Redmi smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ರೆಡ್ಮಿಯ ಹೊಸ ಫೋನ್; ಬೆಲೆ ಎಷ್ಟು?
ರೆಡ್ಮಿ ಫೋನ್‌ಗಳು ಇಂದು ಮಿಡ್ ರೇಂಜ್ ಫೋನ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಆಳುತ್ತಿದ್ದು, ಸುಧಾರಿತ ಫೀಚರ್ಸ್‌ನೊಂದಿಗೆ ಗ್ರಾಹಕರಿಗೆ ಹೆಚ್ಚು ಇಷ್ಟ ಆಗುತ್ತಿವೆ. ಈ ನಡುವೆ ಹೊಸ ರೆಡ್ಮಿ ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಹೌದು, ರೆಡ್ಮಿ ಕಂಪೆನಿಯು ರೆಡ್ಮಿ 12 (Redmi 12) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nm ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ಗಾಗಿ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಜೊತೆಗೆ 256GB ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. ಹಾಗಿದ್ರೆ ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ.

ರೆಡ್ಮಿ 12 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.79 ಇಂಚಿನ FHD+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.
ರೆಡ್ಮಿ 12 ಸ್ಮಾರ್ಟ್‌ಫೋನ್ ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G88 12nm ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದು ಡ್ಯುಯಲ್ 2GHz ಕಾರ್ಟೆಕ್ಸ್-A75 +ಹೆಕ್ಸಾ 2GHz 6xಕಾರ್ಟೆಕ್ಸ್-A55 ಸಿಪಿಯುಗಳನ್ನು ಹೊಂದಿದೆ. ಜೊತೆಗೆ ಎಆರ್‌ಎಮ್ ಮಾಲಿ G52 2EEMC2 ಜಿಪಿಯು ಬಲ ಇದಕ್ಕಿದೆ. ಉಳಿದಂತೆ 4GB / 8GB RAMಹಾಗೂ 128GB/256GB ಇಂಟರ್ ಸ್ಟೋರೇಜ್ ಆಯ್ಕೆ ಇದ್ದು, ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಜೊತೆಗೆ 1TB ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ರೆಡ್ಮಿ 12 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇದು ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿ f/1.8 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ f/2.2 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, f/2.4 ದ್ಯುತಿರಂಧ್ರದೊಂದಿಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಲೈಟ್ ಆಯ್ಕೆ ನೀಡಲಾಗಿದೆ. ಉಳಿದಂತೆ f/2.1 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್‌ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ರೆಡ್ಮಿ 12 ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಜೊತೆಗೆ ಹೈಬ್ರಿಡ್ ಡ್ಯುಯಲ್ ಸಿಮ್ ಆಯ್ಕೆ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ, ಧೂಳು ಮತ್ತು ಸ್ಪ್ಲಾಶ್ ನಿರೋಧಕಕ್ಕಾಗಿ IP53 ರೇಟಿಂಗ್ ಹೊಂದಿದ್ದು, 3.5 ಎಂಎಂ ಆಡಿಯೊ ಜಾಕ್ ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್ + ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ಕನೆಕ್ಟಿಟಿವಿ ಸೌಲಭ್ಯ ಇದರಲ್ಲಿದೆ.

ರೆಡ್ಮಿ 12 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ: ಈ ಫೋನ್ 4GB + 128GB ಮಾದರಿಗೆ USD 149 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಇದರ ಬೆಲೆ 12,210ರೂ.ಗಳು. ಹಾಗೆಯೇ ಥೈಲ್ಯಾಂಡ್‌ನಲ್ಲಿ 8GB + 128GB ಫೋನ್ ಅಂದಾಜು 12,538 ರೂ.ಗಳ ಬೆಲೆ ಪಡೆದುಕೊಂಡಿದೆ. ಉಳಿದಂತೆ ಮಿಡ್‌ನೈಟ್ ಬ್ಲ್ಯಾಕ್, ಸ್ಕೈ ಬ್ಲೂ ಮತ್ತು ಪೋಲಾರ್ ಸಿಲ್ವರ್ ಬಣ್ಣಗಳಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಭಾರತದಲ್ಲಿ ಯಾವಾಗ ಲಭ್ಯ ಎಂಬ ಮಾಹಿತಿ ನಿರೀಕ್ಷಿಸಲಾಗಿದೆ.
ರೆಡ್ಮಿ ಬಡ್ಸ್ 4 ಆಕ್ಟಿವ್: ಈ ಫೋನ್ ಅನ್ನು ಲಾಂಚ್ ಮಾಡುವ ಮುನ್ನವೇ ರೆಡ್ಮಿ ಈ ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿ ಭಾರೀ ಸುದ್ದಿಯಲ್ಲಿತ್ತು. ಈ ಬಡ್ಸ್ ಆಡಿಯೊ-ವರ್ಧಿಸುವ ಫೀಚರ್ಸ್‌ಗಳೊಂದಿಗೆ ಪ್ಯಾಕ್ ಆಗಿದ್ದು, ದೀರ್ಘಕಾಲದ ಬ್ಯಾಕಪ್ ಇರುವ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ ಈ ಇಯರ್‌ಬಡ್ಸ್ ಗೂಗಲ್ ಫಾಸ್ಟ್‌ವೇರ್ ಸಿಸ್ಟಂ ಹೊಂದಿರುವುದರಿಂದ ಸಿಂಗಲ್ ಟ್ಯಾಪ್‌ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಜೊತೆಗೆ ಕನೆಕ್ಟ್ ಆಗುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








