Home
ಸುದ್ದಿಜಾಲ

ಅಬ್ಬಬ್ಬಾ... ಮೊದಲ ಸೇಲ್‌ನಲ್ಲೇ ಇಷ್ಟೊಂದು ಫೋನ್‌ಗಳು ಸೇಲ್! ದಾಖಲೆ ಬರೆದ ರೆಡ್ಮಿ 12 ಸರಣಿ

ಶಿಯೋಮಿ ಸ್ಮಾರ್ಟ್‌ಫೋನ್‌ಗಳೆಂದರೆ (Xiaomi smartphone) ಹಲವರಿಗೆ ಅಚ್ಚು ಮೆಚ್ಚು. ಸಾಮಾನ್ಯವಾಗಿ ಯಾರೇ ಆದರೂ ಹೊಸ ಫೋನ್‌ಗೆ ಅಪ್‌ಗ್ರೇಡ್‌ ಆಗಲು ಮುಂದಾದಾಗ ಮೊದಲು ಇಣುಕಿ ನೋಡುವುದು ಶಿಯೋಮಿಯಿಂದ ಯಾವುದಾದರೂ ಹೊಸ ಫೋನ್‌ ಲಾಂಚ್‌ ಆಗಿದೆಯಾ ಎಂದು. ಅದರಂತೆ ಇತ್ತೀಚಿಗೆ ರೆಡ್ಮಿ ಸರಣಿ ಫೋನ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಈ ಫೋನ್‌ಗಳು ಈಗ ದಾಖಲೆ ಬರೆದಿವೆ.

ಹೌದು, ರೆಡ್ಮಿ 12 ಸರಣಿಯು (Redmi 12 series) ಕಳೆದ ವಾರ ಅನಾವರಣ ಆಗಿದ್ದು, ಟೆಕ್‌ ತಜ್ಞರು ಮತ್ತು ಅಭಿಮಾನಿಗಳಿಂದ ಬಹಳಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ನಡುವೆ ಶಿಯೋಮಿ (Xiaomi) ಇಂಡಿಯಾ ಆಗಸ್ಟ್ 4 ರಂದು ಮೊದಲ ಸೇಲ್‌ನಲ್ಲಿಯೇ ರೆಡ್ಮಿಯ ರೆಡ್ಮಿ 12 5G ಮತ್ತು ರೆಡ್ಮಿ 12 4G ಅನ್ನು ಒಳಗೊಂಡಿರುವ ರೆಡ್ಮಿ 12 ಸರಣಿಯ 3 ಲಕ್ಷ ಯೂನಿಟ್‌ ಅನ್ನು ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ಗಳ ಬೆಲೆ ಎಷ್ಟು?, ಪ್ರಮುಖ ಫೀಚರ್ಸ್‌ ಏನು? ಎಂದು ತಿಳಿಯೋಣ ಬನ್ನಿ.

ಮೊದಲ ಸೇಲ್‌ನಲ್ಲೇ  ಇಷ್ಟೊಂದು ಫೋನ್‌ಗಳು ಸೇಲ್! ದಾಖಲೆ ಬರೆದ ರೆಡ್ಮಿ 12 ಸರಣಿ

ಈ ಫೋನ್‌ಗಳ ಬೆಲೆ ಮತ್ತು ಲಭ್ಯತೆ: ಇನ್ನು ರೆಡ್ಮಿ 12 4G ಈಗ ಮಿ ಡಾಟ್‌ ಕಾಮ್‌, ಫ್ಲಿಪ್‌ಕಾರ್ಟ್, ಮಿ ಹೋಮ್‌ ಮತ್ತು ಮಿ ಸ್ಟುಡಿಯೋ ಸೇರಿದಂತೆ ಅನೇಕ ಅಧಿಕೃತ ರಿಟೇಲರ್‌ ಸ್ಟೋರ್‌ಗಳಲ್ಲಿ ಈ ಫೋನ್‌ಗಳಲ್ಲಿ ಲಭ್ಯ ಇದ್ದು, ಈ ಫೋನ್‌ಗಳಲ್ಲಿ 4GB+128GB ವೇರಿಯಂಟ್‌ 8,999ರೂ.ಗಳ ಬೆಲೆ ಹೊಂದಿದ್ದರೆ 6GB+128GB ವೇರಿಯಂಟ್‌ 10,499ರೂ.ಗಳ ಆಫರ್‌ ಬೆಲೆ ಹೊಂದಿದೆ.

