Home
ಸುದ್ದಿಜಾಲ

Redmi: ಭಾರತಕ್ಕೆ ಬರಲಿದೆ ಹೊಸ ರೆಡ್ಮಿ 5G ಫೋನ್... 50MP ಕ್ಯಾಮೆರಾ.. ಬಲಿಷ್ಠ ಪ್ರೊಸೆಸರ್‌?

ರೆಡ್ಮಿ ಫೋನ್‌ಗಳು (Redmi phone) ಸುಧಾರಿತ ಫೀಚರ್ಸ್ ಹಾಗೂ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡಿವೆ. ಭಾರತದಲ್ಲಿ ಈ ಫೋನ್‌ಗಳಿಗೆ ಅಗಾಧವಾದ ಬೇಡಿಕೆ ಇದ್ದು, ಈ ಫೋನ್‌ಗಳ ಫೀಚರ್ಸ್‌ಗೆ ಗ್ರಾಹಕರು ಮಾರುಹೋಗಿದ್ದಾರೆ. ಈ ನಡುವೆ ರೆಡ್ಮಿ ಭಾರತದಲ್ಲಿ ಹೊಸ ಫೋನ್‌ ಅನ್ನು ಪರಿಚಯಿಸಲು ಮುಂದಾಗಿದೆ.

ಹೌದು, ರೆಡ್ಮಿ ಮುಂದಿನ ರೆಡ್ಮಿ 13C 5G (Redmi 13C 5G) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಎಲ್ಲಾ ಸಿದ್ಧತೆ ನಡೆಸಿದೆ. ಕೆಲವು ಮಾಹಿತಿ ಪ್ರಕಾರ ಮುಂದಿನ ವಾರವೇ ಈ ಫೋನ್‌ ಭಾರತಕ್ಕೆ ಲಗ್ಗೆ ಇಡಲಿದೆಯಂತೆ. ಈ ಫೋನ್ ಲಾಂಚ್‌ ಆಗುವ ಮುನ್ನವೇ ಇದರ ಕೆಲವು ಪ್ರಮುಖ ಫೀಚರ್ಸ್‌ ಲೀಕ್‌ ಆಗಿವೆ. ಅದರಂತೆ ಈ ಫೋನ್ 50MP ಕ್ಯಾಮೆರಾ ಹಾಗೂ ವಾಟರ್‌ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು? ಎಂಬ ಲೀಕ್‌ ಮಾಹಿತಿ ಇಲ್ಲಿದೆ ನೋಡಿ.

ಭಾರತಕ್ಕೆ ಬರಲಿದೆ ಹೊಸ ರೆಡ್ಮಿ 5G ಫೋನ್.. 50MP ಕ್ಯಾಮೆರಾ.. ಬಲಿಷ್ಠ ಪ್ರೊಸೆಸರ್?

ರೆಡ್ಮಿ 13C 5G: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ (Triple rear camera) ರಚನೆ ಹೊಂದಿರಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ವಾಟರ್‌ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ಹೊಂದಿರಬಹುದು ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ಈ ರೆಡ್ಮಿ 13C 5G ಸ್ಮಾರ್ಟ್‌ಫೋನ್‌ನ ಮಾದರಿ ಸಂಖ್ಯೆ 23124RN87I ಎಂದು ವರದಿಯಾಗಿದೆ.

ಅಷ್ಟೇ ಅಲ್ಲದೆ ಈ ರೆಡ್ಮಿ 13C 5G ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನೊಂದಿಗೆ (Dimensity 6100+ chipset) ಪ್ಯಾಕ್‌ ಆಗಲಿದೆ ಎಂದು ಹೇಳಲಾಗಿದೆ. ಇದೇ ನಿಜವಾದರೆ ಗೇಮರ್‌ಗಳಿಗೆ ಹಾಗೂ ಫೋನ್‌ ಅನ್ನು ಹೆಚ್ಚಾಗಿ ಬಳಕೆ ಮಾಡುವವರಿಗೆ ಸಾಕಷ್ಟು ಅನುಕೂಲ ಆಗಲಿದೆ. ಯಾಕೆಂದರೆ ಇದು ಉತ್ತಮ ಕಾರ್ಯಕ್ಷಮತೆ ನೀಡುವ ಪ್ರೊಸೆಸರ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಮೂಲಕ ಗೇಮಿಂಗ್‌ ಪ್ರಿಯರು ಈ ಫೋನ್‌ ಅನ್ನು ಕಣ್ಣುಮುಚ್ಚಿಕೊಂಡು ಖರೀದಿ ಮಾಡಬಹುದಾಗಿದೆ.

