ರೆಡ್ಮಿಯ ಈ ಜನಪ್ರಿಯ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು OMG ಅಂತೀರಾ!
ಆನ್‌ಲೈನ್ ಶಾಪಿಂಗ್ ಪ್ರಿಯರ ಒನ್ ಸ್ಟಾಪ್ ಎನಿಸಿರುವ ಅಮೆಜಾನ್ ಪ್ಲಾಟ್‌ಫಾರ್ಮ್ ಇದೀಗ ಹಬ್ಬದ ಸೇಲ್ ಪ್ರಾರಂಭಿಸಿ, ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟ ಮೇಳದಲ್ಲಿ ಸ್ಮಾರ್ಟ್‌ಫೋನ್ ಡಿವೈಸ್‌ಗಳು ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಹೈಲೈಟ್ಸ್ ಎನಿಸಿದೆ. ಆ ಪೈಕಿ ಅಗ್ಗದ ದರದ ರೆಡ್ಮಿ A2 ಎಂಟ್ರಿ ಲೆವೆಲ್ ಫೋನ್ ಕೂಡಾ ಸಖತ್ ಆಫರ್ ಪಡೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಹಬ್ಬದ ಸೇಲ್ ನಲ್ಲಿ ರೆಡ್ಮಿ A2 ಫೋನ್ ಶೇ. 40% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಇದರ 4GB RAM + 64GB ಸ್ಟೋರೇಜ್ ವೇರಿಯಂಟ್ 6,599 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಇದರೊಂದಿಗೆ ಲಭ್ಯ ಇರುವ ಹಬ್ಬದ ಎಲ್ಲ ಕೊಡುಗೆಗಳು ಪಡೆದುಕೊಂಡರೆ ಈ ಫೋನ್ ಅನ್ನು 5,299ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಸಬಹುದು.

ಅಂದಹಾಗೆ ರೆಡ್ಮಿ A2 ಫೋನ್ ಮೀಡಿಯಾ ಟೆಕ್ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಪವರ್ ಹೊಂದಿದ್ದು, ಹಿಂಭಾಗದಲ್ಲಿ ಇದು ಸಿಂಗಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗಾದರೆ ರೆಡ್ಮಿ A2 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹಾಗೂ ವಿನ್ಯಾಸದ ಮಾಹಿತಿ ಹೀಗಿವೆ
ರೆಡ್ಮಿ A2 ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 400 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ.

ಪ್ರೊಸೆಸರ್ ಸಾಮರ್ಥ್ಯ ಹಾಗೂ ಕ್ಯಾಮೆರಾ ಸೆನ್ಸಾರ್ ಹೀಗಿವೆ
ರೆಡ್ಮಿ A2 ಫೋನ್ ಮೀಡಿಯಾ ಟೆಕ್ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಜೊತೆಗೆ 4GB RAM ಮತ್ತು 64GB ಆಂತರೀಕ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಅವಕಾಶವನ್ನು ಕೂಡ ಪಡೆದಿದೆ. ಇನ್ನು ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಸ್ಟೋರೇಜ್ ಬ್ಯಾಕ್‌ಅಪ್ ಮಾಹಿತಿ
ರೆಡ್ಮಿ A2 ಮೊಬೈಲ್ 10W ಚಾರ್ಜಿಂಗ್ ಸಪೋರ್ಟ್ ಹೊಂದಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈ-ಫೈ, ಬ್ಲೂಟೂತ್, ಎಫ್‌ಎಂ ರೇಡಿಯೋ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಕೂಡಾ ಪಡೆದಿದೆ. ಇದರೊಂದಿಗೆ ರೆಡ್ಮಿ A2 ಪ್ಲಸ್ ಸ್ಮಾರ್ಟ್‌ಫೋನ್ ಹೆಚ್ಚುವರಿಯಾಗಿ ರಿಯರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದುಕೊಂಡಿದೆ.
ಕಲರ್ ಆಯ್ಕೆ ಹಾಗೂ ವೇರಿಯಂಟ್ ಮಾಹಿತಿ
ರೆಡ್ಮಿ A2 ಮೊಬೈಲ್ ಮೂರು ವೇರಿಯಂಟ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 2GB + 32GB, 2GB + 64GB 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಆಗಿವೆ. ಇನ್ನು ಈ ಫೋನ್ ಬ್ಲ್ಯಾಕ್, ಬ್ಲೂ, ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.


Click it and Unblock the Notifications








