Home
ಸುದ್ದಿಜಾಲ

Redmi: ಬರಲಿದೆ ಪವರ್‌ಫುಲ್ 5G ಫೋನ್; ಫೀಚರ್ಸ್‌ ಸೋರಿಕೆ.. ಅಗ್ಗದ ಬೆಲೆ?

ರೆಡ್ಮಿ ಕಂಪನಿಯು ತನ್ನ 14 ಸರಣಿಯಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ರೆಡ್ಮಿ 14C 4G (Redmi 14C 4G) ಸ್ಮಾರ್ಟ್‌ಫೋನ್ ಅನ್ನು ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಇದು ಮೀಡಿಯಾ ಟೆಕ್ ಹೆಲಿಯೊ G81ಅಲ್ಟ್ರಾ ಚಿಪ್‌ಸೆಟ್, 8GB RAM ಮತ್ತು 5,160mAh ಬ್ಯಾಟರಿಯನ್ನು ಹೊಂದಿದೆ. ಇದೀಗ, ಕಂಪನಿಯು ಈ ಮೊಬೈಲ್‌ನ 5G ಮಾದರಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಅದುವೇ, ರೆಡ್ಮಿ 14C 5G (Redmi 14C 5G) ಸ್ಮಾರ್ಟ್‌ಫೋನ್.

ಹೌದು, ರೆಡ್ಮಿ 14C 5G ಮೊಬೈಲ್ ಚೈನೀಸ್ ಪ್ರಮಾಣೀಕರಣ ಸೈಟ್ TENAA ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಮುಂಬರುವ ರೆಡ್ಮಿ 5G ಫೋನಿನ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಫೋನನ್ನು ಮಾಡೆಲ್ ಸಂಖ್ಯೆ 2411DRN47C ನೊಂದಿಗೆ ಪ್ರಮಾಣೀಕರಿಸಲಾಗಿದೆ. ಫೋನಿನ ಫೋಟೋ ಮತ್ತು ಮಾರ್ಕೆಟಿಂಗ್ ಹೆಸರಿನ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ, ಈ ಮೊಬೈಲ್ ಅನ್ನು ರೆಡ್ಮಿ 14C 5G ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Redmi: ಬರಲಿದೆ ಪವರ್‌ಫುಲ್ 5G ಫೋನ್; ಫೀಚರ್ಸ್‌ ಸೋರಿಕೆ.. ಅಗ್ಗದ ಬೆಲೆ?

ರೆಡ್ಮಿ 14C 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರೆಡ್ಮಿ 14C 5G ಫೋನ್ 6.88 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 720 x 1640 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ದೊಡ್ಡ ಡಿಸ್ಪ್ಲೇಯು LCD ಪ್ಯಾನೆಲ್ ಎಂದು ಹೇಳಲಾಗುತ್ತದೆ. ಇದು 120Hz ರಿಫ್ರೆಶ್ ದರವನ್ನು ಪಡೆಯುವ ಸಾಧ್ಯತೆಯಿದೆ.

ಪ್ರೊಸೆಸರ್: ಮಾಹಿತಿ (Tena) ಪ್ರಕಾರ, ರೆಡ್ಮಿ 14C 5G ಮೊಬೈಲ್ 2.36 GHz ಗಡಿಯಾರದ ವೇಗದೊಂದಿಗೆ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿರಲಿದೆ. ಈ ಮೊಬೈಲ್ ಚಿಪ್‌ಸೆಟ್‌ನ ಹೆಸರನ್ನು ಇಲ್ಲಿ ಬಹಿರಂಗಪಡಿಸಿಲ್ಲ. ಆದರೆ, ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 (Qualcomm Snapdragon 4 Gen 2) ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಸ್ಟೋರೇಜ್‌: ರೆಡ್ಮಿ 14C 5G ಪ್ರಮಾಣೀಕರಣ ಸೈಟ್‌ನಲ್ಲಿ ಒಟ್ಟು ನಾಲ್ಕು RAM ರೂಪಾಂತರಗಳಲ್ಲಿ ಪಟ್ಟಿಮಾಡಲಾಗಿದೆ. ಇದು 4GB, 6GB, 8GB ಮತ್ತು 12GB RAM ಅನ್ನು ಹೊಂದಿದ್ದು, 64GB, 128GB, 256GB ಮತ್ತು 512GB ಸ್ಟೋರೇಜ್‌ ಅನ್ನು ಒಳಗೊಂಡಿರುತ್ತದೆ. ಆದರೆ, ಈ ಫೋನ್ ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ರೂಪಾಂತರಗಳಲ್ಲಿ ಮಾರಾಟವಾಗಲಿದೆ.

ಬ್ಯಾಟರಿ: ರೆಡ್ಮಿ 14C 5G ಸ್ಮಾರ್ಟ್‌ಫೋನ್‌ 5,060mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್ ಅನ್ನು ಅದರ 4G ಮಾದರಿಯಂತೆ 5,160mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಮಾಡಬಹುದು. ಇದು 18W ಚಾರ್ಜಿಂಗ್ ಅನ್ನು ಸಹ ಪಡೆಯುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ?: Lava: ಬರ್ತಿದೆ ಹೊಸ 5G ಫೋನ್; ಬಿಡುಗಡೆ ದಿನಾಂಕ ಘೋಷಣೆ.. ಬೆಲೆ, ವಿಶೇಷತೆಗಳೇನು?

ಕ್ಯಾಮೆರಾ: ರೆಡ್ಮಿ 14C 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. TENAA ಪಟ್ಟಿಯ ಪ್ರಕಾರ, ಫೋನಿನ ಹಿಂದಿನ ಪ್ಯಾನೆಲ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಜೊತೆಗ, 0.8 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಾಗಿ, 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ.

ಇತರೆ ವೈಶಿಷ್ಟ್ಯಗಳು: TENAA ಪಟ್ಟಿಯ ಪ್ರಕಾರ, ಈ ರೆಡ್ಮಿ 5G ಫೋನ್‌ 171.88 x 77.78 x 8.3 ಎಂಎಂ ದಪ್ಪ ಮತ್ತು 212.3 ಗ್ರಾಂ ತೂಕ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಮೊಬೈಲ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ. TENAA ಕ್ಕಿಂತ ಮೊದಲು, IMEI ಡೇಟಾಬೇಸ್‌ನಲ್ಲಿ ಮಾದರಿ ಸಂಖ್ಯೆ 2411DRN47I ಅನ್ನು ಹೊಂದಿರುವ ಇದೇ ಸ್ಮಾರ್ಟ್‌ಫೋನ್ ಅನ್ನು ಸಹ ಗುರುತಿಸಲಾಗಿದೆ.

ರೆಡ್ಮಿ14C 4G ಬೆಲೆ

ಕಂಪನಿಯು ರೆಡ್ಮಿ14C 4G (Redmi 14C 4G) ಸ್ಮಾರ್ಟ್‌ಫೋನ್‌ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 9,999 ರೂ. (119 US ಡಾಲರ್‌) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

Best Mobiles in India

English summary
Redmi 14C 5G specifications leaked before launch in india: what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+