ಹಾಗೆಯೇ ರೆಡ್ಮಿ 12 5G ಸ್ಮಾರ್ಟ್‌ಫೋನ್‌ನ 4GB+128GB ವೇರಿಯಂಟ್‌ 10,999ರೂ.ಗಳ ಬೆಲೆ ಹೊಂದಿದ್ದು, 6GB+128GB ವೇರಿಯಂಟ್‌ 12,499ರೂ.ಗಳು ಹಾಗೂ 8GB+256GB ವೇರಿಯಂಟ್‌ 14,499ರೂ.ಗಳ ಬೆಲೆ ಪಡೆದುಕೊಂಡಿದೆ. ಈ ಫೋನ್‌ಗಳನ್ನೂ ಸಹ ಮೇಲೆ ತಿಳಿಸಿದ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಡಿಸ್ಕೌಂಟ್‌ ಆಫರ್‌ ಏನಿದೆ?: ಈ ಫೋನ್‌ಗಳ ಖರೀದಿಯಲ್ಲಿ ಗ್ರಾಹಕರು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಂದರೆ ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ 1,000ರೂ.ಗಳು, ರೆಡ್ಮಿ 12 4G 4GB ಖರೀದಿ ಮೇಲೆ 1,000ರೂ.ಗಳ ವಿನಿಮಯ ಬೋನಸ್ ಲಭ್ಯ ಇರಲಿದೆ. ಇಷ್ಟು ಮಾತ್ರವಲ್ಲದೆ ರೆಡ್ಮಿ 12 5G ಯ 4GB ಮತ್ತು 6GB ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ರೆಡ್ಮಿ 12 4G ಫೀಚರ್ಸ್‌: ಈ ಫೋನ್ (Redmi 12 4G) 90 Hz ರಿಫ್ರೆಶ್ ರೇಟ್ ನೊಂದಿಗೆ 6.79 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1080x2460 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಹಾಗೂ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಈ ಫೋನ್ ಪ್ಯಾಕ್‌ ಆಗಿದೆ.

ಮೊದಲ ಸೇಲ್‌ನಲ್ಲೇ  ಇಷ್ಟೊಂದು ಫೋನ್‌ಗಳು ಸೇಲ್! ದಾಖಲೆ ಬರೆದ ರೆಡ್ಮಿ 12 ಸರಣಿ

ಉಳಿದಂತೆ ಟ್ರಿಪಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು, 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ನೀಡಲಾಗಿದೆ. ಇದರೊಂದಿಗೆ ವೈ-ಫೈ 802.11 a/b/g/n, ಜಿಪಿಎಸ್‌, ಬ್ಲೂಟೂತ್ ಆವೃತ್ತಿ v5.30, ಎನ್‌ಎಫ್ಸಿ, ಯುಎಸ್‌ಬಿ ಟೈಪ್-ಸಿ, 3G, ಮತ್ತು 4G ಕನೆಕ್ಟಿವಿಟಿ ಬೆಂಬಲ ಇದೆ.

ಇನ್ನು ರೆಡ್ಮಿಯ ಪ್ರಮುಖ ಫೋನ್‌ಗಳಲ್ಲಿ ರೆಡ್ಮಿ 12 5G ಸ್ಮಾರ್ಟ್‌ಫೋನ್‌ (Redmi 12 is a 5G smartphone) ವಿಶೇಷ ಎನಿಸಿದೆ. ಈ ಫೋನ್ 4nm ಆರ್ಕಿಟೆಕ್ಚರ್ ಅನ್ನು ಒಳಗೊಂಡಿರುವ ಸ್ನಾಪ್‌ಡ್ರಾಗನ್ 4 ಜನ್ 2 5G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಜೊತೆಗೆ ಭಾರತದಲ್ಲಿ ರೆಡ್ಮಿ 12 5G ಯ ಜಾಗತಿಕ ಚೊಚ್ಚಲ ಪ್ರವೇಶದೊಂದಿಗೆ ಶಿಯೋಮಿ ಮತ್ತೊಮ್ಮೆ ಸಾಟಿಯಿಲ್ಲದ 5G ಅನುಭವಗಳನ್ನು ಜನಸಾಮಾನ್ಯರಿಗೆ ನೀಡಲು ಸಜ್ಜಾಗಿದೆ ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
The Redmi 12 series was unveiled last week and the Redmi 12 series, which includes Redmi 12 5G and Redmi 12 4G, sold over 3 lakh units in its first sale on August 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+