ರೆಡ್ಮಿ A1 ಪ್ಲಸ್ ಸ್ಮಾರ್ಟ್‌ಫೋನ್‌ಗೆ ಬೃಹತ್ ಡಿಸ್ಕೌಂಟ್; 6,599ರೂ.ಗಳಿಗೆ ಲಭ್ಯ!
ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ನಡುವೆ ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗುತ್ತಿದೆ. ಅದರಲ್ಲೂ ಇಂದು ರೆಡ್ಮಿ 12 ಸ್ಮಾರ್ಟ್‌ಫೋನ್ ಅನ್ನೂ ಸಹ ಅನಾವರಣ ಮಾಡಿದ್ದು, ಇದು ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ರೆಡ್ಮಿ A1 ಪ್ಲಸ್ ಫೋನ್‌ಗೆ ದೊಡ್ಡ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಹೌದು, ರೆಡ್ಮಿ A1 ಪ್ಲಸ್ (Redmi A1 Plus) ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ 40% ಡಿಸ್ಕೌಂಟ್ ನೀಡಲಾಗಿದ್ದು, ಈ ಮೂಲಕ ನೀವು ಕೇವಲ 6,599ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಮೀಡಿಯಾಟೆಕ್ ಹಿಲಿಯೋ A22 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ರೆಡ್ಮಿ A1 ಪ್ಲಸ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಇಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಅನ್ನು ತಿಳಿದುಕೊಂಡರೆ ಉತ್ತಮವಾಗಲಿದ್ದು, ಅದರಂತೆ ಈ ಫೋನ್ 6.52 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ ಹಾಗೂ 269ppi ಪಿಕ್ಸೆಲ್ ಸಾಂದ್ರತೆ ಹೊಂದಿದ್ದು ಉತ್ತಮ ಅನುಭವ ನೀಡಲಿದೆ.
ರೆಡ್ಮಿ A1 ಪ್ಲಸ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ ಹಿಲಿಯೋ A22 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, ಪವರ್ ವಿಆರ್ GE8300 ಜಿಪಿಯು ಬಲ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು ಗೇಮ್ ಆಡುವಾಗ ಉತ್ತಮ ದೃಶ್ಯಗಳ ಅನುಭವ ಪಡೆದುಕೊಳ್ಳಬಹುದು. ಉಳಿದಂತೆ 3GB RAM ಆಯ್ಕೆ ಈ ಫೋನ್‌ನಲ್ಲಿದ್ದು, 32 GB ಇಂಟರ್ ಸ್ಟೋರೇಜ್ ಆಯ್ಕೆ ಇದೆ ಜೊತೆಗೆ 512 GB ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ರೆಡ್ಮಿ A1 ಪ್ಲಸ್ ಕ್ಯಾಮೆರಾ ರಚನೆ: ಡ್ಯುಯರ್ ರಿಯರ್ ಕ್ಯಾಮೆರಾ ರಚನೆ ಹೊಂದಿರುವ ಈ ಫೋನ್ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ f/2.0 ಅಪರ್ಚರ್ ಹೊಂದಿದ್ದು, ಎಲ್ಇಡಿ ಫ್ಲ್ಯಾಶ್ ಆಯ್ಕೆಯೊಂದಿಗೆ 5 ಮೆಗಾಪಿಕ್ಸೆಲ್ f/2.2 ಕ್ಯಾಮೆರಾ ಹೊಂದಿದೆ. ಜೊತೆಗೆ ಸೆಲ್ಫಿ ಉದ್ದೇಶಕ್ಕಾಗಿ ಸ್ಮಾರ್ಟ್‌ಫೋನ್‌ನ 5 ಮೆಗಾಪಿಕ್ಸೆಲ್ f/2.2 ಕ್ಯಾಮೆರಾ ಪಡೆದಿದೆ.
ರೆಡ್ಮಿ A1 ಪ್ಲಸ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ 4G VOLTE, 4G, 3G, 2G ಬೆಂಬಲಿತ ನೆಟ್‌ವರ್ಕ್ ಸೌಲಭ್ಯ, ವೈ-ಫೈ 802.11/b/g/n ಜಿಪಿಆರ್‌ಎಸ್, ಮೈಕ್ರೋ ಯುಎಸ್‌ಬಿ ಪೋರ್ಟ್, ಬ್ಲೂಟೂತ್ ಆವೃತ್ತಿ v5.0 ಹಾಗೂ ಮಿನಿ HDMI ಪೋರ್ಟ್ ಸೇರಿದಂತೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ರೆಡ್ಮಿ A1 ಪ್ಲಸ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ 10,999ರೂ.ಗಳ ಬೆಲೆ ಹೊಂದಿದ್ದು, 6,599ರೂ.ಗಳಿಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್ ಈ ಫೋನ್‌ಗೆ ಬರೋಬ್ಬರಿ 40% ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಇದಿಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್ ಹಾಗೂ ವಿನಿಮಯ ಆಫರ್ ಮೂಲಕ ಇನ್ನೂ ಅಗ್ಗದ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ರೆಡ್ಮಿ 12 ಸ್ಮಾರ್ಟ್‌ಫೋನ್ : ಈ ರೆಡ್ಮಿ 12 ಸ್ಮಾರ್ಟ್‌ಫೋನ್ ಅನ್ನು ಈಗಷ್ಟೇ ಲಾಂಚ್ ಮಾಡಲಾಗಿದ್ದು, ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nm ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ಗಾಗಿ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 256GB ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದೆ. ಹಾಗೆಯೇ 6.79 ಇಂಚಿನ FHD+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದೆ. ಈ ಫೋನ್ 12 ಸಾವಿರ ರೂ.ಗಳ ಆಸುಪಾಸಿನಲ್ಲಿ ಲಭ್ಯ.


Click it and Unblock the Notifications








