Home
ಸುದ್ದಿಜಾಲ

ಶಿಯೋಮಿಯ ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!

ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಪಡೆದಿರುವ ಶಿಯೋಮಿ ಸಂಸ್ಥೆಯು ಇದೀಗ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಜನಪ್ರಿಯ ರೆಡ್ಮಿ ನೋಟ್ 8, ರೆಡ್ಮಿ 8 ಮತ್ತು ರೆಡ್ಮಿ 8A ಡ್ಯುಯಲ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದ್ದು, ಗ್ರಾಹಕರಿಗೆ ಹೊರೆ ನೀಡಿದೆ. ಸಂಸ್ಥೆಯ ಅಧಿಕೃತ ಮಿ.ಕಾಮ್ (Mi.com) ವೆಬ್‌ಸೈಟ್‌ನಲ್ಲಿ ಈ ಫೋನ್‌ಗಳ ಹೊಸ ಪರಿಷ್ಕೃತ ಬೆಲೆಗಳು ಅಪ್‌ಡೇಟ್ ಆಗಿವೆ.

ರೆಡ್ಮಿ ಸ್ಮಾರ್ಟ್‌ಫೋನ್

ಹೌದು, ಜನಪ್ರಿಯ ಶಿಯೋಮಿ ತನ್ನ ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಜಿಎಸ್‌ಟಿ ಹೆಚ್ಚಳದಿಂದ ಕಳೆದ ತಿಂಗಳಲ್ಲಿಯೂ ಫೋನ್‌ಗಳ ಬೆಲೆ ಏರಿಕೆ ಮಾಡಿದ್ದು, ಈಗ ಮತ್ತೆ ಮೂರು ಫೋನ್‌ಗಳ ಬೆಲೆಯಲ್ಲಿ ಬದಲಾವಣೆ ಮಾಡಿದೆ. ರೆಡ್ಮಿ ನೋಟ್ 8 ಫೋನ್ 500ರೂ, ರೆಡ್ಮಿ 8 ಮತ್ತು ರೆಡ್ಮಿ 8A ಡ್ಯುಯಲ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ 300ರೂ.ಏರಿಕೆ ಮಾಡಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಹೊಸ ದರಗಳು ಜಾರಿಯಾಗಿವೆ.

ಫೋನ್‌ಗಳ ಪರಿಷ್ಕೃತ ಬೆಲೆ ಹೀಗಿವೆ

ಫೋನ್‌ಗಳ ಪರಿಷ್ಕೃತ ಬೆಲೆ ಹೀಗಿವೆ

ಶಿಯೋಮಿಯ ರೆಡ್ಮಿ 8A ಡ್ಯುಯಲ್‌ 2GB RAM ಮತ್ತು 32GB ಸ್ಟೋರೇಜ್‌ನ ವೇರಿಯಂಟ್ ಬೆಲೆ 6,999ರೂ. ಆಗಿತ್ತು. 300ರೂ. ಏರಿಕೆಯಿಂದಾಗಿ ಈಗ 7,299ರೂ. ಆಗಿದೆ. ಇನ್ನು 3GB RAM ಮತ್ತು 32GB ವೇರಿಯಂಟ್‌ ಬೆಲೆಯು 7,999ರೂ. ಆಗಿದ್ದು, ಈ ವೇರಿಯಂಟ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನು 8,999ರೂ.ಗೆ ಲಭ್ಯ ಇದ್ದ ರೆಡ್ಮಿ 8 ಫೋನಿನ 4GB+64GB ವೇರಿಯಂಟ್‌ ಈಗ 9,299ರೂ. ಆಗಿದೆ. ಹಾಗೆಯೇ ರೆಡ್ಮಿ ನೋಟ್ 8 ಫೋನ್ 4GB+64GB ವೇರಿಯಂಟ್ ಬೆಲೆಯಲ್ಲಿ 500ರೂ. ಏರಿಕೆ ಆಗಿದ್ದು, ಈಗ 11,499ರೂ. ಆಗಿದೆ.

ರೆಡ್ಮಿ 8A ಡ್ಯುಯಲ್‌-ಫೀಚರ್ಸ್‌

ರೆಡ್ಮಿ 8A ಡ್ಯುಯಲ್‌-ಫೀಚರ್ಸ್‌

ರೆಡ್ಮಿ 8A ಸ್ಮಾರ್ಟ್‌ಫೋನ್ 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಡಾಟ್‌ ನಾಚ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಹಿಂಬದಿಯ ರಿಯರ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದ್ದು, ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ರೆಡ್ಮಿ 8 ಫೋನ್-ಫೀಚರ್ಸ್‌

ರೆಡ್ಮಿ 8 ಫೋನ್-ಫೀಚರ್ಸ್‌

ರೆಡ್ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಮೆಮೊರಿ ಹೆಚ್ಚಿಸಲು ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಈ ಫೋನ್ 12 ಎಂಪಿ ಪ್ರೈಮರಿ ಕ್ಯಾಮೆರಾ ಹಾಗೂ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಪಡೆದಿದೆ.

ರೆಡ್ಮಿ ನೋಟ್ 8-ಫೀಚರ್ಸ್‌

ರೆಡ್ಮಿ ನೋಟ್ 8-ಫೀಚರ್ಸ್‌

ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು ಪರದೆ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನಿನಲ್ಲಿ ನಾಲ್ಕು ಹಿಂದಿನ ಕ್ಯಾಮೆರಾಗಳನ್ನು ನಿಡಲಾಗಿದ್ದು, ಅವುಗಳು 48 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಮತ್ತು ಎರಡು 2 ಮೆಗಾಪಿಕ್ಸೆಲ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 4000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ಹೊಂದಿದೆ.

Best Mobiles in India

English summary
Xiaomi has increased the prices for its Redmi 8A Dual, Redmi 8, and Redmi Note 8 by Rs 500.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+