ್ವರ್, ಬ್ಲ್ಯಾಕ್‌ ಹಾಗೂ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದು.

Best Mobiles in India

English summary
REDMI 12 5G received unbelievable price drop on flipkart. offer price check here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+