Home
ಸುದ್ದಿಜಾಲ

Redmi: ರೆಡ್ಮಿಯ ಈ ಆಕರ್ಷಕ ಶೈಲಿಯ ಸ್ಮಾರ್ಟ್‌ಫೋನ್‌ 8,990ರೂ.ಗಳ ಆಫರ್ ಬೆಲೆಗೆ! 64 GB ಸ್ಟೋರೇಜ್‌

ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphone) ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್‌ ಹೊಂದುವ ಮೂಲಕ ಸಖತ್‌ ಸೌಂಡ್‌ ಮಾಡುತ್ತವೆ. ಅಂದರೆ ಈ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ನಡುವೆ ರೆಡ್ಮಿಯ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ವೊಂದನ್ನು ಹೆಚ್ಚಿನ ಆಫರ್ ನೀಡಲಾಗಿದೆ.

ಹೌದು, ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ಗೆ (Redmi 9 Activ smartphone) ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ 18% ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 5000 mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಎಲ್ಲಾ ರೀತಿಯ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್‌ ಪಡೆದಿದೆ. ಹಾಗಿದ್ರೆ, ಇದರ ಇತರೆ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ರೆಡ್ಮಿಯ ಈ ಆಕರ್ಷಕ ಶೈಲಿಯ ಸ್ಮಾರ್ಟ್‌ಫೋನ್‌ 8,990ರೂ.ಗಳ ಆಫರ್ ಬೆಲೆಗೆ!

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಅಫರ್‌ ಬೆಲೆಗೆ ಖರೀದಿ ಮಾಡುವ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸಿ. ಈ ಸ್ಮಾರ್ಟ್‌ಫೋನ್ 6.53 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 400 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ, 20:9 ಅನುಪಾತ ದೊಂದಿಗೆ ಕಾಣಿಸಿಕೊಂಡಿದೆ.

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಮೀಡಿಯಾಟೆಕ್ MT6765G ಹಿಲಿಯೊ G35 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಆಕ್ಟಾ-ಕೋರ್ (4x2.3 GHz ಕಾರ್ಟೆಕ್ಸ್-A53 & 4x1.8 GHz ಕಾರ್ಟೆಕ್ಸ್-A53) ಬಲ ಪಡೆದಿದೆ ಇದರೊಂದಿಗೆ ಪವರ್‌ವಿಆರ್‌ GE8320 ಜಿಪಿಯು ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್‌ ಅನ್ನು ರನ್‌ ಮಾಡಲಿದೆ. ಉಳಿದಂತೆ ಈ ಫೋನ್ 64GB ಹಾಗೂ 4GB RAM ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದ್ದು, ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ರೆಡ್ಮಿಯ ಈ ಆಕರ್ಷಕ ಶೈಲಿಯ ಸ್ಮಾರ್ಟ್‌ಫೋನ್‌ 8,990ರೂ.ಗಳ ಆಫರ್ ಬೆಲೆಗೆ!

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಹೊಂದಿದ್ದು, ಈ ಸೆನ್ಸರ್‌ ಎಲ್ಇಡಿ ಫ್ಲ್ಯಾಶ್, ಎಚ್‌ಡಿಆರ್ ಫೀಚರ್ಸ್ ಹಾಗೂ 1080p@30fps ನಲ್ಲಿ ವಿಡಿಯೋ ಸೆರೆಹಿಡಿಯುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ವೈ-ಫೈ 802.11 b/g/n, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್‌, ಎಫ್‌ಎಮ್‌ ರೇಡಿಯೋ ಮೈಕ್ರೋ ಯುಎಸ್‌ಬಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದಿದೆ.

ರೆಡ್ಮಿ 9 ಆಕ್ಟಿವ್‌ ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಆಫರ್ ವಿವರ: ಇನ್ನು ಈ ಫೋನ್‌ನ ಮುಖ್ಯ ವಿಚಾರಕ್ಕೆ ಬರುವುದಾದರೆ ಫ್ಲಿಪ್‌ಕಾರ್ಟ್‌ನಲ್ಲಿ 18% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ 8,990 ರೂ.ಗಳ ಬೆಲೆಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 10,999 ರೂ.ಗಳಾಗಿದೆ. ಇದರೊಂದಿಗೆ ನೀವು ಬ್ಯಾಂಕ್‌ ಕಾರ್ಡ್‌ ಹಾಗೂ ಇತರೆ ಆಯ್ಕೆಗಳ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ರೆಡ್ಮಿಯ ಈ ಆಕರ್ಷಕ ಶೈಲಿಯ ಸ್ಮಾರ್ಟ್‌ಫೋನ್‌ 8,990ರೂ.ಗಳ ಆಫರ್ ಬೆಲೆಗೆ!

ಬ್ಯಾಂಕ್‌ ಆಫರ್ ವಿಚಾರದ ಬಗ್ಗೆ ತಿಳಿಸುವುದಾದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ಡಿಸ್ಕೌಂಟ್ ಹಾಗೂ ಫ್ಲಿಪ್‌ಕಾರ್ಟ್‌ಗೆ ಪಾರ್ಟನರ್‌ ಆಫರ್‌ಗೆ ಸೈನ್ ಅಪ್ ಮಾಡಿ ಪೇ ಲೇಟರ್‌ ಆಯ್ಕೆ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Best Mobiles in India

English summary
Redmi 9 Activ smartphone is offered at 18% discount on the leading e-commerce site. This smartphone has got all kinds of attractive features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+