ಅಮೆಜಾನ್‌ನಲ್ಲಿ ಇಂದು ಮತ್ತೆ ಅಗ್ಗದ ರೆಡ್ಮಿ 9A ಸ್ಮಾರ್ಟ್‌ಫೋನಿನ ಸೇಲ್!
ಶಿಯೋಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ರೆಡ್ಮಿ 9A ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 4ರಂದು ಫಸ್ಟ್ ಸೇಲ್ ಕಂಡಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆ.9) ಮಧ್ಯಾಹ್ನ 12ರಿಂದ ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮತ್ತೆ ಸೇಲ್ ಶುರು ಮಾಡಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ 2GB + 32GB ವೇರಿಯಂಟ್ ಬೆಲೆಯು 6,799ರೂ. ಆಗಿದೆ.

ಅಮೆಜಾನ್ ತಾಣದಲ್ಲಿ ರೆಡ್ಮಿ 9A ಸ್ಮಾರ್ಟ್‌ಫೋನ್ ಸೇಲ್ ಇಂದು ನಡೆಯಲಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್ ಹಾಗೂ ಫಾಸ್ಟ್ ಚಾರ್ಜಿಂಗ್ ಬೆಂಬಲಿತ 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಎರಡು ವೇರಿಯಂಟ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 2GB + 32GB ಮತ್ತು 3GB + 32GB ಆಗಿವೆ. ಮೀಡ್‌ನೈಟ್ ಬ್ಲ್ಯಾಕ್, ನೇಚರ್ ಗ್ರೀನ್ ಹಾಗೂ ಸೀ ಬ್ಲೂ ಬಣ್ಣಗಳ ಆಯ್ಕೆ ಇದೆ. ಹಾಗಾದರೇ ರೆಡ್ಮಿ 9A ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರೆಡ್ಮಿ 9A ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9 ಅನುಪಾತವನ್ನು ಪಡೆದಿದೆ.

ಪ್ರೊಸೆಸರ್ ಯಾವುದು
ರೆಡ್ಮಿ 9A ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 2GB RAM + 32GB ಮತ್ತು 3GB RAM + 32GB ವೇರಿಯಂಟ್‌ನ ಎರಡು ಆಂತರಿಕ ಸ್ಟೋರೇಜ್ ಆಯ್ಕೆಯಗಳನ್ನು ಹೊಂದಿದೆ.

ಕ್ಯಾಮೆರಾ ರಚನೆ
ರೆಡ್ಮಿ 9A ಸ್ಮಾರ್ಟ್‌ಫೋನ್ ಸಿಂಗಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಹಿಂಬದಿಯಲ್ಲಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಬಲ
ರೆಡ್ಮಿ 9A ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLET, ವೈ-ಫೈ 802.11 ಎ / ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ
ರೆಡ್ಮಿ 9A ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 2GB RAM + 32GB ವೇರಿಯಂಟ್ ದರವು 6,799ರೂ.ಗಳು ಆಗಿದೆ. ಹಾಗೆಯೇ 3GB RAM + 32GB ವೇರಿಯಂಟ್ ಬೆಲೆಯು 7,499ರೂ.ಗಳಾಗಿದೆ. ಇನ್ನು ಈ ಫೋನ್ ಸೇಲ್ ಇಂದು ಅಮೆಜಾನ್ ತಾಣದಲ್ಲಿ ಆರಂಭವಾಗಲಿದೆ. ನೈಟ್ ಬ್ಲ್ಯಾಕ್, ಸೀ ಬ್ಲೂ, ನೇಚರ್ ಗ್ರೀನ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.


Click it and Unblock the Notifications








