ಇದೇ ಫೆಬ್ರವರಿ 20 ರಂದು ರೆಡ್ಮಿಯ ಈ ಹೊಸ ಡಿವೈಸ್ ಖರೀದಿಗೆ ಲಭ್ಯ!
ರೆಡ್ಮಿ ಸಂಸ್ಥೆಯ ಹೊಸ ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಡಿವೈಸ್ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಇದೇ ಫೆಬ್ರುವರಿ 20 ರಂದು ಮಾರಾಟ ಪ್ರಾರಂಭ ಆಗಿದೆ. ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಈ ಇಯರ್‌ಬಡ್ ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.
ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಡಿವೈಸ್ ಸೇಲ್ ಇದೇ ಫೆಬ್ರುವರಿ 20 ರಂದು ಶುರುವಾಗಿದ್ದು, ಗ್ರಾಹಕರು ಅಮೆಜಾನ್ ಇ ಕಾಮರ್ಸ್ ಹಾಗೂ ಅಧಿಕೃ ಮಿ ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ಇಯರ್‌ಬಡ್ಸ್ 12.4mm ಆಡಿಯೋ ಡೈನಾಮಿಕ್ ಡ್ರೈವರ್‌ಗಳ ಸೌಲಭ್ಯ ಪಡೆದಿದ್ದು, ಅತ್ಯುತ್ತಮ ಆಡಿಯೋ ಅನುಭವ ನೀಡಲಿದೆ.

ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಡಿವೈಸ್ ಆರಂಭಿಕ ಬೆಲೆ 2,999ರೂ. ಆಗಿದೆ. ಇನ್ನು ಈ ಡಿವೈಸ್ ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಹಾಗಾದರೇ ಈ ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ ಬಡ್ಸ್ 5 ಫೀಚರ್ಸ್ ಮಾಹಿತಿ
ರೆಡ್ಮಿ ಬಡ್ಸ್ 5 ಇಯರ್‌ಬಡ್ಸ್ ಡಿವೈಸ್ 12.4mm ಆಡಿಯೋ ಡೈನಾಮಿಕ್ ಡ್ರೈವರ್ ಪಡೆದಿದ್ದು, ಇದು 20Hz ನಿಂದ 20kHz ಫ್ರಿಕ್ವೆನ್ಸಿ ರೆಸ್ಪಾನ್ಸ್ ರೇಟ್ ಅನ್ನು ಪಡೆದಿದೆ. ಇದಲ್ಲದೆ ಅನಗತ್ಯ ಬಾಹ್ಯ ಶಬ್ದವನ್ನು ಕಡಿಮೆ ಮಾಡಲು 46dB ANC ಫೀಚರ್ಸ್ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಇಯರ್‌ಬಡ್ಸ್ ಹೈಬ್ರಿಡ್ ANC ಫೀಚರ್ಸ್ ಪಡೆದಿದ್ದು, 99.5% ಬ್ಯಾಕ್‌ಗ್ರೌಂಡ್ ನಾಯ್ಸ್ ಅನ್ನು ಕಡಿಮೆ ಮಾಡಲಿದೆ.
ಈ ಇಯರ್‌ಬಡ್ಸ್ ಇನ್-ಇಯರ್ ವಿನ್ಯಾಸವನ್ನು ಪಡೆದಿದ್ದು, ಅಂಡಾಕಾರದ ರಚನೆಯ ಚಾರ್ಜಿಂಗ್ ಕೇಸ್ ಪಡೆದಿದೆ. ಹಾಗೆಯೇ AI ಬೆಂಬಲಿತ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಪಡೆದಿದ್ದು, ಮೂರು ಪಾರದರ್ಶಕತೆ ಮೋಡ್‌ಗಳನ್ನು ಪಡೆದುಕೊಂಡಿದೆ. ಅಂದರೆ ಬಳಕೆದಾರರು ಇದರಲ್ಲಿ ಪ್ರಮಾಣಿತ, ವರ್ಧಿತ ಟ್ರೆಬಲ್, ವರ್ಧಿತ ಬಾಸ್ ಮತ್ತು ವರ್ಧಿತ ಧ್ವನಿ ಸೇರಿದಂತೆ ವಿವಿಧ ಆಡಿಯೊ ಎಫೆಕ್ಟ್‌ಗಳನ್ನು ಒಳಗೊಂಡಿದೆ.
