Home
ಸುದ್ದಿಜಾಲ

ನಾಳೆ ರೆಡ್ಮಿ 14C 5G ಫೋನಿನ ಫಸ್ಟ್‌ ಸೇಲ್‌; ಕಡಿಮೆ ಬೆಲೆ, ಬೆಸ್ಟ್‌ ಫೀಚರ್ಸ್‌!

ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ರೆಡ್ಮಿ ಕಂಪನಿಯು ಇತ್ತೀಚಿಗೆ ನೂತನವಾಗಿ ಲಾಂಚ್ ಮಾಡಿರುವ ರೆಡ್ಮಿ 14C 5G (REDMI 14C 5G) ಮೊಬೈಲ್‌ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಹೊಸ ಸ್ಮಾರ್ಟ್‌ಫೋನ್‌ ನಾಳೆ (ಜನವರಿ 10 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಮಾರಾಟ ಶುರು ಮಾಡಲಿದೆ.

ಹೌದು, ರೆಡ್ಮಿ 14C 5G ಮೊಬೈಲ್‌ ನಾಳೆ (ಜ 10) ಮೊದಲ ಸೇಲ್‌ ಅನ್ನು ಫ್ಲಿಪ್‌ಕಾರ್ಟ್‌ ಮೂಲಕ ಪ್ರಾರಂಭ ಮಾಡಿದ್ದು, ಗ್ರಾಹಕರಿಗೆ ಸಖತ್ ಕೊಡುಗೆ ಸಹ ಸಿಗಲಿದೆ. ಈ ಫೋನ್‌ 4GB RAM+ 64GB, 4GB RAM+ 128 GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಗ್ರಾಹಕರು ಆಯ್ದ ಬ್ಯಾಂಕ್‌ಗಳ ಆಫರ್‌ ಸಹ ಪಡೆಯಬಹುದು.

ನಾಳೆ ರೆಡ್ಮಿ 14C 5G ಫೋನಿನ ಫಸ್ಟ್‌ ಸೇಲ್‌; ಕಡಿಮೆ ಬೆಲೆ, ಬೆಸ್ಟ್‌ ಫೀಚರ್ಸ್‌!

ಅಂದಹಾಗೆ ರೆಡ್ಮಿ 14C ಫೋನ್‌ 4GB RAM+ 64GB ವೇರಿಯಂಟ್‌ ಬೆಲೆಯು 9,999ರೂ. ಆಗಿದ್ದು, 4GB RAM+ 128 GB ಸ್ಟೋರೇಜ್‌ ವೇರಿಯಂಟ್‌ ದರವು 10,999ರೂ. ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 11,999ರೂ. ಆಗಿದೆ. ಇನ್ನು ಈ ಫೋನ್‌ 5,160 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೆ ರೆಡ್ಮಿ 14C 5G (REDMI 14C 5G) ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 14C ಫೋನ್‌ ಫೀಚರ್ಸ್‌

ರೆಡ್ಮಿ 14C 5G ಸ್ಮಾರ್ಟ್‌ಫೋನ್ 6.88 ಇಂಚಿನ ಪೂರ್ಣ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ವಿನ್ಯಾಸ ಹೊಂದಿದೆ. ಇದು 1600 x 720 ಪಿಕ್ಸೆಲ್‌ ರೆಸಲ್ಯೂಶನ್‌ ಸಪೋರ್ಟ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್‌ ಪಡೆದಿದೆ. ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯ ಸೌಲಭ್ಯ ಸಹ ಹೊಂದಿದೆ.

ರೆಡ್ಮಿ 14C 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿದೆ. ಈ ಮೊಬೈಲ್‌ ಆಂಡ್ರಾಯ್ಡ್‌ 14 ಓಎಸ್‌ನ ಶಿಯೋಮಿ ಹೈಪರ್ ಓಎಸ್‌ ನಲ್ಲಿ ಕಾರ್ಯ ಮಾಡುತ್ತದೆ. ಹಾಗೆಯೇ ಗ್ರಾಫಿಕ್ಸ್‌ಗಾಗಿ ಈ ಮೊಬೈಲ್ ಅಡ್ರಿನೊ 613 ಜಿಪಿಯು ಸಹ ಹೊಂದಿದೆ.

ರೆಡ್ಮಿ 14C 5G ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಹಾಗೆಯೇ ಇದರ ಸೆಕೆಂಡರಿ ಕ್ಯಾಮೆರಾವು ಸಹ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಈ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ನೀಡಲಾಗಿದೆ.

ರೆಡ್ಮಿ 14C 5G ಸ್ಮಾರ್ಟ್‌ಫೋನ್ 5,160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದ್ದು, ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಂಗ್ ಹೊಂದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್ 4G VoLTE, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.4, ಎಫ್‌ಎಂ ರೇಡಿಯೋ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬೆಲೆ ಹಾಗೂ ಲಭ್ಯತೆ
ರೆಡ್ಮಿ 14C ಫೋನ್‌ 4GB RAM+ 64GB ವೇರಿಯಂಟ್‌ ಬೆಲೆಯು 9,999ರೂ. ಆಗಿದ್ದು, 4GB RAM+ 128 GB ಸ್ಟೋರೇಜ್‌ ವೇರಿಯಂಟ್‌ ದರವು 10,999ರೂ. ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 11,999ರೂ. ಆಗಿದೆ. ಇನ್ನು ಈ ಫೋನ್‌ ಜನವರಿ 10 ರಿಂದ ರೆಡ್ಮಿ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ ಮೂಲಕ ತನ್ನ ಮೊದಲ ಸೇಲ್‌ ಶುರು ಮಾಡಿದೆ.

Best Mobiles in India

English summary
Redmi 14C 5G First Sale Tomorrow in India via flipkart, amazon. check price, specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+