Home
ಸುದ್ದಿಜಾಲ

ಪ್ರೇಮಿಗಳ ದಿನದಂದು ಎಂಟ್ರಿ ನೀಡಲಿದೆ ರೆಡ್ಮಿ A3 ಸ್ಮಾರ್ಟ್‌ಫೋನ್‌: ಏನೆಲ್ಲಾ ನಿರೀಕ್ಷೆ?

ಶಿಯೋಮಿ ಕಂಪೆನಿ ರೆಡ್ಮಿ ಬ್ರ್ಯಾಂಡ್‌ ಅಡಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಅನ್ನು Redmi A3 ಎಂದು ಹೆಸರಿಸಲಾಗಿದ್ದು, ಭಾರತದಲ್ಲಿ ಫೆಬ್ರವರಿ 14 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹೊಸ ಪ್ರೀಮಿಯಂ ಹ್ಯಾಲೋ ವಿನ್ಯಾಸದೊಂದಿಗೆ ಬರಲಿದೆ.

ಹೌದು, Redmi A3 ಸ್ಮಾರ್ಟ್‌ಪೋನ್‌ ಫೆಬ್ರವರಿ 14 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಇದೀಗ ಬಿಡುಗಡೆಗೆ ಮುಂಚಿತವಾಗಿ, Redmi A3 ಮೈಕ್ರೋ-ಸೈಟ್ mi.com ನಲ್ಲಿ ಲೈವ್ ಆಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ನ ವಿನ್ಯಾಸ ಬಹಿರಂಗವಾಗಿದ್ದು, ಫೋನ್‌ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಸಜ್ಜುಗೊಂಡಿದೆ ಎಂದು ತಿಳಿಯಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೇಮಿಗಳ ದಿನದಂದು ಎಂಟ್ರಿ ನೀಡಲಿದೆ ರೆಡ್ಮಿ A3 ಫೋನ್‌: ಏನೆಲ್ಲಾ ನಿರೀಕ್ಷೆ?

ರೆಡ್ಮಿ A3 ಸ್ಮಾರ್ಟ್‌ಫೋನ್‌ ಡಿಸೈನ್‌ ಹೇಗಿರಲಿದೆ?
ರೆಡ್ಮಿ A3 ಸ್ಮಾರ್ಟ್‌ಫೋನ್‌ ಹೊಸ Halo ವಿನ್ಯಾಸದೊಂದಿಗೆ ಬರಲಿದೆ. ಇದು ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. ಇನ್ನು Redmi A3 ಟೀಸರ್‌ನಲ್ಲಿ ಬಹಿರಂಗವಾಗಿರುವಂತೆ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್ ನೊಂದಿಗೆ ಬರುವುದು ಕನ್ಫರ್ಮ್‌ ಅಗಿದೆ.

ರೆಡ್ಮಿ A3 ಫೀಚರ್ಸ್‌ ನಿರೀಕ್ಷೆ ಏನು?
ರೆಡ್ಮಿ A3 ಸ್ಮಾರ್ಟ್‌ಫೋನ್‌ 6.71 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತದೊಂದಿಗೆ ಬರಲಿದ್ದು, 263 ppi ಸಾಂದ್ರತೆಯಲ್ಲಿದೆ. ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಬೆಂಬಲದಲ್ಲಿರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಹೊಂದಿದೆ.

ಪ್ರೇಮಿಗಳ ದಿನದಂದು ಎಂಟ್ರಿ ನೀಡಲಿದೆ ರೆಡ್ಮಿ A3 ಫೋನ್‌: ಏನೆಲ್ಲಾ ನಿರೀಕ್ಷೆ?
ರೆಡ್ಮಿ A3 ಪ್ರೊಸೆಸರ್‌ ಯಾವುದು?
ರೆಡ್ಮಿ A3 ಸ್ಮಾರ್ಟ್‌ಪೋನ್‌ ಮೀಡಿಯಾಟೆಕ್ ಹೆಲಿಯೊ G36 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ)ನಲ್ಲಿ ರನ್‌ ಆಗಲಿದೆ. ಹಾಗೆಯೇ 6GB RAM ಅನ್ನು ಹೊಂದಿದ್ದು, 6GB ವರ್ಚುವಲ್ RAM ಗೆ ಬೆಂಬಲಿಸುತ್ತದೆ. ಇದು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರುವ ಸಾಧ್ಯತೆಯನ್ನು ಸಹ ಇಡಲಾಗಿದೆ.

ರೆಡ್ಮಿ A3 ಕ್ಯಾಮೆರಾ ಯಾವುದು?
ರೆಡ್ಮಿ A3 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿರಲಿದೆ. ಡ್ಯುಯಲ್‌ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಅಳವಡಿಸಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರೆಡ್ಮಿ A3 ಬ್ಯಾಟರಿ ಮತ್ತು ಇತರೆ ಸೌಲಭ್ಯ
ರೆಡ್ಮಿ A3 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್-C ಚಾರ್ಜಿಂಗ್ ಪೋರ್ಟ್ ನೊಂದಿಗೆ ಬರಲಿದೆ. ಇನ್ನು ಮೈಕ್ರೋ USB ಪೋರ್ಟ್ ಅನ್ನು ಒಳಗೊಂಡಿರುವ Redmi A2 ಗೆ ಹೋಲಿಸಿದರೆ USB ಟೈಪ್-C ಪೋರ್ಟ್‌ನ ಸೇರ್ಪಡೆಯು ಅಪ್‌ಗ್ರೇಡ್ ಆಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಹಾಗೂ ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ.

ಪ್ರೇಮಿಗಳ ದಿನದಂದು ಎಂಟ್ರಿ ನೀಡಲಿದೆ ರೆಡ್ಮಿ A3 ಫೋನ್‌: ಏನೆಲ್ಲಾ ನಿರೀಕ್ಷೆ?

ರೆಡ್ಮಿ A3 ಬೆಲೆ ಮತ್ತು ಲಭ್ಯತೆ
ರೆಡ್ಮಿ A3 ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಯಲ್ಲಿ 7,000ರೂ ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ನೀಲಿ, ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಬಹುದು ಎಂಬ ನಿರೀಕ್ಷೆಯನ್ನು ಇಡಲಾಗಿದೆ. ಇದು ಫೆಬ್ರವರಿ 14 ರಂದು ಭಾರತದಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದ್ದು, ಮಾರಾಟದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Redmi A3 Smartphone India Launch Date Confirmed for February 14
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+