ಹಾಗೆಯೇ ಈ ಫೋನ್ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 50 ಮೆಗಾಪಿಕ್ಸೆಲ್‌ನ ಹಿಂಬದಿಯ ಕ್ಯಾಮೆರಾ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಸೇರಿದಂತೆ ಇನ್ನೂ ಹಲವು ಚೊಚ್ಚಲ ಫೀಚರ್ಸ್‌ಗಳು ಈ ಫೋನ್‌ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ನಡುವೆ ರೆಡ್ಮಿ 13C 4G ಯನ್ನೂ ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ.

ರೆಡ್ಮಿ 13C 4G 23100RN82L, 23108RN04Y, ಮತ್ತು 23106RN0DA ಮಾದರಿ ಸಂಖ್ಯೆಗಳನ್ನು ಹೊಂದಿದೆ. ಆದರೆ ಈ ಫೋನ್‌ನ 4G ರೂಪಾಂತರವು ಚೀನಾದ ಹೊರಗೆ ಮಾತ್ರ ಲಭ್ಯವಿರುತ್ತದೆ ಎಂದು ಹೆಳಲಾಗಿದೆ ವರದಿಯ ಪ್ರಕಾರ, ರೆಡ್ಮಿ 13C 4G ಅನ್ನು ಆಂತರಿಕವಾಗಿ 'ಗೇಲ್' ಎಂದು ಉಲ್ಲೇಖಿಸಲಾಗುತ್ತದೆ. ಆದರೆ ರೆಡ್ಮಿ 13C 5G ಅನ್ನು 'ಏರ್' ಎಂದು ಕೋಡ್ ನೇಮ್ ಮಾಡಲಾಗಿದೆ.

ರೆಡ್ಮಿ 13C 4G ಫೋನ್‌ನ ಕೆಲವು ಲೀಕ್‌ ಫೀಚರ್ಸ್‌ ಕಡೆ ಗಮನಹರಿಸುವುದಾದರೆ, ರೆಡ್ಮಿ 13C 4G ಮರುಬ್ರಾಂಡ್ ಮಾಡಲಾದ ಪೊಕೊ C65 ಫೋನ್ ಎನ್ನಲಾಗಿದೆ ಇದು ಮೀಡಿಯಾ ಟೆಕ್ ಹಿಲಿಯೊ G85 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ರನ್‌ ಆಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಫೋನ್‌ ಸಹ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಹೊಂದಿರುವ ನಿರೀಕ್ಷೆಯಿದೆ.

ಈ ನಡುವೆ ಕೆಲವು ದಿನಗಳ ಹಿಂದೆ ಲಾಂಚ್‌ ಮಾಡಿದ ರೆಡ್ಮಿ 12 5G ಫೋನ್‌ ಭಾರತದಲ್ಲಿ ಬಹಳ ಸದ್ದು ಮಾಡುತ್ತಿದೆ. ರೆಡ್ಮಿ 12 5G ಫೋನ್ (Redmi 12 5G) ಆಂಡ್ರಾಯ್ಡ್‌ 13 ಓಎಸ್‌ ನೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜನ್‌ 2 ಚಿಪ್‌ಸೆಟ್ ಅನ್ನು ಹೊಂದಿದ್ದು, 6.79 ಇಂಚಿನ ಫುಲ್‌ ಹೆಚ್‌ಡಿ+ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್ ಮತ್ತು 550 ನಿಟ್ಸ್ ಪೀಕ್ ಬ್ರೈಟ್‌ನೆಸ್ ಆಯ್ಕೆ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಬೆಂಬಲವನ್ನು ಈ ಫೋನ್‌ ಪಡೆದುಕೊಂಡಿದೆ.

ಭಾರತಕ್ಕೆ ಬರಲಿದೆ ಹೊಸ ರೆಡ್ಮಿ 5G ಫೋನ್.. 50MP ಕ್ಯಾಮೆರಾ.. ಬಲಿಷ್ಠ ಪ್ರೊಸೆಸರ್?

ಇದರೊಂದಿಗೆ ಈ ರೆಡ್ಮಿ 12 5G ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ + 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ನ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಈ ಮೂಲ ಅತ್ಯುತ್ತಮವಾದ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರ ಜೊತೆಗೆ ಈ ಫೋನ್‌ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ರೆಡ್ಮಿ 12 5G ಫೋನ್ 18W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಈ ಮೂಲಕ ದೀರ್ಘ ಬ್ಯಾಟರಿ ಬ್ಯಾಕಪ್‌ ನಿರೀಕ್ಷೆ ಮಾಡಬಹುದಾಗಿದೆ. ಹಾಗೆಯೇ ಇದು 11,999 ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಇ-ಕಾಮರ್ಸ್‌ ಸೈಟ್‌ನಲ್ಲಿ ಖರೀದಿ ಮಾಡುವ ಗ್ರಾಹಕರು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Redmi 13C 5G smartphone will be launch soon in india. According to some information, this phone will be launched in India next week itself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+