Home
ಸುದ್ದಿಜಾಲ

ಸಖತ್ ಬೆಲೆ ಇಳಿಕೆ ಕಂಡ 'ರೆಡ್ಮಿ 12C' ಫೋನ್‌!..ಉಳಿತಾಯ ಪಕ್ಕಾ!

ಜನಪ್ರಿಯ ಶಿಯೋಮಿ ಮೊಬೈಲ್‌ ಸಂಸ್ಥೆಯು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ರೆಡ್ಮಿ 12C ಫೋನ್‌ ಫೀಚರ್ಸ್‌ ಹಾಗೂ ಪ್ರೈಸ್ ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಗ್ರಾಗಕರನ್ನು ಸೆಳೆದಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ನಲ್ಲಿ ಭರ್ಜರಿ ಬೆಲೆ ಇಳಿಕೆ ಪಡೆದಿದ್ದು, ಗ್ರಾಹಕರು ಅಚ್ಚರಿ ಪಡುವಂತೆ ಮಾಡಿದೆ.

ಹೌದು, ಶಿಯೋಮಿ ಸಂಸ್ಥೆಯ ರೆಡ್ಮಿ 12C ಸ್ಮಾರ್ಟ್‌ಫೋನ್‌ ಅಮೆಜಾನ್ ಆನ್‌ಲೈನ್‌ ತಾಣದಲ್ಲಿ ಈಗ 37% ನಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್‌ನ ವೇರಿಯಂಟ್‌ 13,999ರೂ. ಗಳ ಬೆಲೆಯನ್ನು ಹೊಂದಿದ್ದು, ಈಗ ಗ್ರಾಹಕರು 8,799ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಸಖತ್ ಬೆಲೆ ಇಳಿಕೆ ಕಂಡ 'ರೆಡ್ಮಿ 12C' ಫೋನ್‌!..ಉಳಿತಾಯ ಪಕ್ಕಾ!

ರೆಡ್ಮಿ 12C ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಶಾಡೋ ಬ್ಲ್ಯಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ರೆಡ್ಮಿ 12C ಫೋನ್‌ 1650 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.71 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, 20.6:9 ಅನುಪಾತ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯು ಟಿನ್ನಿ ಡಿವ್ ಡ್ರಾಪ್‌ ನಾಚ್‌ ರಚನೆ ಹೊಂದಿದ್ದು, ಜೊತೆಗೆ 500 nits ಬ್ರೈಟ್ನೆಸ್‌ ಹೊಂದಿದೆ.

ಪ್ರೊಸೆಸರ್‌ ಪವರ್ : ರೆಡ್ಮಿ 12C ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್ 12 ಓಎಸ್‌ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM + 128GB ಮತ್ತು 6GB + 128GB ಆಂತರೀಕ ಸ್ಟೋರೇಜ್ ವೇರಿಯಂಟ್‌ ಸಾಮರ್ಥ್ಯದ ಆಯ್ಕೆಗಳನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸಖತ್ ಬೆಲೆ ಇಳಿಕೆ ಕಂಡ 'ರೆಡ್ಮಿ 12C' ಫೋನ್‌!..ಉಳಿತಾಯ ಪಕ್ಕಾ!

ಕ್ಯಾಮೆರಾ ಸೆನ್ಸಾರ್ ಮಾಹಿತಿ : ರೆಡ್ಮಿ 12C ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಎರಡನೇ ಕ್ಯಾಮೆರಾ ಸೆನ್ಸಾರ್‌ ಬಗ್ಗೆ ಮಾಹಿತಿ ತಿಳಿಸಿಲ್ಲ. ಹಾಗೆಯೇ ಈ ಫೋನ್ ತನ್ನ ವರ್ಗದಲ್ಲೇ ಉತ್ತಮ ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು : ರೆಡ್ಮಿ 12C ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ಸಂಗ್ರಹಣೆ ವಿಸ್ತರಣೆಗೆ ಬೆಂಬಲವಿದೆ. ಸಾಧನವು ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G/5G VOLTE, ವೈ-ಫೈ, ಬ್ಲೂಟೂತ್ v5.0, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ.

ಮೆಮೊರಿ ಮತ್ತು ಕಲರ್ ಆಯ್ಕೆ : ರೆಡ್ಮಿ 12C ಫೋನ್‌ 4GB RAM + 128GB ಮತ್ತು 6GB + 128GB ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ. ಇನ್ನು ಈ ಫೋನ್ ಶಾಡೋ ಬ್ಲ್ಯಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Redmi 12C Price Drop on Amazon: Check offer Price and Specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+