Redmi: ರೆಡ್ಮಿ A3x ಸ್ಮಾರ್ಟ್‌ಫೋನ್ ಲಾಂಚ್: ಯೂನಿಸೋಕ್ T603, 90Hz ಡಿಸ್‌ಪ್ಲೇ ಆಯ್ಕೆ.. ಬೆಲೆ ಎಷ್ಟು?
ರೆಡ್ಮಿ ಸ್ಮಾರ್ಟ್‌ಫೋನ್‌ಗಳು (Redmi smartphones) ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದುಕೊಂಡಿದ್ದು, ಈ ನಡುವೆ ರೆಡ್ಮಿ A3x ಸ್ಮಾರ್ಟ್‌ಫೋನ್ (Redmi A3x smartphone) ಅನ್ನು ಲಾಂಚ್ ಮಾಡಲಾಗಿದೆ. ಈ ಫೋನ್ 90Hz ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.
ಹೌದು, ರೆಡ್ಮಿ ಅಧಿಕೃತವಾಗಿ ರೆಡ್ಮಿ A3x ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನ್ ಯೂನಿಸೋಕ್ T603 ನೊಂದಿಗೆ ಕಾನಿಣಿಸಿಕೊಂಡಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ನ ಪ್ರಮುಖ ಫೀಚರ್ಸ್ ಏನು?, ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರೆಡ್ಮಿ A3x ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 6.71 ಇಂಚಿನ ಐಪಿಎಸ್ ಎಲ್‌ಸಿಡಿ ಹೆಚ್‌ಡಿ + ಡಿಸ್ಪ್ಲೇಯನ್ನು ಹೊಂದಿದ್ದು, ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಡಿಸಿ ಡಿಮ್ಮಿಂಗ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಅಲ್ಲದೆ ಡಿವೈಸ್‌ನ ಮುಂಭಾಗ ಮತ್ತು ಹಿಂಭಾಗ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲಾಗಿದೆ.
ರೆಡ್ಮಿ A3x ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಇನ್ನು ಈ ಫೋನ್ 3GB RAM ಮತ್ತು 64GB ಇಂಟರ್ ಸ್ಟೋರೇಜ್ ಬೆಂಬಲದೊಂದಿಗೆ ಯೂನಿಸೋಕ್ T603 ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ. ಜೊತೆಗೆ ಸ್ಟೋರೇಜ್ ವಿಭಾಗದಲ್ಲಿ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನೂ ಸಹ ಈ ಫೋನ್‌ನಲ್ಲಿ ನೀಡಲಾಗಿದೆ.
ರೆಡ್ಮಿ A3x ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 8 ಮೆಗಾಪಿಕ್ಸೆಲ್ ಹಾಗೂ ಎಐ ಕ್ಯಾಮೆರಾ ಲಭ್ಯ ಇದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಬಜೆಟ್ ವಿಭಾಗದಲ್ಲಿ ಈ ಕ್ಯಾಮೆರಾ ಆಯ್ಕೆ ಬೆಸ್ಟ್ ಎನ್ನಬಹುದಾಗಿದೆ. ಅಲ್ಲದೆ ವಿವಿಧ ಕ್ಯಾಮೆರಾ ಫೀಚರ್ಸ್ ಸಹ ಇವೆ.

ರೆಡ್ಮಿ A3x ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಉಳಿದಂತೆ ಈ ಫೋನ್ ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 3.5mm ಆಡಿಯೊ ಜ್ಯಾಕ್ ಅನ್ನು ಹೊಂದಿದ್ದು, ಬಳಕೆದಾರಿಗೆ ವಿವಿಧ ರೀತಿಯ ಅನುಕೂಲ ಮಾಡಿಕೊಡಲಿದೆ.
ರೆಡ್ಮಿ A3x ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಅಂದರೆ 3GB RAM + 64GB ಸ್ಟೋರೇಜ್ ವೇರಿಯಂಟ್‌ಗೆ ಸರಿ ಸುಮಾರು 18,999 ರೂ.ಗಳ ಬೆಲೆಯನ್ನು ನೀವು ಪಾವತಿ ಮಾಡಬೇಕಿದೆ. ಆದರೆ ಸದ್ಯಕ್ಕೆ ಇದು ಭಾರತದಲ್ಲಿ ಲಭ್ಯ ಇಲ್ಲವಾದರೂ ಶೀಘ್ರದಲ್ಲೇ ಭಾರತ ಮತ್ತು ಯುಎಇಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಶಿಯೋಮಿ ರೆಡ್ಮಿ 13 4G: ಈ ನಡುವೆ ರೆಡ್ಮಿ ಮುಂದಿನ ದಿನಗಳಲ್ಲಿ ಶಿಯೋಮಿ ರೆಡ್ಮಿ 13 4G ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಬಿಡುಗಡೆಯಾಗದ ಮೀಡಿಯಾಟೆಕ್ ಚಿಪ್‌ಸೆಟ್‌ನೊಂದಿಗೆ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಲಿದೆ ಎನ್ನಲಾಗಿದೆ. ಈ ನಡುವೆ ಹಿಂದಿನ ಸರಣಿ ರೆಡ್ಮಿ 12 4G ಫೋನ್‌ಗೆ ಒಂದು ವರ್ಷ ತುಂಬಲಿದ್ದು, ಈ ಕಾರಣಕ್ಕೆ ಆಫರ್ ಬೆಲೆಗೆ ಈ ಫೋನ್ ಲಭ್ಯ ಇರಲಿದೆ. ಅದಾಗ್ಯೂ ರೆಡ್ಮಿ 12 4G ಗಿಂತ ಉತ್ತಮ ಗುಣಮಟ್ಟದ ಇಮೇಜ್ ಗುಣಮಟ್ಟವನ್ನು ಒದಗಿಸುವ ರೆಡ್ಮಿ 13 4G ಅನ್ನು ನಾವು ಕಾಣಬಹುದು ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications








