Home
ಸುದ್ದಿಜಾಲ

Redmi: ರೆಡ್ಮಿಯ ಎರಡು ಹೊಸ ಲ್ಯಾಪ್‌ಟಾಪ್‌ಗಳು ಲಾಂಚ್‌: 1TB ಸ್ಟೋರೇಜ್‌... ಬೆಲೆ ಎಷ್ಟು?

ಶಿಯೋಮಿ (Xiaomi) ಕೇವಲ ಸ್ಮಾರ್ಟ್‌ಫೋನ್‌ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಈ ಕಂಪೆನಿ ಸಾಕಷ್ಟು ಇತರೆ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಈ ಮೂಲಕ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿ ಮಾಡಿಕೊಂಡಿದೆ. ಈ ನಡುವೆ ರೆಡ್ಮಿಯ ಎರಡು ಲ್ಯಾಪ್‌ಟಾಪ್‌ಗಳನ್ನು (laptops) ಅನಾವರಣ ಮಾಡಲಾಗಿದೆ.

ಹೌದು, ಶಿಯೋಮಿ ಎರಡು ಹೊಸ ರೆಡ್ಮಿ ಲ್ಯಾಪ್‌ಟಾಪ್ (redmi laptop) ಮಾದರಿಗಳನ್ನು ಲಾಂಚ್‌ ಮಾಡಿದೆ. ಅವುಗಳೆಂದರೆ ಶಿಯೋಮಿ ರೆಡ್ಮಿ ಬುಕ್‌ 14 2024 ಮತ್ತು ಶಿಯೋಮಿ ರೆಡ್ಮಿ ಬುಕ್‌ 16 2024. ಈ ಎರಡೂ ಲ್ಯಾಪ್‌ಟಾಪ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿವೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ರೆಡ್ಮಿಯ ಎರಡು ಹೊಸ ಲ್ಯಾಪ್‌ಟಾಪ್‌ಗಳು ಲಾಂಚ್‌: 1TB ಸ್ಟೋರೇಜ್‌... ಬೆಲೆ ಎಷ್ಟು?

ಶಿಯೋಮಿ ರೆಡ್ಮಿ ಬುಕ್‌ 14 2024 ಫೀಚರ್ಸ್‌: ಈ ಲ್ಯಾಪ್‌ಟಾಪ್ (Xiaomi Redmi Book 14 2024) 14 ಇಂಚಿನ 2.8K ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದ್ದು, 2880×1800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 120 Hz ರಿಫ್ರೆಶ್ ರೇಟ್‌ ಹಾಗೂ sRGB ಬಣ್ಣದ ಹರವು, 242 ppi ಪಿಕ್ಸೆಲ್ ಸಾಂದ್ರತೆ ಸೇರಿದಂತೆ ವಿವಿಧ ಡಿಸ್‌ಪ್ಲೇ ಫೀಚರ್ಸ್‌ ಆಯ್ಕೆಯನ್ನು ಈ ಡಿವೈಸ್‌ ಹೊಂದಿದೆ.

ಇದರೊಂದಿಗೆ 13th ಜನ್ ಇಂಟೆಲ್‌ i5-13500H ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹಾಗೆಯೇ ಈ ಡಿವೈಸ್ ಡ್ಯುಯಲ್ ಫ್ಯಾನ್ ಬೆಂಬಲವನ್ನು ಹೊಂದಿದ್ದು, ಗೇಮ್ ಆಡುವಾಗ ಅಥವಾ ಇನ್ನಿತರೆ ದೊಡ್ಡ ಮಟ್ಟದ ಕೆಲಸ ಮಾಡುವಾಗ ಲ್ಯಾಪ್ ಟಾಪ್ ಬಿಸಿಯಾಗುವುದನ್ನು ತಡೆಯುತ್ತದೆ. ಪರಿಣಾಮ ಯಾವುದೇ ಸಮಸ್ಯೆ ನೀಡದೆ ಸಲೀಸಾಗಿ ನಿಮ್ಮ ಅನುಕೂಲತೆಗೆ ತಕ್ಕಂತೆ ಸ್ಪಂಧಿಸುವ ಸಾಮರ್ಥ್ಯ ಪಡೆದಿದೆ.

ರೆಡ್ಮಿಯ ಎರಡು ಹೊಸ ಲ್ಯಾಪ್‌ಟಾಪ್‌ಗಳು ಲಾಂಚ್‌: 1TB ಸ್ಟೋರೇಜ್‌... ಬೆಲೆ ಎಷ್ಟು?