ಇನ್ನು ಈ ಡಿವೈಸ್ ಡ್ಯುಯಲ್-ಡಿವೈಸ್ ಪೇರಿಂಗ್ ಅನ್ನು ಪಡೆದಿದ್ದು, ಇದರಿಂದ ಬಳಕೆದಾರರು ಏಕಕಾಲದಲ್ಲಿ ಎರಡು ಸಾಧನಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಅಲ್ಲದೆ ಮೊಬೈಲ್ ಬಳಸಿಯೂ ಇಯರ್‌ಬಡ್‌ಗಳನ್ನು ಪತ್ತೆ ಮಾಡುವುದಕ್ಕೆ ಸಹ ಅವಕಾಶವಿದೆ ನೀಡಲಾಗಿದೆ. ಇದರೊಂದಿಗೆ ಈ ಇಯರ್‌ಫೋನ್‌ಗಳು SBC ಮತ್ತು AAC ಕೊಡೆಕ್‌ಗಳಿಗೆ ಸಪೋರ್ಟ್ ಜೊತೆಗೆ ಬ್ಲೂಟೂತ್ 5.3 ಕನೆಕ್ಟಿವಿಟಿ ಪಡೆದುಕೊಂಡಿದೆ.
ಈ ಇಯರ್‌ಬಡ್ಸ್ ಡಿವೈಸ್ ಪ್ಲೇಬ್ಯಾಕ್ ಮತ್ತು ಶಬ್ದ ರದ್ದತಿಯ ತ್ವರಿತ ನಿಯಂತ್ರಣವನ್ನು ಅನುಮತಿಸಲು ಟಚ್ ಕಂಟ್ರೊಲ್ ಸೌಲಭ್ಯ ಹೊಂದಿದೆ. ಅಲ್ಲದೇ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಒಳಗೊಂಡಿದೆ. ಹಾಗೆಯೇ ಈ ಇಯರ್‌ಬಡ್ಸ್ 480mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇನ್ನು ಇಯರ್‌ಬಡ್‌ಗಳು 54mAh ಬ್ಯಾಟರಿ ಸೌಲಭ್ಯ ಹೊಂದಿವೆ.
ಅಂದಹಾಗೆ ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಪಡೆದುಕೊಳ್ಳಬಹುದು. ಹಾಗೆಯೇ ಚಾರ್ಜಿಂಗ್ ಕೇಸ್ ಮೂಲಕ ಒಂದೇ ಚಾರ್ಜ್‌ನಲ್ಲಿ ಸುಮಾರು 38 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಅವಧಿಯನ್ನು ಪಡೆಯಬಹುದಾಗಿದೆ.
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ರೆಡ್ಮಿ ಬಡ್ಸ್ 5 ಡಿವೈಸ್ 2,999ರೂ. ಬೆಲೆಯನ್ನು ಪಡೆದಿದ್ದು, ಇದು ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಕಲರ್ ಆಯ್ಕೆ ಸಹ ಒಳಗೊಂಡಿದೆ. ಗ್ರಾಹಕರು ಇದೇ ಫೆಬ್ರವರಿ 20 ರಿಂದ Mi.com, ಅಮೆಜಾನ್, ಶಿಯೋಮಿ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಆದರೆ ಲಾಂಚ್ ಆಫರ್ ಪ್ರಯುಕ್ತ ಇದನ್ನು ಕೇವಲ 2,499ರೂ ಬೆಲೆಗೆ ಖರೀದಿಸಬಹುದು.


Click it and Unblock the Notifications








