Home
ಸುದ್ದಿಜಾಲ

ಈ ರೆಡ್ಮಿ ಇಯರ್‌ಬಡ್ಸ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌!

ರೆಡ್ಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಫೋನ್‌ಗಳ ಜೊತೆಗೆ ಇತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯ ಆಡಿಯೋ ಉತ್ಪನ್ನಗಳು ಸಹ ಹೆಚ್ಚಿನ ಗಮನ ಸೆಳೆದಿವೆ. ಆ ಪೈಕಿ ಇತ್ತೀಚಿನ ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಡಿವೈಸ್‌ಗಳು ಸಹ ಸದ್ದು ಮಾಡಿದ್ದು, ಇದೀಗ ಈ ಇಯರ್‌ಬಡ್ಸ್‌ ಸಖತ್‌ ಡಿಸ್ಕೌಂಟ್‌ ಪಡೆದಿವೆ.

ಹೌದು, ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಇಯರ್‌ಬಡ್ಸ್‌ ಡಿವೈಸ್‌ ಅಮೆಜಾನ್‌ ತಾಣದಲ್ಲಿ ಶೇ. 60% ರಷ್ಟು ರಿಯಾಯಿತಿ ಪಡೆದಿದೆ. ಬ್ಲ್ಯಾಕ್‌ ಕಲರ್‌ನ ಈ ಇಯರ್‌ಬಡ್ಸ್‌ ಡಿವೈಸ್‌ನ ಬೆಲೆಯು 2,999ರೂ. ಆಗಿದ್ದು, ಆಫರ್‌ನಲ್ಲಿ ಈಗ 1,199ರೂ. ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ. ಇತರೆ ಆಯ್ದ ಬ್ಯಾಂಕ್‌ ಆಫರ್‌ಗಳು ಕೂಡಾ ಲಭ್ಯ ಆಗಲಿವೆ.

ಈ ರೆಡ್ಮಿ ಇಯರ್‌ಬಡ್ಸ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌!

ರೆಡ್ಮಿ ಬಡ್ಸ್‌ 4 ಆಕ್ಟಿವ್‌ ಇಯರ್‌ಬಡ್ಸ್‌ ಡಿವೈಸ್‌ USB ಟೈಪ್-C ಚಾರ್ಜಿಂಗ್ ಪೋರ್ಟ್ ಸೌಲಭ್ಯ ಹೊಂದಿದ್ದು, ಜೊತೆಗೆ ಇದು ಬ್ಲೂಟೂತ್ 5.3 ಕನೆಕ್ಟಿವಿಟಿ ಸೌಲಭ್ಯ ಸಹ ಒಳಗೊಂಡಿದೆ. ಈ ಸಾಧನ 12mm ಡೈನಾಮಿಕ್ ಆಡಿಯೋ ವ್ಯವಸ್ಥೆ ಸಹ ಪಡೆದುಕೊಂಡಿದೆ. ಹಾಗಾದರೆ ರೆಡ್ಮಿ ಬಡ್ಸ್‌ 4 ಆಕ್ಟಿವ್‌ ಇಯರ್‌ಬಡ್ಸ್‌ ಸಾಧನದ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ಬಡ್ಸ್‌ 4 ಆಕ್ಟಿವ್‌ ಇಯರ್‌ಬಡ್ಸ್‌ ಫೀಚರ್ಸ್‌ ಹೀಗಿವೆ : ರೆಡ್ಮಿ ಬಡ್ಸ್‌ 4 ಆಕ್ಟಿವ್‌ TWS ಇಯರ್‌ಬಡ್ಸ್‌ ವರ್ಧಿತ ಬಾಸ್ ಮತ್ತು ಅಕೌಸ್ಟಿಕ್ಸ್ ಅನುಭವಕ್ಕಾಗಿ 12mm ಡೈನಾಮಿಕ್ ಆಡಿಯೋ ಡ್ರೈವರ್‌ ಪಡೆದುಕೊಂಡಿದೆ. ಇವು ಶಿಯೋಮಿಯ ಅಕೌಸ್ಟಿಕ್ ಲ್ಯಾಬ್ ಇನ್-ಹೌಸ್ ಟ್ಯೂನಿಂಗ್‌ ಮೂಲಕ ಸಪೋರ್ಟ್‌ ಮಾಡಲಾಗುತ್ತದೆ. ಹೀಗಾಗಿ ಬಳಕೆದಾರರು ಅತ್ಯುತ್ತಮವಾದ ಸ್ಟಿರಿಯೊ ಎಕ್ಸ್‌ಪಿರಿಯನ್ಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಹಾಗೆಯೇ ರೆಡ್ಮಿ ಬಡ್ಸ್‌ 4 ಆಕ್ಟಿವ್‌ ಇಯರ್‌ಬಡ್ಸ್‌ ಎಕೋ ನಾಯ್ಸ್‌ ಕ್ಯಾನ್ಸ್‌ಲೇಶನ್‌ ಸಿಸ್ಟಂ ಅನ್ನು ಪಡೆದುಕೊಂಡಿದೆ. ಈ ಸೌಲಭ್ಯದಿಂದ ಬಳಕೆದಾರರಿಗೆ ಮ್ಯೂಸಿಕ್‌ ಕೇಳುವಾಗ ಬೇರೆ ಯಾವುದೇ ವಾಯಿಸ್‌ನ ಅಡಚಣೆ ಕೇಳಿ ಬರುವುದಿಲ್ಲ. ಇದರ ಜತೆಗೆ ಕರೆ ಮಾಡಿದ ವೇಳೆಯಲ್ಲಿಯೂ ಅನಗತ್ಯ ಶಬ್ದ ಕೇಳದಂತೆ ಅನುಕೂಲ ಆಗಲಿದೆ. ಇದರಿಂದಾಗಿ ಕರೆ ಮಾಡಿದ ವೇಳೆ ಸ್ಪಷ್ಟವಾದ ಧ್ವನಿ ಕೇಳಲು ಬಳಕೆದಾರರಿಗೆ ಪೂರಕ ಎನಿಸಲಿದೆ.

ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಗೂಗಲ್‌ನ ಫಾಸ್ಟ್‌ಪೇರ್‌ ಆಯ್ಕೆ ಅನ್ನು ಪಡೆದಿದ್ದು, ಇದರಿಂದ ಬಳಕೆದಾರರು ಜಸ್ಟ್‌ ಒಂದೇ ಟ್ಯಾಪ್‌ ಮಾಡುವ ಮೂಲಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಮಾಡಬಹುದಾಗಿದೆ. ಈ ಮೂಲಕ ಬಳಕೆದಾರರು ಮೊಬೈಲ್‌ಗೆ ಬರುವ ಕರೆಗಳನ್ನು ಇಯರ್‌ಬಡ್ಸ್‌ ಮೂಲಕವೇ ಕಂಟ್ರೋಲ್‌ ಮಾಡಲು ಸಾಧ್ಯ.

ಹಾಗೆಯೇ ಬಳಕೆದಾರರು ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಕೂಡಾ ಪ್ಲೇ ಮಾಡಬಹುದಾಗಿದೆ. ಇದರ ಜೊತೆಗೆ ಮ್ಯೂಸಿಕ್‌ ಅನ್ನು ಬಳಕೆದಾರರಿಗೆ ಇಷ್ಟ ಬಂದಂತೆ ಚೇಂಜ್‌ ಮಾಡಲು ಸಹ ಸಾಧ್ಯ ಇದೆ. ಹಾಗೆಯೇ ಬಳಕೆದಾರರು ಇದರಲ್ಲಿರುವ ವಿಭಿನ್ನ ಟಚ್‌ ಗೆಸ್ಚರ್‌ಗಳನ್ನು ಬಳಸಿಕೊಂಡು ಲೋ-ಲೆಟೆನ್ಸಿ ಮೋಡ್‌ಗಳನ್ನು ಆಕ್ಟಿವ್‌ ಕೂಡಾ ಮಾಡಲು ಅವಕಾಶ ಇದೆ.

ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಬ್ಲೂಟೂತ್ 5.3 ಕನೆಕ್ಟಿವಿಟಿ ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗೆಯೇ ಈ ಡಿವೈಸ್‌ ಯುಎಸ್‌ಬಿ ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಪಡೆದಿದ್ದು, ಜಸ್ಟ್‌ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ಸುಮಾರು 110 ನಿಮಿಷಗಳ ಪ್ಲೇಬ್ಯಾಕ್ ಟೈಂ ಅನ್ನು ಪಡೆದುಕೊಳ್ಳಲಿದೆ. ಇನ್ನು ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಚಾರ್ಜಿಂಗ್‌ ಕೇಸ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ಒದಗಿಸಲಿದೆ.

ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಬೆಲೆ ಹಾಗೂ ಲಭ್ಯತೆ : ಭಾರತದಲ್ಲಿ ಶಿಯೋಮಿ ರೆಡ್ಮಿ ಬಡ್ಸ್ 4 ಆಕ್ಟಿವ್ ಇಯರ್‌ಬಡ್ಸ್‌ ಅಮೆಜಾನ್‌ನಲ್ಲಿ ಆಫರ್‌ ಬೆಲೆ ಈಗ 1,199ರೂ. ಆಗಿದೆ. ಇನ್ನು ಇದು ಏರ್ ವೈಟ್ ಮತ್ತು ಬಾಸ್ ಬ್ಲ್ಯಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Redmi Buds 4 Active massive price down on amazon. offer price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+