ಅಗ್ಗದ ಬೆಲೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆ?..ಈ ಆಫರ್ ಸೂಪರ್!
ಪ್ರಮುಖ ಆನ್‌ಲೈನ್ ಮಾರುಕಟ್ಟೆಯಾದ ಅಮೆಜಾನ್ ಇ ಕಾಮರ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸುತ್ತಾ ಬಂದಿದೆ. ಆ ಪೈಕಿ ಎಂಟ್ರಿ ಲೆವೆಲ್ ಮಾದರಿಯ ಮೊಬೈಲ್‌ಗಳಿಗೂ ಅತ್ಯುತ್ತಮ ರಿಯಾಯಿತಿ ಲಭ್ಯ. ಆ ಪೈಕಿ ರೆಡ್ಮಿ A1+ ಮೊಬೈಲ್ ಅಗ್ಗದ ಬೆಲೆಯಲ್ಲಿ ಅಧಿಕ ಗಮನ ಸೆಳೆಯುವಂತಿದೆ.
ಹೌದು, ಅಮೆಜಾನ್ ವೆಬ್‌ಸೈಟ್ ನಲ್ಲಿ ರೆಡ್ಮಿ A1+ (Redmi A1+) ಮೊಬೈಲ್ ಶೇ. 28% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 2GB RAM + 32GB ಸ್ಟೋರೇಜ್ ವೇರಿಯಂಟ್ 6,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಫೋನಿಗೆ ಲಭ್ಯ ಇತರೆ ಎಲ್ಲ ಕೊಡುಗೆಗಳನ್ನು ಸೇರಿದರೆ ಈ ಫೋನ್ ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುವ ಅವಕಾಶ ಸಿಗಲಿದೆ.

ಅಂದಹಾಗೆ ರೆಡ್ಮಿ A1+ ಫೋನ್ ಮೀಡಿಯಾ ಟೆಕ್ ಹಿಲಿಯೋ A22 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ. ಅಲ್ಲದೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಫೀಚರ್ಸ್ ಸೌಲಭ್ಯ ಪಡೆದಿದೆ. ಹಾಗಾದರೆ ರೆಡ್ಮಿ A1+ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹೇಗಿದೆ
ರೆಡ್ಮಿ A1+ ಮೊಬೈಲ್ 1600 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ ಫುಲ್ ಹೆಚ್‌ಡಿ + ಸ್ಕ್ರ್ಯಾಚ್ ರೆಸಿಸ್ಟೆನ್ಸ್ ಮಾದಿರಯ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಹೊಂದಿದ್ದು, 400 nits ಬ್ರೈಟ್ನೆಸ್ ಸಾಮರ್ಥ್ಯ ಒಳಗೊಂಡಿದೆ. ಡಿಸ್ಪ್ಲೇ ಪ್ಯಾನೆಲ್ ಮುಂಭಾಗದ ಸೆಲ್ಫಿ ಶೂಟರ್ ಅನ್ನು ವಾಟರ್‌ಡ್ರಾಪ್ ನಾಚ್‌ನೊಳಗೆ ಇದೆ.

ಯಾವ ಪ್ರೊಸೆಸರ್ ಪವರ್ ಇದೆ
ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನ್ ಮೀಡಿಯಾ ಟೆಕ್ ಹಿಲಿಯೋ A22 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಗೋ ಎಡಿಷನ್ ಓಎಸ್ ಸಪೋರ್ಟ್ ಕೂಡಾ ಲಭ್ಯ. ಹಾಗೆಯೇ ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 2GB RAM + 32 GB ಮತ್ತು 3GB + 32GB ಆಗಿವೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಲು ಅವಕಾಶ ಸಹ ಇದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ
ರೆಡ್ಮಿ A1+ ಈ ಎಂಟ್ರಿ ಲೆವೆಲ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್ ಇದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ ಈ ಫೋನ್ 8 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳು ಸಹ ಇವೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದ ಮಾಹಿತಿ
ರೆಡ್ಮಿ ಕಂಪನಿಯ ಈ ಮೊಬೈಲ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಅನುಗುಣವಾಗಿ 10W ಚಾರ್ಜಿಂಗ್ ಸಪೋರ್ಟ್ ಸಹ ಹೊಂದಿದೆ. ಇದು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಒಳಗೊಂಡಿದೆ. ಹ್ಯಾಂಡ್‌ಸೆಟ್ ಮೀಸಲಾದ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಸಹ ಒಳಗೊಂಡಿದೆ.
ಕಲರ್ ಆಯ್ಕೆ ಮತ್ತು ಮೆಮೊರಿ ಆಯ್ಕೆ
ಈ ಫೋನ್ ಸ್ಮಾರ್ಟ್‌ಫೋನ್ 2GB RAM + 32 GB ವೇರಿಯಂಟ್ ಹಾಗೂ 3GB + 32GB ವೇರಿಯಂಟ್ ಪಡೆದುಕೊಂಡಿದೆ. ಅಲ್ಲದೇ ಇದು ಬ್ಲ್ಯಾಕ್, ಗ್ರೀನ್ ಮತ್ತು ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.


Click it and Unblock the Notifications








