ಸದ್ಯದಲ್ಲೇ ಅಬ್ಬರಿಸಲು ಬರ್ತಿದೆ ಈ ಅಗ್ಗದ 5G ಸ್ಮಾರ್ಟ್‌ಫೋನ್; ಫೀಚರ್ಸ್ ಏನು?
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಸಂಸ್ಥೆಯು ಭಿನ್ನ ಶ್ರೇಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯ ರೆಡ್ಮಿ A ಸರಣಿಯ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಸಂಸ್ಥೆಯು ಇದೀಗ ಇತ್ತೀಚಿಗಿನ ರೆಡ್ಮಿ A3 ಫೋನಿನ ಮುಂದುವರಿದ ಭಾಗವಾಗಿ ರೆಡ್ಮಿ A4 5G (Redmi A4 5G) ಫೋನ್ ಬಿಡುಗಡೆಗೆ ಮಾಡಲು ಸಿದ್ಧವಾಗಿದ್ದು, ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
ಹೌದು, ಶಿಯೋಮಿ ಸಂಸ್ಥೆಯು ಇದೇ ನವೆಂಬರ್ 20 ರಂದು ದೇಶಿಯ ಮಾರುಕಟ್ಟೆಯಲ್ಲಿ ರೆಡ್ಮಿ A4 5G (Redmi A4 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಬಗ್ಗೆ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮೈಕ್ರೋ ಸೈಟ್ ತೆರೆದಿದ್ದು, ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 4s (Snapdragon 4s) ಪ್ರೊಸೆಸರ್ ಸೌಲಭ್ಯ ಪಡೆದಿರುವುದಾಗಿ ಖಚಿತಪಡಿಸಿದೆ.

ಹಾಗೆಯೇ ರೆಡ್ಮಿಯ ಈ ನೂತನ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 68W ವೈರ್ಡ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿರಲಿದೆ. ಅಲ್ಲದೇ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದೆ. ಹಾಗಾದರೇ ಬರಲಿರುವ ರೆಡ್ಮಿ A4 5G (Redmi A4 5G) ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ A4 5G ನಿರೀಕ್ಷಿತ ಫೀಚರ್ಸ್ ಹೀಗಿವೆ
ರೆಡ್ಮಿ A4 5G ಮೊಬೈಲ್ 6.52 ಇಂಚಿನ HD+ ಡಿಸ್‌ಪ್ಲೇ ಜೊತೆಗೆ ಉತ್ತಮ ಪಿಕ್ಸಲ್ ರೆಸಲ್ಯೂಶನ್ ಪಡೆದಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಸೌಲಭ್ಯವನ್ನು ಸಪೋರ್ಟ್ ಮಾಡಲಿದೆ. ಇದು ಗೇಮಿಂಗ್ ಮತ್ತು ವೀಡಿಯೊ ಪ್ಲೇಬ್ಯಾಕ್ಗಾಗಿ ಸುಗಮ ದೃಶ್ಯಗಳನ್ನು ಒದಗಿಸುತ್ತದೆ.
ರೆಡ್ಮಿ A4 5G ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4s Gen 2 (Snapdragon 4s Gen 2) ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇರಲಿದೆ. ಇದರ ಜೊತೆಗೆ ಇದು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿರಲಿದೆ.
ರೆಡ್ಮಿ A4 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಸೆಟ್‌ಅಪ್ ಅನ್ನು ಪಡೆದಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇರಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿರಲಿದೆ. ಇದರ ಜೊತೆಗೆ ಮುಂಭಾಗದಲ್ಲಿ ಸೆಲ್ಫಿಗಾಗಿ ಹಾಗೂ ವಿಡಿಯೋ ಕರೆಗಾಗಿ 8 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಒದಗಿಸಲಾಗುತ್ತದೆ.
ರೆಡ್ಮಿ A4 5G ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನ್ ಬ್ಲೂಟೂತ್, ವೈ ಫೈ, NAVIC, 3.5mm ಆಡಿಯೋ ಜ್ಯಾಕ್ ಆಯ್ಕೆಗಳು ಇರಲಿವೆ.
ಅಂದಹಾಗೆ ಶಿಯೋಮಿಯ ರೆಡ್ಮಿ A3 ಮೊಬೈಲ್ 6.71 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇದು ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಬೆಂಬಲ ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.


Click it and Unblock the Notifications








