ನಾಳೆಯಿಂದ ಅಗ್ಗದ ಬೆಲೆಯ ಈ ರೆಡ್ಮಿ ಫೋನ್ ಸೇಲ್ ಪ್ರಾರಂಭ!
ಭಿನ್ನ ಶ್ರೇಣೀಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವ ರೆಡ್ಮಿ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ಲಾಂಚ್ ಮಾಡಿರುವ ರೆಡ್ಮಿ A3 ಮೊಬೈಲ್ ಅಗ್ಗದ ಬೆಲೆಯ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ ನಾಳೆ (ಫೆಬ್ರವರಿ 23 ರಂದು) ಫ್ಲಿಪ್‌ಕಾರ್ಟ್ ತಾಣದ ಮೂಲಕ ಮಧ್ಯಾಹ್ನ 12 ರಿಂದ ಮೊದಲ ಮಾರಾಟ ಪ್ರಾರಂಭ ಮಾಡಲಿದೆ.
ಹೌದು, ರೆಡ್ಮಿ A3 ಮೊಬೈಲ್ ಫ್ಲಿಪ್‌ಕಾರ್ಟ್ ತಾಣದ ಮೂಲಕ ನಾಳೆ ಫಸ್ಟ್ ಸೇಲ್ ಶುರುವಾಗಲಿದೆ. ಈ ಫೋನ್ ಭಿನ್ನ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಲಭ್ಯವಾಗಲಿದೆ. ಅಂದಹಾಗೆ ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಒಳಗೊಂಡಿದ್ದು, ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ.

ರೆಡ್ಮಿ A3 ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 7,299ರೂ. ಆಗಿದ್ದು, ಗ್ರಾಹಕರು ಈ ಫೋನ್ ಲೇಕ್ ಬ್ಲೂ, ಮಿಡ್ನೈಟ್ ಬ್ಲ್ಯಾಕ್ ಅಥವಾ ಆಲಿವ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದರೇ ರೆಡ್ಮಿ A3 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ A3 ಫೀಚರ್ಸ್ ಮಾಹಿತಿ
ರೆಡ್ಮಿ A3 ಮೊಬೈಲ್ 6.71 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ IPS LCD ಸ್ಕ್ರೀಸ್ಮಾರ್ಟ್‌ಫೋನ್‌ನ್ ಆಗಿದ್ದು, 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಪಡೆದುಕೊಂಡಿದೆ.

ರೆಡ್ಮಿ A3 ಸ್ಮಾರ್ಟ್‌ಫೋನ್ 2.2 GHz ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಸಪೋರ್ಟ್ ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 3GB RAM + 64GB, 4GB RAM + 128GB ಹಾಗೂ 6GB RAM + 128GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯ. ಇದಲ್ಲದೆ ಮೈಕ್ರೊ ಎಸ್‌ಡಿ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ರೆಡ್ಮಿ ಸಂಸ್ಥೆಯ ಈ ಮೊಬೈಲ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದ್ದು, 0.08MP ಸೆಕೆಂಡರಿ ಕ್ಯಾಮೆರಾ ಸೆನ್ಸಾರ್ ಸಹ ಪಡೆದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದ್ದು, ಇದರೊಂದಿಗೆ ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ.
ರೆಡ್ಮಿ A3 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ ಲಭ್ಯ ಇದ್ದು, ಇದು 10W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 b/g/n, ಬ್ಲೂಟೂತ್ 5.0, GPS + GLONASS, USB ಟೈಪ್- C ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ 3.5mm ಆಡಿಯೋ ಜಾಕ್, FM ರೇಡಿಯೋ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.
ರೆಡ್ಮಿ A3 ಮೊಬೈಲ್ 3GB + 64GB, 4GB + 128GB ಮಾದರಿ ಹಾಗೂ 6GB + 128GB ವೇರಿಯಂಟ್ ಆಯ್ಕೆ ಹೊಂದಿದೆ. ಈ ಫೋನ್ ಲೇಕ್ ಬ್ಲೂ, ಮಿಡ್ನೈಟ್ ಬ್ಲ್ಯಾಕ್ ಅಥವಾ ಆಲಿವ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ. ಇನ್ನು ಸ್ಮಾರ್ಟ್‌ಫೋನ್ ಫೆಬ್ರವರಿ 23 ರಿಂದ Mi.com, ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.


Click it and Unblock the Notifications