ಉಳಿದಂತೆ ಈ ಲ್ಯಾಪ್‌ಟಾಪ್‌ 16GB LPDDR5-6400 RAM ಆಯ್ಕೆ ಹಾಗೂ 1TB SSD ಸ್ಟೋರೇಜ್‌ ಬೆಂಬಲ ಪಡೆದಿದ್ದು, ಒಟ್ಟಾರೆಯಾಗಿ 1.37 ಕೆಜಿ ತೂಕ ಹೊಂದಿದೆ. ಇದರೊಂದಿಗೆ 56W ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಥಂಡರ್ಬೋಲ್ಟ್ 4, ಯುಎಸ್‌ಬಿ ಟೈಪ್‌ ಎ ಪೋರ್ಟ್‌ಗಳು, ಹೆಚ್‌ಡಿಎಮ್‌ಐ ಪೋರ್ಟ್, 3.5mm ಆಡಿಯೊ ಜ್ಯಾಕ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಶಿಯೋಮಿ ರೆಡ್ಮಿ ಬುಕ್‌ 16 2024 ಫೀಚರ್ಸ್‌: ಇನ್ನು ಮತ್ತೊಂದು ಲ್ಯಾಪ್‌ಟಾಪ್‌ (Xiaomi Redmi Book 16 2024) ಕಡೆ ಗಮನಹರಿಸುವುದಾದರೆ ಇದು 16 ಇಂಚಿನ 2.5K ಡಿಸ್‌ಪ್ಲೇಯೊಂದಿಗೆ ಬಂದಿದೆ. ಹಾಗೆಯೇ 120 Hz ರಿಫ್ರೆಶ್ ರೇಟ್‌ ಹಾಗೂ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ 100 ಪ್ರತಿಶತ sRGB ಬಣ್ಣದ ಕೋಮಾಟ್ ಸೇರಿದಂತೆ ವಿವಿಧ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಈ ಡಿವೈಸ್‌ನಲ್ಲಿ ಕಾಣಬಹುದಾಗಿದೆ.

ರೆಡ್ಮಿಯ ಎರಡು ಹೊಸ ಲ್ಯಾಪ್‌ಟಾಪ್‌ಗಳು ಲಾಂಚ್‌: 1TB ಸ್ಟೋರೇಜ್‌... ಬೆಲೆ ಎಷ್ಟು?

ಉಳಿದಂತೆ ಈ ಲ್ಯಾಪ್‌ಟಾಪ್ ಇಂಟೆಲ್ i5-13500H ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದೂ ಸಹ ಡ್ಯುಯಲ್ ಫ್ಯಾನ್‌ ಆಯ್ಕೆಯೊಂದಿಗೆ ಬಂದಿದೆ. ಜೊತೆಗೆ 16GB RAM ಹಾಗೂ 1TB ಸ್ಟೋರೇಜ್‌ ಆಯ್ಕೆ ಇದ್ದು, 72Wh ಸಾಮರ್ಥ್ಯದ ಬ್ಯಾಟರಿ, ಥಂಡರ್ಬೋಲ್ಟ್ 4, ಯುಎಸ್‌ಬಿ ಟೈಪ್‌ ಎ ಪೋರ್ಟ್‌ಗಳು, ಹೆಚ್‌ಡಿಎಮ್‌ಐ ಪೋರ್ಟ್, 3.5mm ಆಡಿಯೋ ಜ್ಯಾಕ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಬೆಂಬಲ ಪಡೆದಿದೆ.

ರೆಡ್ಮಿ ಲ್ಯಾಪ್‌ಟಾಪ್‌ ಬೆಲೆ ಹಾಗೂ ಲಭ್ಯತೆ: ಸದ್ಯಕ್ಕೆ ಈ ಎರಡೂ ಲ್ಯಾಪ್‌ಟಾಪ್‌ಗಳನ್ನು ಚೀನಾದಲ್ಲಿ ಮಾತ್ರ ಲಾಂಚ್‌ ಮಾಡಲಾಗಿದೆ. ಇನ್ನು ಶಿಯೋಮಿ ರೆಡ್ಮಿ ಬುಕ್ 14 2024 ಮಾದರಿಯ ಆರಂಭಿಕ ಬೆಲೆ 4199 ಯುವಾನ್ (ಭಾರತೀಯ ಬೆಲೆ 50,200 ರೂ.ಗಳು). ಅದೇ ರೀತಿ ಶಿಯೋಮಿ ರೆಡ್ಮಿ ಬುಕ್‌ 16 2024 ಮಾದರಿಯ ಆರಂಭಿಕ ಬೆಲೆ 4399 ಯುವಾನ್ (ಭಾರತೀಯ ಬೆಲೆ 52,500 ರೂ.ಗಳು).

ರೆಡ್ಮಿಯ ಎರಡು ಹೊಸ ಲ್ಯಾಪ್‌ಟಾಪ್‌ಗಳು ಲಾಂಚ್‌: 1TB ಸ್ಟೋರೇಜ್‌... ಬೆಲೆ ಎಷ್ಟು?

ಶಿಯೋಮಿ ರೆಡ್ಮಿ ಬುಕ್‌ 14 2024 ಮಾದರಿಯು ಸಿಲ್ವರ್ ಮತ್ತು ಸ್ಟಾರ್ರಿ ಗ್ರೇ ಬಣ್ಣಗಳಲ್ಲಿ ಕಾಣಿಸಿಕೊಂಡರೆ ಶಿಯೋಮಿ ರೆಡ್ಮಿ ಬುಕ್‌ 16 2024 ಮಾದರಿಯು ಸ್ಟಾರ್ರಿ ಗ್ರೇ ನಲ್ಲಿ ಲಭ್ಯವಿದೆ. ಇವುಗಳನ್ನು ಡಿಸೆಂಬರ್ 1 ರಂದು ಚೀನಾದಲ್ಲಿ ಮಾರಾಟಕ್ಕೆ ಮುಕ್ತ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಭಾರತಕ್ಕೆ ಶೀಘ್ರದಲ್ಲೇ ಈ ಡಿವೈಸ್‌ಗಳು ಬರಲಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Xiaomi has launched two new Redmi laptop models. They are Xiaomi Redmi Book 14 2024 and Xiaomi Redmi Book 16 2024. Both these laptops come with advanced features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+