ಮತ್ತೊಮ್ಮೆ ಫ್ಲಾಷ್ ಸೇಲಿನಲ್ಲಿ ರೆಡ್‌ಮಿ 5: ಜಿಯೋದಿಂದ ಭರ್ಜರಿ ಆಫರ್..!
ಅಮೆಜಾನ್‌ನಲ್ಲಿ ಮಾತ್ರವೇ ಮಾರಾಟವಾಗಲಿರುವ ರೆಡ್‌ಮಿ 5 ಸ್ಮಾರ್ಟ್‌ಫೋನ್ ಇಂದು ಮತ್ತೆ 12pmಗೆ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳಲಿದ್ದು, ಮಿ.ಕಾಮ್ ಮತ್ತು ಮಿ ಸ್ಟೋರ್‌ಗಳಲ್ಲಿಯೂ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಈಗಾಗಲೇ ಹಲವು ಸೇಲ್‌ಗಳಲ್ಲಿ ಗ್ರಾಹಕರ ಮನಗೆದ್ದಿರುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿದೆ.

ಮಾರ್ಚ್ 14 ರಂದು ಲಾಂಚ್ ಆದ ರೆಡ್‌ಮಿ 5 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಬೆಸ್ಟ್ ಫೋನ್ ಎನ್ನಬಹುದಾಗಿದ್ದು, ಉತ್ತಮ ಪ್ರೋಸೆಸರ್, ಉತ್ತಮ ಕ್ಯಾಮೆರಾ, ಹೊಸ ಮಾದರಿಯ ವಿನ್ಯಾಸ, ಫುಲ್ ಸ್ಕ್ರಿನ್ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ಟಾಪ್ ಎಂಡ್ ಸ್ಮಾರ್ಟ್ ಫೋನ್ ಬಳಕೆಯ ಅನುಭವವನ್ನು ನೀಡಲಿದೆ.
ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 2GB RAM ಮತ್ತು 16GB ಮೆಮೊರಿಯ ಸ್ಮಾರ್ಟ್‌ಫೋನ್ ರೂ.7,999ಕ್ಕೆ, 3GB RAM ಮತ್ತು 32GB ಇಂಟರ್ನಲ್ ಮೊಮೆರಿಯ ಫೋನ್ ರೂ.8999ಕ್ಕೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ರೂ.10,999ಕ್ಕೆ ಮಾರಾಟವಾಗುತ್ತಿದೆ.

ರೆಡ್‌ಮಿ 5 ಸ್ಮಾರ್ಟ್‌ಫೋನ್ 18:9 ಅನುಪಾತದ 5.7 ಇಂಚಿನ HD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ನೊಂದಿಗೆ ಕಾಣಿಸಿಕೊಳ್ಳಲಿದೆ. ರೆಡ್‌ಮಿ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರೊಂದಿಗೆ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ LED ಫ್ಲಾಷ್ ಲೈಟ್ ಇದೆ.

ಶಿಯೋಮಿ ರೆಡ್‌ಮಿ 5 ಸ್ಮಾರ್ಟ್‌ಫೋನಿನಲ್ಲಿ 3300mAh ಬ್ಯಾಟರಿಯನ್ನು ಅಳವಡಿಸಿದ್ದು, ಇದು ಎರಡು ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮೇಲೆ ಜಿಯೋ ಕ್ಯಾಷ್ ಬ್ಯಾಕ್ ಘೋಷಣೆ ಮಾಡಿದೆ. ಈ ರೆಡ್‌ಮಿ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋ ರೂ.2200 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ದೊರೆಯಲಿದೆ.
ಓದಿರಿ: ಪೋನ್ ಡಿಲಿವರಿ ಲೇಟ್ ಮಾಡಿದ್ದಕ್ಕೆ 20 ಬಾರಿ ಚಾಕುವಿನಿಂದ ಇರಿದ ಮಹಿಳೆ..!
ಇದಲ್ಲದೇ ಶಿಯೋಮಿ ಫೋನ್ ಖರೀದಿದಾರರಿಗೆ ಜಿಯೋ 100GB ಹೆಚ್ಚುವರಿ ಡೇಟಾವನ್ನು ನೀಡಲಿದೆ. ಇದಲ್ಲದೇ ಅಮೆಜಾನ್‌ನಲ್ಲಿ ರೆಡ್‌ಮಿ 5 ಸ್ಮಾರ್ಟ್‌ಫೋನ್ ಕೊಳ್ಳುವವರಿಗಾಗಿ ಕಿಂಡಲ್ ಇ ಬುಕ್ ಅನ್ನು ಶೇ.90% ಕಡಿಮೆ ಬೆಲೆಗೆ ಮಾರಾಟವನ್ನು ಮಾಡಲಿದೆ.


Click it and Unblock the Notifications